ಸಾರ್ವಜನಿಕರಿಗೆ ಮತ್ತೆ ಸುವರ್ಣಾವಕಾಶ : ಬೆಂಗಳೂರಿನ ರಸ್ತೆ ಗುಂಡಿಯ ಬಗ್ಗೆ ದೂರು ಸಲ್ಲಿಸಲು ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ರೀ-ಲಾಂಚ್

Bengaluru : ಬೆಂಗಳೂರಿನ ನಾಗರಿಕ ಸಂಸ್ಥೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಭಾಗಿತ್ವದಲ್ಲಿ ಮೂರು ವರ್ಷಗಳ ನಂತರ ಸಾರ್ವಜನಿಕರಿಗಾಗಿ ಜನವರಿ 1 ರಂದು ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ (bbmp relaunched application) ಮರುಪ್ರಾರಂಭವಾಗಲಿದೆ.

‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ ಅನ್ನು ಮೊದಲ ಬಾರಿ 2017ರಲ್ಲಿ ಐದು ವರ್ಷಗಳ ಹಿಂದೆಯೇ ಪ್ರಾರಂಭಿಸಲಾಯಿತು. ಆದರೆ ಅದರಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ನೋಡಿ: https://fb.watch/hBjkvHQhFF/

ಈ ವರ್ಷದ ಮೇ ತಿಂಗಳಲ್ಲಿ ಈ ಅಪ್ಲಿಕೇಶನ್ ಅನ್ನು ಮರು ಬಿಡುಗಡೆ (bbmp relaunched application) ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ ಅಪ್ಲಿಕೇಶನ್ ನಲ್ಲಿ ಇನ್ನೂ ಹೆಚ್ಚಿನ ನವೀಕರಣಗಳ ಅಗತ್ಯವಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರಿಂದ ಬಿಡುಗಡೆ ಕಾರ್ಯ ವಿಳಂಬವಾಗಿದೆ.

ಆದರೆ ಇದೀಗ ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ನವೀಕರಣ ಮಾಡಿ ಮರು ಬಿಡುಗಡೆ ಮಾಡಲಾಗುತ್ತಿದೆ.

ಇನ್ನು ಈ ಕುರಿತು ಟ್ವೀಟ್‌ಮಾಡಿರುವ ಉದ್ಯಮಿ ಕಿರಣ್ ಮಜುಂದಾರ್ ಶಾ (Kiran Mazumdar Shaw) “ಬಿಬಿಎಂಪಿ ಜನವರಿ 1ರಿಂದ ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ ಅನ್ನು ಮರು ಪ್ರಾರಂಭಿಸಲು ಚಿಂತಿಸಿದ್ದೇನೆ.

https://vijayatimes.com/tajmahal-received-tax-notice/


ಈ ಆ್ಯಪ್‌ ಬೆಂಗಳೂರು (Bengaluru) ನಾಗರಿಕರು ಸರಿಪಡಿಸಬೇಕಾದ ಗುಂಡಿಗಳ ವಿಚಾರವಾಗಿ ವರದಿಮಾಡಬಹುದು. ಈ ಮಾದರಿ ಇತರ ನಗರಗಳಿಗೆ ಒಂದು ಉದಾಹರಣೆಯಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/jaggesh-about-sudeep-darshan/

ಇನ್ನು ಕಿರಣ್ ಮಜುಂದಾರ್ ಶಾ ಅವರು ಈ ಹಿಂದೆ ಬೆಂಗಳೂರಿನ ಮೂಲಸೌಕರ್ಯ ಕುಸಿಯುತ್ತಿರುವ ಬಗ್ಗೆ ಧ್ವನಿ ಎತ್ತಿದ್ದರು. ನಗರದ ರಸ್ತೆಗಳನ್ನು ಸರಿಪಡಿಸಲು ಅಮೇರಿಕನ್ ರೋಡ್ ಪ್ಯಾಚ್ ಹೊಂದಿರುವ ತಂತ್ರಜ್ಞಾನವನ್ನು ಬಳಸುವಂತೆ ಸೂಚಿಸಿದ್ದರು.

ಈ ಲೋಪದೋಷಗಳಿಗೆ ಬಿಬಿಎಂಪಿ ಮತ್ತು ಬಿಡಿಎ(BDA) ಅಧಿಕಾರಿಗಳಿಗೆ ಏಕೆ ಶಿಕ್ಷೆಯಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Exit mobile version