ನಾಳೆ ಪಂಜಾಬ್‌ಸಿಎಂ ಭಗವಂತ್‌ ಮಾನ್‌ 2ನೇ ವಿವಾಹ

Bhagwanth Mann

ಪಂಜಾಬ್‌ : ಪಂಜಾಬ್ ಮುಖ್ಯಮಂತ್ರಿ(Punjab Chiefminister) ಭಗವಂತ್ ಮಾನ್(Bhagwanth Mann) ಮತ್ತು ಡಾ. ಗುರ್ಪ್ರೀತ್ ಕೌರ್ ಅವರ ಎರಡನೇಯ ವಿವಾಹ ಸಮಾರಂಭವೂ ನಾಳೆ ನಡೆಯಲಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಆಪ್ತರು ಮತ್ತು ಕುಟುಂಬ ವರ್ಗದವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


ಇನ್ನು ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಆರು ವರ್ಷಗಳ ಹಿಂದೆ ಮೊದಲನೇಯ ಪತ್ನಿಯಿಂದ ವಿಚ್ಚೇದನ(Divorce) ಪಡೆದುಕೊಂಡಿದ್ದರು. ವಿಚ್ಚೇದನ ಪಡೆದ ಆರು ವರ್ಷಗಳ ನಂತರ ಅವರು ಡಾ. ಗುರ್ಪ್ರೀತ್ ಕೌರ್ ಅವರೊಂದಿಗೆ ಎರಡನೇಯ ವಿವಾಹವಾಗುತ್ತಿದ್ದಾರೆ. ಭಗವಂತ್‌ ಮಾನ್‌ ಅವರ ಮೊದಲ ಹೆಂಡತಿ ಮತ್ತು ಮಕ್ಕಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಗವಂತ ಮಾನ್ ಅವರ ಮಕ್ಕಳಿಬ್ಬರೂ ಹಾಜರಿದ್ದರು ಎಂಬುದು ವಿಶೇಷ.


ಶುಭ ಹಾರೈಸಿದ್ದ ಮಾಜಿ ಪತ್ನಿ : ಇನ್ನು ಭಗವಂತ್‌ ಮಾನ್‌ ಅವರ ಮೊದಲನೇಯ ಪತ್ನಿ ಇಂದರ್‌ ಪ್ರೀತ್‌ ಅವರು ಭಗವಂತ್‌ ಮಾನ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಶುಭಕೋರಿದ್ದರು. ಅಮೇರಿಕಾದಿಂದಲೇ ಮಾತನಾಡಿದ್ದ ಅವರು, ನಮ್ಮ ಮಕ್ಕಳಿಬ್ಬರೂ ಭಾರತವನ್ನು ತಲುಪಿದ್ದಾರೆ. ಅವರು ತಮ್ಮ ತಂದೆಯ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲು ತುಂಬಾ ಉತ್ಸುಕರಾಗಿದ್ದಾರೆ. ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿ ಆಗುವ ಬಗ್ಗೆ ತನ್ನ ಪ್ರತಿಕ್ರಿಯೆ “ಅತ್ಯಂತ ಧನಾತ್ಮಕ” ಎಂದು ಹೇಳಿದ್ದರು.

ಇನ್ನು ಮೊದಲನೇಯ ಪತ್ನಿಯಿಂದ ವಿಚ್ಚೇದನ ಪಡೆಯುವಾಗ ಸ್ವಂತ ಕುಟುಂಬಕ್ಕಿಂತ ಪಂಜಾಬ್ ಕುಟುಂಬವನ್ನು ಆರಿಸಿಕೊಂಡಿದ್ದೇನೆ ಎಂದು ಭಗವಂತ್‌ ಮಾನ್‌ ಹೇಳಿಕೊಂಡಿದ್ದರು. ನನ್ನ ಬದುಕಿನ ದೀರ್ಘಕಾಲದ ಸಮಸ್ಯೆಯನ್ನು ನ್ಯಾಯಾಲಯವು ಪರಿಹರಿಸಿದೆ. ನಾನು ನನ್ನ ಎರಡು ಕುಟುಂಬಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಿತ್ತು. ನಾನು ಪಂಜಾಬ್ ಅನ್ನು ಆರಿಸಿಕೊಂಡಿದ್ದೇನೆ. ನನ್ನ ಮುಂದಿನ ಜೀವನವನ್ನು ಪಂಜಾಬ್‌ ಜನತೆಯೊಂದಿಗೆ ಕಳೆಯುತ್ತೇನೆ. ಬದುಕು ಅನೇಕ ತಿರುವುಗಳನ್ನು ಒಳಗೊಂಡಿರುತ್ತದೆ ಎಂದಿದ್ದರು.

Exit mobile version