Bengaluru: ಬೆಂಗಳೂರು (Bescom Mithra server down) ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ ವತಿಯಿಂದ ಜುಲೈ ತಿಂಗಳ ಬಿಲ್ಗಳು ಬೆಸ್ಕಾಂ ಮಿತ್ರ ಮೊಬೈಲ್ ಅಪ್ಲಿಕೇಷನ್ ನಲ್ಲಿ
ಬಿಲ್ ಗಳು ಅಪ್ಡೇಟ್ ಆಗದೆ ಇರುವ ಕಾರಣದಿಂದ ಆನ್ ಲೈನ್ ನಲ್ಲಿ ಬಿಲ್ ಗಳು ಅಪ್ಡೇಟ್ ಆಗದೇ ಬೆಂಗಳೂರು ಒನ್ (Bengaluru One) ಕೇಂದ್ರಗಳಲ್ಲಿಯೂ ಬಿಲ್ ಗಳನ್ನು ಕಟ್ಟಲು ಆಗುತ್ತಿಲ್ಲ.
ಆದರಿಂದ ಗ್ರಾಹಕರು ಬೆಸ್ಕಾ ಕಚೇರಿಗಳನ್ನು ಹುಡುಕಿ ಹೋಗುವ ಪರಿಸ್ಥಿತಿ ಬಂದಿದೆ. ಬೆಂಗಳೂರು ಒನ್ ಕಚೇರಿಗಳಲ್ಲಿ ಬಿಲ್ ಕೌಂಟರ್ (Bill Counter) ಇಲ್ಲದಿರುವುದು ಮತ್ತಷ್ಟು ಸಮಸ್ಯಗೆ ಕಾರಣವಾಗಿದೆ.

ತಮ್ಮ ತಮ್ಮ ಮನೆ ಮನೆಗೆ ಬೆಂಗಳೂರು ವಿದ್ಯತ್ ಸರಬರಾಜು ನಿಯಮಿತ ಮನೆಗಳಿಗೆ ವಿತರಿಸಲಾಗುವ ವಿದ್ಯುತ್ ಬಿಲ್ ಗಳನ್ನು ಅನೇಕ ಮಂದಿ ತಮ್ಮ ತಮ್ಮ ಫೋನ್ಅಪ್ಲಿಕೇಷನ್ (Phone Application)
ಮೂಲಕ ಕಟ್ಟುತ್ತಾರೆ. ಆದರೆ ಜುಲೈ (July) ತಿಂಗಳ ಬಿಲ್ ಗಳಲ್ಲಿ ಸುಮಾರು 11 ಸಾವಿರ ಮನೆಗಳಿಗೆ ಬರಬೇಕಿರುವ ಬಿಲ್ ಬೆಸ್ಕಾಂ ಅಪ್ಲಿಕೇಷನ್ ನಲ್ಲಿ ಅಪ್ಲೋಡ್ (Upload) ಆಗಿರೋದಿಲ್ಲ.
ಕಟ್ಟಿರುವ ಬಿಲ್ ಬೆಸ್ಕಾಂ ಮಿತ್ರದಲ್ಲಿ ಸಿಗುತ್ತಿಲ್ಲ. ಇದರಿಂದ ಗ್ರಾಹಕರು ಪರದಾಡುವಂತಾಗಿದೆ.
ಕಾವೇರಿ ಕಂಟಕ: ಮುಂಗಾರು ಕೈಕೊಟ್ಟು ಬರಗಾಲವಿದ್ರೂ ತಮಿಳುನಾಡಿಗೆ ನೀರು ಹರಿಸಿ ಕಾವೇರಿಯನ್ನು ಬಸಿತವ್ರೆ !
ಈ ಸಮಸ್ಯೆ ಬೆಸ್ಕಾಂ ಮಿತ್ರ ಅಪ್ಲಿಕೇಷನ್ ಗೆ ಮಾತ್ರ ಸೀಮಿತವಾಗಿಲ್ಲ ಎಷ್ಟೊ ಜನ ಗ್ರಾಹಕರು ಆಫ್ ಲೈನ್ ನಲ್ಲಿ ಬಿಲ್ ಕಟ್ಟಲು ಬೆಂಗಳೂರು ಕಚೇರಿಗಳಿಗೆ ತೆರಳಿದ್ದಾರೆ. ಅಲ್ಲಿಯೂ ಸಹ ತಮ್ಮ ಮನೆಯ
ಬಿಲ್ ನಲ್ಲಿರುವ ಆರ್ ಆರ್ ನಂಬರ್ (R R Number) ಅನ್ನು ಎಂಟರ್ ಮಾಡಿ ನೋಡಿದಾಗ ಅಲ್ಲಿಯೂ ಸಹ ಬಿಲ್ ಶೂನ್ಯ ತೋರಿಸುತ್ತಿದೆ. ಹಾಗಾಗಿ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ.
ಆದರಿಂದ ಕಚೇರಿಗಳಿಗೆ ಬಿಲ್ ಕಟ್ಟಲು ಗ್ರಾಹಕರೇ ಹೋಗುವ (Bescom Mithra server down) ಪರಿಸ್ಥಿತಿ ಬಂದಿದೆ.
ಇಷ್ಟು ದಿನ ಆರಾಮಗಿ ಮನೆಯಿಂದಲೇ ಪೊನ್ ಮುಖಾಂತರ ಬಿಲ್ ಕಟ್ಟುತ್ತಿದ್ದ ಗ್ರಾಹಕರು ಇವಾಗ ಕಚೇರಿಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಎಲ್ಲಾ ಕಚೇರಿಗಳಲ್ಲಿ
ಬಿಲ್ ಕಲೆಕ್ಷನ್ ಕೌಂಟರ್ ಗಳು (Bill Collection Counter) ಇಲ್ಲದಿರುವುದು, ಕೆಲವು ಬಿಲ್ ಕೌಂಟರ್ ಕಚೇರಿಗಳನ್ನು ಹುಡುಕಿಕೊಂಡು ಹೋಗತ್ತಿರುವುದು ಮತ್ತಷ್ಟು ಗ್ರಾಹಕರಿಗೆ ಸಮಸ್ಯಯಾಗಿದೆ.
ಬೆಸ್ಕಾಂ ಕಚೇರಿಗಳು ಎಲ್ಲಿ ಎಲ್ಲಿ ಇವೆ ಎಂದು ತಿಳಿಯದ ಗ್ರಾಹಕರಿಗಂತು ಒಂದು ದೊಡ್ಡ ತಲೆನೋವು ಆಗಿದೆ. ಈ ಸಮಸ್ಯೆ ಈಗಲೇ ಸರಿಹೋಗಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು
ಉಲ್ಭಣ ಆಗೋ ಸಾಧ್ಯತೆ ಇದೆ. ಹಾಗಾಗಿ ನೀವು ನಿಮಗೆ ಹತ್ತಿರದಲ್ಲಿ ಇರುವ ಕಚೇರಿಗಳಿಗಳಿಗೆ ಬೇಟಿ ನೀಡಿ ಆಫ್ ಲೈನ್ ಮುಖಾಂತರ ಬಿಲ್ ಪಾವತಿಸಿ.
ನಾಗರಾಜ್.{ಕೆ.ಕಲ್ಲಹಳ್ಳಿ}