ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್​ಗೆ ಜಾಮೀನು

ಆರೆಸ್ಸೆಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​ಗೆ (Bail For Kalladka Prabhakar Bhat) ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರು

ಮಾಡಿದ್ದು, ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ಪರವಾಗಿ ಹಿರಿಯ ವಕೀಲರಾದ ಎಸ್ ಬಾಲನ್ ವಾದ ಮಂಡಿಸಿದ್ದರು. ಜನವರಿ

(January) 10ರಂದು ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಜನವರಿ.17ಕ್ಕೆ ಕಾಯ್ದಿರಿಸಿತ್ತು.

ಸ್ಥಳೀಯರಿಬ್ಬರ ಶ್ಯೂರಿಟಿ ಸೇರಿ 2 ಲಕ್ಷ ರೂ ಮೌಲ್ಯದ ಬಾಂಡ್ (Bond) ಆಧಾರದ ಮೇಲೆ ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು

ಮಾಡಿದೆ.‌ ಇದೀಗ, ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸುಪ್ರಿಂ ಕೋರ್ಟ್ (Supreme Court) ಮತ್ತು ಹಲವು ಹೈಕೋರ್ಟ್‌ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್

ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಿಸಿದ್ದ ಅರ್ಜಿದಾರೆ ನಜ್ಮಾ ಚಿಕ್ಕನೇರಳೆ ಅವರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಬಾಲನ್,

ದೇಶದ ಭದ್ರತೆ, ಸೌಹಾರ್ದತೆಗೆ (Bail For Kalladka Prabhakar Bhat) ಈತ ಕಂಟಕವಾಗಿದ್ದಾನೆ.

ಈ ಹಿಂದಿನ ಐಪಿಸಿ (IPC) ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ ಎಂದು

ವಾದಿಸಿದ್ದರು. ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬರು ಗಂಡಂದಿರು, ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ (Permanent) ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು

ಮಾತ್ರ ಅಲ್ಲ, ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ.

ಡಿ.24ರಂದು ಶ್ರೀರಂಗಪಟ್ಟಣದಲ್ಲಿ (Shree Rangapattana) ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿ

ಕಲ್ಲಡ್ಕ ಪ್ರಭಾಕರ್ ಭಟ್, ಹಿಂದೂ ಯುವಕ ಯುವತಿಯರನ್ನು ಲವ್ ಜಿಹಾದ್ ಮಾಡುತ್ತಿದ್ದಾರೆ.ಎಂದು ಪ್ರಶ್ನಿಸಿ ಹೇಳಿಕೆ ನೀಡಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಹೇಳಿಕೆ ನೀಡಿದ್ದಾನೆ.

ಮುಸ್ಲಿಂ ಮಹಿಳೆಯರನ್ನು ಲೈಂಗಿಕವಾಗಿ ನಿಂದಿಸುವುದಲ್ಲದೆ, ಮತ್ತು ಮಹಿಳೆಯ ಮೇಲೆ ಸಾರ್ವಜನಿಕರು ಬಲಪ್ರಯೋಗಿಸುವಂತೆ ಪ್ರಚೋದಿಸುವಹೇಳಿಕೆನೀಡಿದ್ದಕೆ ಮತ್ತು ಮಹಿಳೆಗೆ ಲೈಂಗಿಕ, ಜೀವ ಬೆದರಿಕೆ

ಒಡ್ಡುವ, ಮಹಿಳೆಯರ ಖಾಸಗಿ ವಿಷಯವನ್ನು ಅಶ್ಲೀಲಗೊಳಿಸುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಬಗೆಗೆ ಅಶ್ಲೀಲವಾಗಿ ಮಾತನಾಡಿದ್ದರಿಂದ ಮಹಿಳೆಯರ ಘನತೆಗೆ ಅಡ್ಡಿಯಾದ ಪ್ರಕರಣವಾದ್ದರಿಂದ ಐಪಿಸಿ

ಸೆಕ್ಷನ್ 294, 354, 509, 506 ರ ಅಡಿಯಲ್ಲಿ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ವೃತ್ತಿಪರ ಕ್ರಿಮಿನಲ್ (Criminal) ಆರೋಪಿಯಾಗಿದ್ದಾನೆ. ಜೀವನ ನಿರ್ವಹಣೆಗಾಗಿ ಯಾವುದೇ ನಿರ್ದಿಷ್ಟ ವೃತ್ತಿ ಹೊಂದಿಲ್ಲದ ಈತ ಈ ಹಿಂದೆಯೂ ಸಾಮಾಜಿಕ ಅಶಾಂತಿ,

ಗಲಭೆ ಸೃಷ್ಟಿ, ಮಹಿಳೆಯರ ಅವಹೇಳನ, ಹುಡುಗಿಯರ ಚುಡಾವಣೆ, ಧರ್ಮಗಳ ಅವಹೇಳನ ಪ್ರಕರಣಗಳದ್ದೇ ರೀತಿಯ ಕೃತ್ಯಗಳನ್ನು ಹಲವು ಬಾರಿ ನಡೆಸಿದ್ದಾನೆ.

ಈತನ ವಿರುದ್ದ ಈ ಹಿಂದೆ ಇಂತದ್ದೇ ಪ್ರಕರಣಗಳು ಕರ್ನಾಟಕದ ಹಲವು ಠಾಣೆಗಳಲ್ಲಿ ದಾಖಲಾಗಿದೆ. ಆದರೂ ಬುದ್ದಿ ಕಲಿಯದ ಈತ ತನ್ನ ಚಾಳಿಯನ್ನು ಮುಂದುವರೆಸಿದ್ದು, ಆದ್ದರಿಂದ ಈತನ ವಿರುದ್ದ ರೌಡಿ ಹಾಳೆ

ತೆರೆದು IPC 1860 – 354, 294, 509, 506, 153A, 295, 295A, 298 ಮತ್ತು IPC 12 Contempt of Court Act 1971 ಅಡಿಯಲ್ಲಿ ಪ್ರಕರಣ ದಾಖಲಿಸಿ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ರಕ್ಷಣೆ

ನೀಡಬೇಕು ಎಂದು ದೂರು ನೀಡಲಾಗಿತ್ತು.

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್‌ (Highcourt) ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಭಾಕರ್‌ ಭಟ್‌ ಹೇಳಿಕೆ ಬಗ್ಗೆ ತನಿಖೆ ನಡೆಸಲಾಗುವುದು,

ಅವರನ್ನು ಬಂಧಿಸುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಹೇಳಿತ್ತು.

Exit mobile version