2019ರ ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ ಬೆಂಗಳೂರಿನ ವ್ಯಕ್ತಿಗೆ 4 ವರ್ಷ ಜೈಲು, 10,000 ದಂಡ!

Bengaluru : ಇಂಡಿಯಾ ಟುಡೇ(India Today) ಸುದ್ದಿವಾಹಿನಿ ಪ್ರಕಟಿಸಿದ ವರದಿಯ ಅನುಸಾರ, ಪುಲ್ವಾಮಾ ಭಯೋತ್ಪಾದಕ(Pulwama Terrorist Attack) ದಾಳಿಯನ್ನು ಸಂಭ್ರಮಿಸಿದ ಬೆಂಗಳೂರಿನ(Bengaluru Man Arrested) 22 ವರ್ಷದ ದುಷ್ಕರ್ಮಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿದೆ.

ಆರೋಪಿ, ಬೆಂಗಳೂರಿನ ಕಚರ್ಕನಹಳ್ಳಿ ಪ್ರದೇಶದ ಫೈಜ್ ರಶೀದ್ ಎಂದು ಹೇಳಲಾಗಿದೆ.

2019ರ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ ವೀಡಿಯೊಗೆ ಅಪಹಾಸ್ಯ ಕಮೆಂಟ್ ಮಾಡುವ ಮೂಲಕ ಸಂಭ್ರಮಿಸಿದ್ದಾನೆ ಎನ್ನಲಾಗಿದೆ.

ಭಯೋತ್ಪಾದಕ ದಾಳಿಯನ್ನು ಆಚರಿಸುವ(Bengaluru Man Arrested) ಮತ್ತು ಸೇನೆಯನ್ನು ಅಪಹಾಸ್ಯ ಮಾಡಿರುವುದಾಗಿ ಆರೋಪ ವ್ಯಕ್ತವಾಗಿದೆ.

ವಿವಿಧ ಮಾಧ್ಯಮಗಳ ಪೋಸ್ಟ್‌ಗಳಲ್ಲಿ ರಶೀದ್ 23 ಕಾಮೆಂಟ್‌ಗಳನ್ನು(Comments) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿಶೇಷ ನ್ಯಾಯಾಲಯವು ದುಷ್ಕರ್ಮಿಯ ವಿರುದ್ಧ ಈ ಬಗ್ಗೆ ತೀರ್ಪು ಪ್ರಕಟಿಸಿದ್ದು,

https://fb.watch/gwOQOjxw-x/ ನಮ್ಮ ಕರ್ನಾಟಕ ಬಾವುಟದ ಸಂಕೇತ ಏನು ಗೊತ್ತಾ ?

ಆರೋಪಿಗೆ 10 ಸಾವಿರ ದಂಡ, 4 ವರ್ಷ ಜೈಲುವಾಸ ಶಿಕ್ಷೆಯನ್ನು ವಿಧಿಸಿದೆ. 2019 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರು.

ಆರೋಪಿಯು ಪುಲ್ವಾಮಾ ದಾಳಿಯ ವೀಡಿಯೊಗೆ ಒಂದು ಅಥವಾ ಎರಡು ಬಾರಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿಲ್ಲ.

ಬದಲಾಗಿ ಅನೇಕ ಬಾರಿ ಹಲವು ವೀಡಿಯೊಗಳಿಗೆ ಮಾಡಿದ್ದಾನೆ. ಫೇಸ್‌ಬುಕ್‌ನಲ್ಲಿ ಎಲ್ಲಾ ಸುದ್ದಿ ವಾಹಿನಿಗಳು ಹಾಕಿದ್ದ ವೀಡಿಯೊಗಳಿಗೆ ಕಾಮೆಂಟ್‌ಗಳನ್ನು ಮಾಡಿದ್ದಾನೆ.

ಅತಿ ಮುಖ್ಯವಾಗಿ ಈತ ಅನಕ್ಷರಸ್ಥ ಎಂದು ಹೇಳುವಂತಿಲ್ಲ, ಕಾರಣ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂಬುದು ಗಮನಾರ್ಹ.

ತನ್ನ ಫೇಸ್‌ಬುಕ್(Facebook) ಖಾತೆಯಲ್ಲಿ ಉದ್ದೇಶಪೂರ್ವಕವಾಗಿ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಆರೋಪಿ 24 ಕ್ಕೂ ಹೆಚ್ಚು ಬಾರಿ ಕಮೆಂಟ್ ಮಾಡಿ, ವೀರ ಯೋಧರನ್ನು, ಭಾರತವನ್ನು ಅಪಹಾಸ್ಯ ಮಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯಾಯಾಲಯ,

ಇದನ್ನೂ ಓದಿ : https://vijayatimes.com/cm-about-kannada-language/

ತನ್ನ ಅಭಿಪ್ರಾಯದಲ್ಲಿ, ಕ್ರಮವಾಗಿ ಐಪಿಸಿಯ ಸೆಕ್ಷನ್ 153 ಎ ಮತ್ತು 201ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರೆ ಮತ್ತು ಯುಎ(ಪಿ) ಕಾಯಿದೆಯ ಸೆಕ್ಷನ್ 13ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ, 10 ಸಾವಿರ ರೂ. ದಂಡವನ್ನು ವಿಧಿಸಿದೆ.

Exit mobile version