ಪ್ರಧಾನಿ ಆಗಮನ ಹಿನ್ನೆಲೆ ಬೆಂಗಳೂರಿನಾದ್ಯಂತ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಿದ BBMP!

Bengaluru :  ನವೆಂಬರ್ 11 ರಂದು ಕೆಲವು ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಬೆಂಗಳೂರು(Bengaluru) ಭೇಟಿಗೆ ಮುನ್ನವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP Quicks Up) ನಗರದಾದ್ಯಂತ ಹಲವಾರು ದುರಸ್ತಿ ಕಾರ್ಯಗಳನ್ನು ಕೈಗೊಂಡಿದೆ.

ಬೆಂಗಳೂರು ನಗರದ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕೆಂಪೇಗೌಡ (BBMP Quicks Up ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ. 

https://youtu.be/EvPaAyVPqjw ಗುಂಡಿ ಬಿದ್ದ ರಸ್ತೆಗಳು | ಜೀವ ಕೈಯಲ್ಲಿಡಿದು ವಾಹನ ಚಲಾಯಿಸುತ್ತಿರುವ ಚಾಲಕರು.

ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಮತ್ತು ಚೆನ್ನೈ-ಮೈಸೂರು-ಬೆಂಗಳೂರು ಮಾರ್ಗವಾಗಿ ಚಲಿಸಲು ಸಿದ್ಧವಾಗಿರುವ .

ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ : https://vijayatimes.com/bjp-questions-state-congress/

ಬಿಬಿಎಂಪಿಯು ಕಾಡುಗೋಡಿ, ಮೆಜೆಸ್ಟಿಕ್‌ನ ಬೆಳತ್ತೂರು ರಸ್ತೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹಿಂಭಾಗದ ಪ್ರವೇಶ ದ್ವಾರವನ್ನು ನವೀಕರಿಸುವ ಕೆಲಸ ಆರಂಭಿಸಿದೆ.

ನಗರದ ಗುಂಡಿಗಳನ್ನು ತುಂಬುವ ಕಾರ್ಯವನ್ನು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನವೆಂಬರ್ 10 ರಿಂದ ನವೆಂಬರ್ 15 ರವರೆಗೆ ಯೋಜನೆಯ ಗಡುವನ್ನು ಪರಿಷ್ಕರಿಸಿದ್ದಾರೆ.

ಈಗಾಗಲೇ ಬಿಬಿಎಂಪಿ ಕೈಗೊಂಡಿರುವ ಕಳಪೆ ಗುಣಮಟ್ಟದ ಕಾಮಗಾರಿಗಳ ಬಗ್ಗೆ  ಸಾಮಾಜಿಕ ಜಾಲತಾಣಗಳು ಗಮನ ಸೆಳೆದಿದ್ದು, ಇದು ಪ್ರಧಾನಿ ಭೇಟಿಗೆ ಮುನ್ನ ಕೊನೆಯ ಕ್ಷಣದ ಪ್ರಯತ್ನವಾಗಿದೆ.

”ಪ್ರಧಾನಿ ಮೋದಿ ಭೇಟಿಗಾಗಿ ಕಳಪೆ ಗುಣಮಟ್ಟದ ರಸ್ತೆಯನ್ನು ಕೆಲ ದಿನಗಳ ಹಿಂದಷ್ಟೇ ಹೊಸದಾಗಿ ಹಾಕಲಾಗಿದೆ. ಮತ್ತೊಂದು ಹಗರಣಕ್ಕೆ ಸಿದ್ಧರಾಗಿ,” ಎಂದು ಟ್ವಿಟರ್(Twitter) ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

https://youtu.be/EvPaAyVPqjw ಗುಂಡಿ ಬಿದ್ದ ರಸ್ತೆಗಳು | ಜೀವ ಕೈಯಲ್ಲಿಡಿದು ವಾಹನ ಚಲಾಯಿಸುತ್ತಿರುವ ಚಾಲಕರು.

ಇದು ಬೆಂಗಳೂರಿನ ರಸ್ತೆ, ಭಾರತದ ಸಿಲಿಕಾನ್ ಕಣಿವೆ ಫ್ಲಿಪ್‌ಕಾರ್ಟ್ ಕಚೇರಿಯ ಎದುರು,

ಕಳೆದ ಕೆಲವು ದಿನಗಳ ಹಿಂದೆ ತಾಯಿ ತನ್ನ ಮಗಳನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗುವಾಗ ಸೇರಿದಂತೆ ಮೂರು ಜನರು ಅಪಘಾತಕ್ಕೀಡಾಗಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿ ವಿಡಿಯೋ ಶೇರ್‌ ಮಾಡಿದ್ದಾರೆ.

Exit mobile version