ಬೆಂಗಳೂರಿನಲ್ಲಿ ಜಾರಿಯಾಗುತ್ತಾ ನೈಟ್ ಕರ್ಪ್ಯೂ ?

ಬೆಂಗಳೂರು, ಡಿ. 2: ಟೆಕ್ನಿಕಲ್ ಅಡ್ವೈಸರ್ ಸಮಿತಿ (ಟಿಎಸಿ) ನೀಡಿದ ವರದಿ ಹೊಸ ವರ್ಷಾಚರಣೆಯ ಯೋಜನೆಯಲ್ಲಿದ್ದವರಿಗೆ ಶಾಕ್ ನೀಡಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜನವರಿಯಿಂದ ಫೆಬ್ರವರಿ 2021ರ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ತಾಂತ್ರಿಕ ಸಲಹಾ ಸಮಿತಿ ವರದಿ ಮಾಡುವುದರ ಮೂಲಕ  ತಿಳಿಸಿದೆ. ಅಲ್ಲದೇ ಡಿಸೆಂಬರ್ 26ರಿಂದ ಜನವರಿ 1ರವರೆಗೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿ ಮಾಡುವಂತೆಯೂ ಸಲಹೆ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಕೊರೋನಾ ಎರಡನೇ ಅಲೆಯ ಅಬ್ಬರ ಹಿನ್ನಲೆಯಲ್ಲಿ ನೈಟ ಕರ್ಪ್ಯೂ ಜಾರಿಯಾಗಲಿದೆ ಎನ್ನಲಾಗುತ್ತಿದೆ.

 7 ದಿನಗಳ ಕಾಲ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಮಾನಿಟರಿಂಗ್ ಮಾಡುವ ತುರ್ತು ಅಗತ್ಯವಿದೆ ಎಂಬುದಾಗಿ ತಿಳಿಸಿದೆ. ಇನ್ನೂ ಜನವರಿಯಿಂದ ಫೆಬ್ರವರಿ 2021ರ ವೇಳೆಯಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ರಾಜ್ಯದಲ್ಲಿ ಶುರುವಾಗಲಿದೆ. ಹೀಗಾಗಿ ಫೆಬ್ರವರಿ 2021ರ ಕೊನೆಯ ವರೆಗೆ ಕನಿಷ್ಠ 1.25 ಲಕ್ಷ ಪರೀಕ್ಷೆಯನ್ನು ಪ್ರತಿ ದಿನ ನಡೆಸುವಂತೆ ಸೂಚನೆ ನೀಡಿದೆ. 1 ಲಕ್ಷ ಆರ್ ಟಿ- ಪಿಸಿಆರ್ ಪರೀಕ್ಷೆ ನಡೆಸುವಂತೆಯೂ ಸಲಹೆ ಮಾಡಿದೆ.

ಇದಷ್ಟೇ ಅಲ್ಲದೇ ಕಳೆದ ಅಕ್ಟೋಬರ್ 2020ರಂದು ರಾಜ್ಯದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮ ಕೈಗೊಂಡಂತೆಯೇ ಜನವರಿ ಮೊದಲ ವಾರದಲ್ಲಿಯೇ ಬೆಡ್ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ. ಐಸಿಯು,ಹಾಗೂ ವೆಂಟಿಲೇಟರ್ ಗಳನ್ನು ಕಾಯ್ದಿರುವಂತೆ ತಿಳಿಸಿದೆ.

Exit mobile version