ವಿದೇಶದಿಂದ ಬರುವವರಿಗೆ ಅಗತ್ಯಬಿದ್ದರೆ ಕ್ವಾರಂಟೈನ್‌ – ಬೊಮ್ಮಾಯಿ

 ಬೆಂಗಳೂರು ನ.29 : ದಕ್ಷಿಣ ಆಫ್ರಿಕಾದಲ್ಲಿ ಕೊರೊನಾದ ಹೊಸ ತಳಿ ಕಂಡುಬಂದಿರುವ ಹಿನ್ನಲೆಯಲ್ಲಿ ರಾಜ್ಯಕ್ಕೆ ಆಗಮಿಸುವವರಿಗೆ ಅಗತ್ಯಬಿದ್ದರೆ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದರು.

  ರಾಜ್ಯದಲ್ಲಿ(Karnataka) ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರದಿಂದ ಬರುವ ಜನರಿಗೆ ಗಡಿ ಜಿಲ್ಲೆಗಳಲ್ಲಿ ಹಾಗೂ ಹೊಸ ಪ್ರಭೇದದ ವೈರಸ್‌ನ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಬರುವ ಜನರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಸಂದರ್ಭದಲ್ಲೇ ದಕ್ಷಿಣ ಆಫ್ರಿಕಾ(South Africa), ಹಾಂಕಾಂಗ್‌(Hong Kong), ಬೋಟ್ಸಾವನಾ(Botswana) ದೇಶಗಳಲ್ಲಿ ಕೋವಿಡ್‌ ಹೊಸ ಪ್ರಭೇದ ಒಮಿಕ್ರೋನ್‌(Omicron) ಕಾಣಿಸಿಕೊಂಡಿದೆ. ಜತೆಗೆ ಮೈಸೂರು, ಧಾರವಾಡ, ಬೆಂಗಳೂರಿನ ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಆ ಹಾಸ್ಟೆಲ್‌ಗಳನ್ನು ಕ್ವಾರಂಟೈನ್‌(Quarantine) ಮಾಡಲಾಗಿದೆ. ಪ್ರಮುಖವಾಗಿ ಕೇರಳದಿಂದ ಬಂದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳು(Students), ಸಿಬ್ಬಂದಿಯಿಂದ ಹೆಚ್ಚು ಸೋಂಕು ಹರಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಎಲ್ಲಾ ಕಾರಣಗಳಿಂದ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು ಸೇರಿದಂತೆ ಕೇರಳ(Kerala) ಗಡಿ ಜಿಲ್ಲೆಗಳಿಂದ ಬರುವವರಿಗೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ(Covid Test) ಕಡ್ಡಾಯಗೊಳಿಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡುವುದು. ಪಾಸಿಟಿವ್‌ ಬಂದರೆ ಕ್ವಾರಂಟೈನ್‌ ಕೇಂದ್ರ, ಅಗತ್ಯಬಿದ್ದರೆ ಆಸ್ಪತ್ರೆಗೆ(Hospital) ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

Exit mobile version