ಬೆಂಗಳೂರಿನ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಹೊಸ ವ್ಯವಸ್ಥೆ : ಎಂಎ ಸಲೀಂ

Bengaluru : ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಮತ್ತು ಉಲ್ಲಂಘಿಸುವವರಿಗೆ ದಂಡ ಹಾಕಲು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (banglore traffic control) ಅನ್ನು ಬೆಂಗಳೂರು ಟ್ರಾಫಿಕ್‌ ಪೊಲೀಸರು ಪರಿಚಯಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ITMS ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು,

ಪೊಲೀಸರ ಕಾರ್ಯಚಟುವಟಿಕೆಯಲ್ಲಿ ತಂತ್ರಜ್ಞಾನವನ್ನು(banglore traffic control) ಅಳವಡಿಸಲು ಮತ್ತು ಸಂಯೋಜಿಸಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಅಂತಹ ಒಂದು ಉಪಕ್ರಮವೆಂದರೆ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎಂದು ವಿಶೇಷ ಪೊಲೀಸ್ ಕಮಿಷನರ್(ಸಂಚಾರ) ಎಂಎ ಸಲೀಂ(MA Saleem) ಹೇಳಿದ್ದಾರೆ.

ಸಂಚಾರ ನಿಮಯ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುವುದು ಮತ್ತು ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಉಲ್ಲಂಘಿಸುವವರಿಗೆ ಸ್ವಯಂ-ರಚಿಸಿದ ದಂಡದ ಚಲನ್‌ಗಳನ್ನು ಕಳುಹಿಸುವುದು ಐಟಿಎಂಎಸ್‌ನ ಉದ್ದೇಶವಾಗಿದೆ. 

ಇದನ್ನೂ ಓದಿ : https://vijayatimes.com/congress-tweet-bjp/

ಈ ವ್ಯವಸ್ಥೆಯು ವೇಗದ ಮಿತಿ, ಸಿಗ್ನಲ್ ಜಂಪಿಂಗ್, ಸ್ಟಾಪ್ ಲೇನ್, ಹೆಲ್ಮೆಟ್ ಇಲ್ಲದೆ ಸವಾರಿ, ಟ್ರಿಪಲ್ ರೈಡಿಂಗ್, ಮೊಬೈಲ್ ಫೋನ್‌ಗಳನ್ನು ಬಳಸುವುದು ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದನ್ನು ಪತ್ತೆ ಮಾಡುತ್ತದೆ ಮತ್ತು ಅಂತವರಿಗೆ ದಂಡವನ್ನು ವಿಧಿಸುತ್ತದೆ ಎಂದು ಎಂಎ ಸಲೀಂ ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಅವರು ಉದ್ಘಾಟಿಸಿದ ಐಟಿಎಂಎಸ್ ಅನ್ನು ರಾಜ್ಯ ರಾಜಧಾನಿಯ 50 ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ.

ಕ್ಯಾಮೆರಾಗಳು ಸಂಚಾರ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತವೆ.

ಚಲನ್‌ಗಳನ್ನು ಸಿದ್ದಪಡಿಸಿ, ಅದನ್ನು ಉಲ್ಲಂಘಿಸುವವರಿಗೆ SMS ಮೂಲಕ ಮತ್ತು ಕಾಗದದ ಚಲನ್‌ಗಳ ಮೂಲಕ ಕಳುಹಿಸಲಾಗುತ್ತದೆ.

ಈ ಕ್ಯಾಮೆರಾಗಳು 24x7x365 ಕಾಲ ಕಾರ್ಯನಿರ್ವಹಿಸುತ್ತವೆ. ಈ ಸಿಸ್ಟಮ್ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ.

ಇದನ್ನೂ ನೋಡಿ : https://fb.watch/hjRbTXMq8_/ ಮೂಲಭೂತ ಸೌಕರ್ಯಗಳನ್ನು ಕಾಣದ ಗಂಗಾವತಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್.

ಈ ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಬಹುದು ಎಂದು ಸಲೀಂ ಹೇಳಿದ್ದಾರೆ.

ಇನ್ನು ITMS ವ್ಯವಸ್ಥೆಯನ್ನು  ಖಾಸಗಿ ಕಂಪನಿಗಳಾದ ಮ್ಯಾಟ್ರಿಕ್ಸ್ ಸೆಕ್ಯುರಿಟಿ(Matrix Security) ಮತ್ತು ಸರ್ವೆಲೆನ್ಸ್ ಪ್ರೈವೇಟ್ ಲಿಮಿಟೆಡ್  ಮತ್ತು ವಿಡಿಯೋನೆಟಿಕ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿವೆ.

Exit mobile version