ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ‌12ರಿಂದ‌ ಜ.1ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ‌ ಜಾರಿ

ಬೆಂಗಳೂರು, ಡಿ. 31: ಕೊರೊನಾ ಆತಂಕದ ನಡುವೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ ಆದೇಶದಲ್ಲಿ ಬದಲಾವಣೆಯಾಗಿದ್ದು, ಸೆಕ್ಷನ್ 144 ಈ ದಿನ(ಡಿ.31) ಮಧ್ಯಾಹ್ನ 12.00 ಗಂಟೆಯಿಂದ ಪ್ರಾರಂಭವಾಗಿ ಜನವರಿ 1, ಬೆಳಗ್ಗೆ 6.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಉಳಿದಯ ನಿಯಮ, ನಿರ್ಬಂಧಗಳು ಈ ಮೊದಲಿನ ಆದೇಶದಂತೆ ಅನ್ವಯವಾಗುತ್ತವೆ. ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕಾಗಿ ವಿನಂತಿ. ಇನ್ನೂ ಆಫೀಸ್, ಅಂಗಡಿಗಳು ಮುಂತಾದ ವಾಣಿಜ್ಯ ವಹಿವಾಟುಗಳಿಗೆ ಯಾವುದೇ ನಿಷೇಧವಿರುವುದಿಲ್ಲ, ಸಾಮಾನ್ಯ ದಿನಗಳಂತೆಯೇ ಅವು ಕಾರ್ಯವಹಿಸಲಿವೆ.

ಆದರೆ ಯಾವುದೇ ರೀತಿಯ ಗುಂಪುಗೂಡುವಿಕೆ, ಆಚರಣೆಗಳು ಸಾರ್ವಜನಿಕವಾಗಿ ರಸ್ತೆಗಳಲ್ಲಿ, ಪಾರ್ಕ್, ಪ್ಲೇಗ್ರೌಂಡ್ ಮುಂತಾದ ಕಡೆಗಳಲ್ಲಿ ನಿಷೇಧವಿರುತ್ತದೆ ಎಂದು ನಗರ ಪೊಲೀಸ್ ‌ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

Exit mobile version