ಒಡಿಶಾ ಪರಿಸರ ಸ್ನೇಹಿ ಗಣೇಶ, ಎಲ್ಲರಿಗೂ ಪ್ರೇರಕ

ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ಒಂದಾಗಿದೆ. ಆದರೆ ಈ ಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಹಾಗೂ  ಪರಿಸರಕ್ಕೆ ಹಾನಿಯಾಗದಂತೆ ಸಹಾನುಭೂತಿಯಿಂದ ಗಣೇಶ ಮೂರ್ತಿಯನ್ನು ಇಟ್ಟು ಆಚರಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ.

ಒಡಿಶಾದ ಸಂಬಲ್ಪುರ ಪಟ್ಟಣದಲ್ಲಿ 89ನೇ ಗಣೇಶ ಚತುರ್ಥಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಅಲ್ಲಿನ ಸ್ಥಳಿಯರು ನಿರ್ಧರಿಸಿದ್ದಾರೆ. ಇದರಲ್ಲಿರುವ ವಿಶೇಷವೆನೆಂದರೆ ಬಾಳೆಹಣ್ಣು ಮತ್ತು ಬಿದಿರುಗಳಿಂದ ಮಾಡಿದ ಪರಿಸರ ಸ್ನೇಹಿ ಬೃಹತ್ ಗಣೇಶಮೂರ್ತಿಯನ್ನು ಗ್ರಾಮದಲ್ಲಿ ಸ್ಥಾಪಿಸಲಾಗಿದೆ ಮತ್ತು ಈ ಮೂರ್ತಿಯಲ್ಲಿನ ಬಾಳೆಹಣ್ಣುಗಳು ಹಣ್ಣಾದಾಗ ಅವುಗಳನ್ನು ಅಗತ್ಯ ವಿರುವವರಿಗೆ ವಿತರಿಸಲಾಗುತ್ತದೆ

ಒಡಿಶಾದ ಸಂಬಲ್ಪುರ ಹಳ್ಳಿಯ ನಟರಾಜ ಕ್ಲಬ್‌ನ ಸದಸ್ಯರು ಈ ಅದ್ಭುತವಾದ ಗಣೇಶಮೂರ್ತಿಯ ತಯಾರಿಸಿದ್ದಾರೆ.  ಈ ಕ್ಲಬ್‌ನ ಸದಸ್ಯರು ಕೆಲವು ವರ್ಷಗಳಿಂದ ಗಣೇಶ ಚತುರ್ಥಿಯನ್ನು ವಿಶೇಷ ಪರಿಸರಸ್ನೇಹಿ ಹಬ್ಬವಾಗಿ ಆಚರಿಸುತ್ತಾ ಪ್ರಸಿದ್ಧತೆಯನ್ನು ಪಡೆದಕೊಂಡಿದ್ದಾರೆ. ಇವರು 2017 ರಿಂದ ಗಣೇಶ ಮೂರ್ತಿಗಳನ್ನು ರಚಿಸಲು ಬಾಳೆಹಣ್ಣು ಮತ್ತು ಇನ್ನಿತರ ವಸ್ತುಗಳನ್ನು ಬಳಸುತ್ತಿದ್ದಾರೆ . ರುದ್ರಾಕ್ಷ, ಸಿಹಿ ಬೂಂದಿ ಲಡ್ಡುಗಳು, ಮೌಲಿ ಎಲೆಗಳು, ತೆಂಗಿನಕಾಯಿಗಳು ಮತ್ತು ಶಂಖದಂತಹ ಇತರ ವಸ್ತುಗಳಿಂದ  ಸಹ ತಯಾರಿಸಿದ್ದಾರೆ. ಈ ನಟರಾಜ ಕ್ಲಬ್ ನವರು ತಯಾರಿಸಿದ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಮುಳಗಿಸಲು ಆಗುವುದಿಲ್ಲ ಬದಲಿಗೆ ಅದನ್ನು ಮರುಬಳಕೆ ಮಾಡಬಹುದು ಅಥವಾ ಖಾದ್ಯ ರೀತಿಯಲ್ಲಿ ಬಳಸಬಹುದಾಗಿದೆ

ಈ ಬಾರಿ ಬಾಳೆ ಹಣ್ಣಿನಿಂದ ಮಾಡಿದ ಬೃಹತ್ ಗಣೇಶ ಮೂರ್ತಿಯು ಗಣೇಶ ಚತುರ್ಥಿಗೆ ನಟರಾಜ ಕ್ಲಬ್‌ ಅವರಿಂದ ಮೂಡಿದ ವಿಶೇಷ ಆಕರ್ಷಣೀಯ ಮೂರ್ತಿಯಾಗಿದೆ. ಇದೊಂದು ಬಹಳ ಪ್ರಭಾವಶಾಲಿ ವಿನ್ಯಾಸ ವಾಗಿ ಮೂಡಿಬಂದಿದೆ ಈ ದಿನಗಳಲ್ಲಿ ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಿಸಿದ ಗಣೇಶನನ್ನು ನೋಡುವುದೇ ಒಂದು ಆಕರ್ಷಣೀಯ. ಈ ಗಣೇಶ ಮೂರ್ತಿಯು ಒರಿಸ್ಸಾದಲ್ಲಿ ರೂಪಿಸಿರುವ ಅತ್ಯಂತ ಅಪರೂಪದ ಬಾಳೆಹಣ್ಣಿನ ಮಹಾಗಣಪತಿಯಾಗಿದ್ದು, ಇಲ್ಲಿನ ವಿಶೇಷವೇನೆಂದರೆ ಗಣಪತಿಯನ್ನು 9 ದಿನ ಪ್ರತಿಷ್ಠಾಪಿಸುತ್ತಾರೆ ನಂತರ ಹತ್ತನೇ ದಿನ ಪ್ರಸಾದ ಮುಖಾಂತರ ಈ ಹಣ್ನನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ.

ಸಂಬಲ್ಪೂರ್ ಹಳ್ಳಿಯ ಪರಿಸರ ಸ್ನೇಹಿ ಗಣೇಶ ಚತುರ್ಥಿಯು ಖಂಡಿತವಾಗಿಯೂ ಇನ್ನಷ್ಟು ವಿಶೇಷ ಮತ್ತು ವೈಭವಯುತವಾಗಿ ಮೂಡಲಿದ್ದು ಇತರರಿಗೂ ಮಾದರಿಯಾಗಲಿದೆ.

Exit mobile version