ಬೆಂಗಳೂರಿನಲ್ಲಿ ಯುಕೆ ವೈರಸ್ ಭೀತಿ

ಬೆಂಗಳೂರು, ಡಿ. 26: ರಾಜ್ಯದಲ್ಲಿ ಯುಕೆ ವೈರಸ್ ಭೀತಿ ಆರಂಭಗೊಂಡಿದೆ. ಈಗಾಗಲೇ ಯುಕೆಯಿಂದ ರಾಜ್ಯಕ್ಕೆ ಬಂದಂತಹ 1,638 ಜನರಲ್ಲಿ 14 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇದರ ನಡುವೆ ಬೆಂಗಳೂರಿಗೆ ಯುಕೆಯಿಂದ ಬಂದ ಅನೇಕರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದಂತಾಗಿದೆ. ಹೀಗಾಗಿ ಬೆಂಗಳೂರಿನ ಮೂಲೆ ಮೂಲೆಗೂ ಹಬ್ಬುತ್ತಾ ಯುಕೆ ವೈರಸ್ ಎಂಬ ಭೀತಿ ಎದುರಾಗಿದೆ. ಯು ಕೆ ಯಿಂದ ಬಂದವರ ವಿಳಾಸ ಗೊತ್ತಾದರೂ, ಅವರ ವಿಳಾಸಕ್ಕೆ ತೆರಳಿ ನೋಡಿದ್ರೇ.. ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಇತ್ತ ಬಿಬಿಎಂಪಿ ಅಧಿಕಾರಿಗಳು ಯುಕೆಯಿಂದ ನಗರಕ್ಕೆ ವಾಪಾಸ್ ಆದಂತವರ ಪತ್ತೆ ಕಾರ್ಯಕ್ಕೆ ಹರಸಾಹಸ ಪಡುತ್ತಿದ್ದಾರೆ. 2ನೇ ಲೀಸ್ಟ್ ನಲ್ಲಿ ಇನ್ನೂ 151 ಜನರು ಪತ್ತೆಯಾಗಿಲ್ಲ. ಇಂತಹ 151 ಮಂದಿಯ ಹುಟುಕಾಟದಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರತರಾಗಿದ್ದು ಕಾನೂನು ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಹೀಗಾಗಿ ನಾಪತ್ತೆಯಾಗಿರುವ ಯುಕೆಯಿಂದ ಬಂದಂತವರ ಪತ್ತೆಗಾಗಿ ಪೋನ್ ನಂಬರ್ ಟ್ರೇಸ್ ಮಾಡೋದಕ್ಕೂ ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿಯೂ ಬಿಬಿಎಂಪಿ ಸಿಹೆಚ್‌ಓ ವಿಜಯೇಂದ್ರ ಮಾಹಿತಿ ನೀಡಿದ್ದಾರೆ.

Exit mobile version