ಯಾವುದೇ ಸಮಯದಲ್ಲಿ ಬಿಬಿಎಂಪಿ ಚುನಾವಣೆ ಆಗಬಹುದು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು : ವಿಧಾನಸಭೆ ಚುನಾವಣೆ ಮುಗಿದು ಹೊಸ ಆಡಳಿತ ಸ್ಥಾಪನೆಯಾಗಿ ಕೇವಲ ಒಂದು ತಿಂಗಳು ಕಳೆದಿದೆ. ಅದೇನೇ ಇದ್ದರೂ, ಸಚಿವ ರಾಮಲಿಂಗಾರೆಡ್ಡಿ(BBMP elections happen anytime) ಪ್ರಕಾರ

ಮತ್ತೊಂದು ಚುನಾವಣೆ ಎದುರಾಗುವುದು ಈಗಾಗಲೇ ಖಚಿತವಾಗಿದೆ. ಇಂದು ಬಿಬಿಎಂಪಿಯ(BBMP) ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಸಮಾವೇಶವನ್ನು ಕರೆದಿದ್ದು,

ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಕೆಪಿಸಿಸಿ(KPCC) ಭವನದ ಇಂದಿರಾಗಾಂಧಿ ಭವನದಲ್ಲಿ ನಡೆದ ಸಮಾವೇಶ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shiva Kumar) ಅವರ

ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಮ್ಮೇಳನ ಮುಕ್ತಾಯಗೊಂಡಿದೆ. ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಸಂಸದ ಡಿ.ಕೆ.ಸುರೇಶ್, ಎನ್.ಎ.ಹ್ಯಾರಿಸ್, ಎ.ಸಿ.ಶ್ರೀನಿವಾಸ್, ಜಮೀರ್ ಅಹಮದ್, ಪಿ.ಆರ್.ರಮೇಶ್,

ಸಲೀಂ ಅಹಮದ್,ಯು.ಬಿ.ವೆಂಕಟೇಶ್ ಸೇರಿದಂತೆ ಹಲವು ಕಾಂಗ್ರೆಸ್(Congress) ಮುಖಂಡರು ಉಪಸ್ಥಿತರಿದ್ದರು. ಮತ್ತೊಂದೆಡೆ ಸಚಿವರಾದ ಬೈರತಿ ಸುರೇಶ್, ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ, ಕೆ.ಜೆ.ಜಾರ್ಜ್,

ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಸಭೆಗೆ (BBMP elections happen anytime) ಗೈರಾಗಿದ್ದರು.

ಈ ಸಭೆ ಬಿಬಿಎಂಪಿ ಚುನಾವಣೆಯನ್ನು ಕೇಂದ್ರೀಕರಿಸಿದ ಪಕ್ಷದ ಸಭೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. ಯಾವುದೇ ಸಮಯದಲ್ಲಿ ಬಿಬಿಎಂಪಿ ಚುನಾವಣೆ (Election)

ಎದುರಾಗಬಹುದು ಎಂದು ಒಪ್ಪಿಕೊಂಡರೂ ಬಿಬಿಎಂಪಿ ವಿಭಜನೆ ಅಥವಾ ಅತಿಕ್ರಮಣಕ್ಕೆ ಸಂಬಂಧಿಸಿದ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಅವರು ಖಚಿತಪಡಿಸಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬೆಂಗಳೂರಿನ (Bengaluru) ಜನತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಪಣ ತೊಟ್ಟಿತ್ತು.

ಈ ಭರವಸೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವೂ ಇದೇ ಭರವಸೆಯನ್ನು ನೀಡಿದೆ. ಹಾಗಾಗಿ ಮುಂಬರುವ ಬಿಬಿಎಂಪಿ ಚುನಾವಣೆಯ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ : ಎಲೆಕ್ಟ್ರಿಕ್ ಬೈಕ್​ಗಳು ಭರ್ಜರಿ ಸೇಲ್ : ಫ್ರೀ ಕರೆಂಟ್ ಘೋಷಣೆ ಬೆನ್ನಲ್ಲೇ ಎಲೆಕ್ಟ್ರಿಕ್ ವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಎರಡು ವರ್ಷಗಳಿಂದ ನಡೆಯದಿದ್ದ ಬಿಬಿಎಂಪಿ ಚುನಾವಣೆಗೆ ಈಗ ಕಾಲ ಕೂಡಿ ಬಂದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಅಧಿಕಾರ ಸಿಕ್ಕರೆ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಪಣ ತೊಟ್ಟಿದ್ದು,

ಸದ್ಯ ಆ ಭರವಸೆ ಈಡೇರಿಸಲು ಸಿದ್ಧತೆ ನಡೆಸಿದೆ. ಇದಲ್ಲದೆ, ಬೆಂಗಳೂರಿನ ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣಾ ಪ್ರಕ್ರಿಯೆಯನ್ನು ಮುಂದಕ್ಕೆ ತಳ್ಳಲು ರಾಜ್ಯ ಸರ್ಕಾರದೊಳಗಿನ ವರಿಷ್ಠರ ಮನವೊಲಿಸಲು

ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್ಸಿನ ಬಲವಿದೆ.

ಚುನಾವಣೆಗೆ ಹೈ ಕೋರ್ಟ್ಆದೇಶ ನೀಡಿದ್ದರೂ ವಿಳಂಬವಾದ ಚುನಾವಣೆ :

ಬಿಬಿಎಂಪಿ ಕಾರ್ಪೊರೇಟರ್‌ಗಳ ಅಧಿಕಾರಾವಧಿ ಮುಗಿದು ಎರಡು ವರ್ಷಗಳಾಗಿವೆ. ಬಿಜೆಪಿ ಸರಕಾರ ನಾನಾ ನೆಪ ಹೇಳಿ ಬಿಬಿಎಂಪಿ ಚುನಾವಣೆ ವಿಳಂಬ ಮಾಡುತ್ತಿತ್ತು. ಸದ್ಯ ಬಿಬಿಎಂಪಿಯಲ್ಲಿ 198 ವಾರ್ಡ್ ಗಳು ಇವೆ ಆದರೆ

ಆಡಳಿತ ದೃಷ್ಟಿಯಿಂದ 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.ಚುನಾವಣೆ ನಡೆಸಿ ಅಂತ ಈ ಬಗ್ಗೆ ಹೈಕೋರ್ಟ್ ಕೂಡ ಅದೇಶ ನೀಡಿತ್ತು ಆದರೆ ಬಿಜೆಪಿ ಸರ್ಕಾರ ಮತ್ತೆ ಮೀಸಲಾತಿ ಹೆಸರಲ್ಲಿ 6 ತಿಂಗಳ

ಗಡುವು ಕೇಳಿತ್ತು. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ 6 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಮಾಡ್ತಿವಿ ಎಂದು ಹೇಳಿಕೆ ನೀಡಿದ್ರು.

ಇನ್ನು ಕಾಂಗ್ರೆಸ್ ಪಕ್ಷದ ಪಾಲಿಕೆಯ ಮಾಜಿ ಅಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಬಿಬಿಎಂಪಿ ಚುನಾವಣೆ ಅಕ್ಟೋಬರ್ ಅಥವಾ ನವಂಬರ್ ಒಳಗೆ ನಡೆಸ್ತಿವಿ ನಮ್ಮ ನಾಯಕರಿಗೆ ಈ ಬಗ್ಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ :ರಾಜ್ಯ ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸ್ವೀಕರಿಸಲಿದೆ

ಈ ಚುನಾವಣೆಯನ್ನು ನವೆಂಬರ್ ಒಳಗೆ ಮಾಡಿದರೆ ಹೆಚ್ಚು ಸ್ಥಾನ ಗಳಿಸಬಹುದು. ಕೋರ್ಟ್‌ನಲ್ಲಿರುವ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಕೊಂಡು ಚುನಾವಣೆ ನಡೆಸಿ ಎಂದು ಹೈಕಮಾಂಡ್ ಗೆ ಕಾಂಗ್ರೆಸ್ ನಾಯಕರು

ಮನವಿ ಮಾಡಿದ್ದಾರೆ. ಕೈ ನಾಯಕರೇ ಮೊದಲಿನಿಂದಲೂ ಚುನಾವಣೆ ನಡೆಸಲು ಒತ್ತಾಯ ಮಾಡುತ್ತಿದ್ದದ್ದು.ಬಿಬಿಎಂಪಿ ಪಾಲಿಕೆ ಚುನಾವಣೆ ನಡೆದರೆ ಸಾರ್ವಜನಿಕರ ತೊಂದರೆ ನಿವಾರಣೆ,ಸ್ವಲ್ಪ ಮಾಟ್ಟಿಗೆ ವಾರ್ಡ್ಗಳ ಅಭಿವೃದ್ಧಿ

ಅಗಬಹುದು ಎಂಬ ನಿರೀಕ್ಷೆಯಲ್ಲಿರುವ ಜನರು ಸದ್ಯ ಪಾಲಿಕೆಯ ಚುನಾವಣೆಯನ್ನ ಎದುರು ನೋಡ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version