‘ವಂದೇ ಭಾರತ್ ರೈಲಿನಲ್ಲಿ’ ಕೊಳಲಿನಲ್ಲಿ ವಂದೇ ಮಾತರಂ ಟ್ಯೂನ್ ನುಡಿಸಿದ ಬೆಂಗಳೂರಿನ ವಿದ್ಯಾರ್ಥಿ ; ವೀಡಿಯೋ ವೈರಲ್

Bengaluru : ದಕ್ಷಿಣ ಭಾರತಕ್ಕೆ ಬಂದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್(Bengaluru Boy Flute Video) ರೈಲಿನಲ್ಲಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ತನ್ನ ಕೊಳಲಿನಲ್ಲಿ ವಂದೇ ಮಾತರಂ(Vande Matharam) ಟ್ಯೂನ್ ನುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್(Viral) ಆಗುತ್ತಿದೆ.

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಶುಕ್ರವಾರ ಚಾಲನೆ ನೀಡಿದರು.

ಈ ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸಲು ಸಜ್ಜಾಗಿದೆ. ಭಾರತೀಯ ರೈಲ್ವೆ ಖಾತೆಗಳ ಸೇವೆ (Bengaluru Boy Flute Video) ಅಧಿಕಾರಿ ಅನಂತ್ ರೂಪನಗುಡಿ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

“ಬೆಂಗಳೂರಿನ 12ನೇ ತರಗತಿ ವಿದ್ಯಾರ್ಥಿ ಅಪ್ರಮೇಯ ಶೇಷಾದ್ರಿ ಅವರು ತಮ್ಮ ಕೊಳಲಿನಲ್ಲಿ ಅದ್ಭುತವಾದ ವಂದೇ ಮಾತರಂ ರಾಗವನ್ನು ನುಡಿಸುತ್ತಿದ್ದಾರೆ! ಎಂದು ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ.

https://youtu.be/UbL-CISoVPY ಪ್ರಧಾನಿ ಬರ್ತಾರೆ ಅಂದ್ರೆ ರಾತ್ರೋರಾತ್ರಿ ರಸ್ತೆಗೆ ಡಾಂಬಾರ್ ಹಾಕ್ತಾರೆ, ನಾವು ಕೇಳಿದ್ರೆ ಯಾಕೆ ಮಾಡಲ್ಲ?

ಈ ಒಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದುವರೆಗೆ ಸುಮಾರು 4,900 ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಬೆಂಗಳೂರಿನಿಂದ ಆರಂಭಗೊಂಡ ವಂದೇ ಭಾರತ್ ರೈಲಿನೊಳಗೆ ಪ್ರಥಮ ಪ್ರಯಾಣವನ್ನು ಪಡೆಯಲು ಅನೇಕರು ಮುಂಗಡ ಟಿಕೆಟ್ ಖರೀದಿಸಿ, ಪ್ರಯಾಣವನ್ನು ಅನುಭವಿಸಿದರು.

ಈ ಪೈಕಿ ಅನೇಕರು ತಮ್ಮ ಪ್ರಯಾಣವನ್ನು ಲೈವ್ ಮಾಡಿಕೊಳ್ಳುವ ಮುಖೇನ ಸಂತಸ ಪಟ್ಟಿದ್ದಾರೆ. ಇದೇ ರೀತಿ ಬೆಂಗಳೂರಿನ ವಿದ್ಯಾರ್ಥಿ ಅಪ್ರಮೇಯ ಶೇಷಾದ್ರಿ(Apremaya Sheshadri) ವಂದೇ ಭಾರತ್ ರೈಲಿನೊಳಗೆ ವಂದೇ ಮಾತರಂ ರಾಗವನ್ನು ತಮ್ಮ ಕೊಳಲಿನ ಮೂಲಕ ನುಡಿಸಿದ್ದಾರೆ.

ಶೇಷಾದ್ರಿ ಕೊಳಲು ನುಡಿಸಲು ಆರಂಭಿಸಿದ ವೇಳೆ ಪ್ರಯಾಣಿಕರು ನಗುಮೊಗದಿಂದ ಆಲಿಸಿರುವುದು ವೀಡಿಯೊದಲ್ಲಿ ಕಾಣಬಹುದು.

ವೀಡಿಯೊದಲ್ಲಿ ರೈಲಿನ ಒಳಭಾಗವನ್ನು ಕೂಡ ಗಮನಿಸಬಹುದು, ಇದು ವಿಮಾನದಂತೆ ಕಾಣುತ್ತದೆ ಎಂದು ನೆಟಿಜನ್‌ಗಳು ತಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಚೇರ್ ಕಾರ್‌ನ ಸೌಂದರ್ಯವು ಅದ್ಭುತವಾಗಿದೆ ಎಂದು ಟ್ವಿಟರ್ ಬಳಕೆದಾರರು ಅಭಿಪ್ರಾಯಿಸಿದ್ದಾರೆ.

ಕಮೆಂಟ್ ನೋಟ : “ಸರ್ ನಾನು ಈ ವಂದೇ ಭಾರತ್ ಉಪಕ್ರಮವನ್ನು ಪ್ರೀತಿಸುತ್ತೇನೆ. ಇದು ನಮ್ಮ ರೈಲುಗಳಿಗೆ ಆಧುನಿಕ ನೋಟವನ್ನು ನೀಡುತ್ತದೆ.

ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಶತಾಬ್ದಿಗಳಲ್ಲಿ ಅದು ಹೇಗೆ ಗಮನಾರ್ಹ ಸುಧಾರಣೆಯಾಗಿದೆ ಎಂದು ನನಗೆ ಕಾಣುತ್ತಿಲ್ಲ.

https://twitter.com/Ananth_IRAS/status/1591040882685673473?s=20&t=PhgL69erRSp4IU5eVTAlFA

ಇದು ಸೊಗಸಾಗಿ ಕಾಣಿಸುತ್ತದೆ. ಆದರೆ ಶತಾಬ್ದಿಗಳಲ್ಲಿ ಸಾಮಾನ್ಯ ಎಸಿ ಚೇರ್ ಕಾರ್‌ಗಳಂತೆ ಆಸನಗಳು ಸಹ ಆರಾಮದಾಯಕವಲ್ಲ, ”ಎಂದು ಮತ್ತೋರ್ವ ಬಳಕೆದಾರರು ಕಮೆಂಟ್ ಮೂಲಕ ತಿಳಿಸಿದ್ದಾರೆ.

ಗಂಟೆಗೆ ಸರಾಸರಿ 75 ರಿಂದ 77 ಕಿಲೋಮೀಟರ್ (kmph) ವೇಗದಲ್ಲಿ ಚಲಿಸುವ ಈ ರೈಲು ದೇಶದಲ್ಲಿ ಇಲ್ಲಿಯವರೆಗೆ ಪ್ರಾರಂಭಿಸಲಾದ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಈ ರೈಲು ಮಂದಗತಿಯಲ್ಲಿ ಸಾಗುತ್ತದೆ.

Exit mobile version