ಮಹಾ ಮಳೆಗೆ ಮಹಾನಗರ ತತ್ತರ

ಬೆಂಗಳೂರು ಅ 4 :  ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಭಾನುವಾರ ರಾತ್ರಿ ಸುಮಾರು 10 ಗಂಟಿಯಿಂದ 12ಗಂಟೆವರೆಗೆ ಎಡಬಿಡದೆ ಸುರಿದ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್, ಚಾಮರಾಜಪೇಟೆ, ಹನುಂತನಗರ, ಅಶೋಕನಗರ, ಮಲ್ಲೇಶ್ವರಂ, ರಾಜಾಜಿನಗರ, ಜಯನಗರ, ಬನಶಂಕರಿ, ಜೆ. ಪಿ. ನಗರ, ಮೈಕೋ ಲೇಔಟ್ ಮುಂತಾದ ಪ್ರದೇಶಗಳಲ್ಲಿ ಎರಡು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಹಲವು ತಗ್ಗು ಪರ್ದೇಶಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳು ಜಲಾವೃತವಾಗಿವೆ.  ಮಳೆಯ ಆರ್ಭಟದಿಂದಾಗಿ ಹೆಚ್‌. ಎ. ಎಲ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಭಾರೀ ಹಾನಿ ಮಾಡಿದೆ. ಹೆಚ್. ಎ. ಎಲ್. ಬಳಿಯ ರಮೇಶ್ ನಗರದಲ್ಲಿ ಕಾಪೌಂಡ್ ಕುಸಿದು ಬಿದ್ದಿದೆ. ಇದರಿಂದಾಗಿ 4 ಕಾರು, 3 ಆಟೋ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡವು.

2 ಗಂಟೆಯಲ್ಲಿ ದಾಖಲೆಯ ಮಳೆ : ಭಾನವಾರ ರಾತ್ರಿ 12 ಸುಮಾರಿಗೆ ದಾಖಲಾದ ಮಾಹಿತಿಯಂತೆ ನಾಗರಭಾವಿ 113 ಮಿ. ಮೀ., ರಾಜಾಜಿನಗರ 107 ಮಿ. ಮೀ., ನಂದಿನಿ ಲೇಔಟ್ 85.5 ಮಿ. ಮೀ., ಲಕ್ಕಸಂದ್ರ 68 ಮಿ. ಮೀ., ಮಾರತ್‌ಹಳ್ಳಿ 63 ಮಿ. ಮೀ. ಕೋರಮಂಗಲ 54 ಮಿ. ಮೀ. ಮಳೆಯಾಗಿದೆ.

ಬಿಬಿಎಂಪಿ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ : ಕೋರಮಂಗಲ, ಜೆಸಿನಗರ, ಸಂಪಂಗಿ ರಾಮನಗರ ಮುಂತಾದ ಕಡೆಗಳಲ್ಲಿಯೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಜನರು ಮನೆಗೆ ನುಗ್ಗಿದ್ದ ನೀರನ್ನು ತಾವೇ ತೆರವು ಮಾಡುವ ಕಾರ್ಯವನ್ನು ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಬಿಬಿಎಂಪಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು

Exit mobile version