ಬೆಂಗಳೂರು ಏರ್​ಪೋರ್ಟ್​ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು

ಬೆಂಗಳುರು: ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (Bangalore Officials seized gold) ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದು,

ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರು (Bangalore Officials seized gold) ಸಿಕ್ಕಿಬಿದ್ದಿದ್ದಾರೆ.

ಕೆಂಪೇಗೌಡ ಏರ್​ಪೋರ್ಟ್​​ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ 3.9 ಕೋಟಿ ರೂ. ಮೌಲ್ಯದ 5 ಕೆಜಿ 135 ಗ್ರಾಂ ಚಿನ್ನ ಸಿಕ್ಕಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ 7 ಪ್ರಯಾಣಿಕರನ್ನು

ವಶಕ್ಕೆ ಪಡೆಯಲಾಗಿದೆ.

ಕುವೈತ್, ದುಬೈ, ಅಬುದಾಬಿ, ಬ್ಯಾಂಕಾಕ್​ನಿಂದ 7 ಜನ ಪ್ರಯಾಣಿಕರು ಒಳ ಉಡುಪು, ಮಹಿಳೆಯರ ಪರ್ಸ್, ಹ್ಯಾಂಡ್​ಬ್ಯಾಗ್​ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು. ಅನುಮಾನಗೊಂಡ ಕೆಂಪೇಗೌಡ

ಏರ್​ಪೋರ್ಟ್​​ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಚಿನ್ನ ಪತ್ತೆಯಾಗಿದೆ.

ದರೋಡೆಕೋರರ ಬಂಧನ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಾಗಲಗುಂಟೆ ಕಿರಣ್​(24),

ಮೋಟಗಾನಹಳ್ಳಿ ಮಹದೇವ್​(23), ಬೆಂಗಳೂರಿನ ಮಾಳಗಾಳ ನಿವಾಸಿ ರಕ್ಷಿತ್(23) ಬಂಧಿತರು. ಇನ್ನು ಪರಾರಿಯಾದ ನವೀನ್, ಪರ್ವೇಜ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನು ಓದಿ: KPSC ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿರುವ ಹುದ್ದೆಗಳ ವಿವರ ಇಲ್ಲಿದೆ..

Exit mobile version