ಭಾರತ್‌ ಬಂದ್‌ ಯಶಸ್ವಿಗೊಳಿಸಲು ಬಸವರಾಜಪ್ಪ ಕರೆ

ಶಿವಮೊಗ್ಗ ಸೆ 25 :  ದೇಶಾದ್ಯಂತ್ಯಸೆಪ್ಟೆಂಬರ್ 27 ರಂದು ಕಿಸಾನ್ ಮೋರ್ಚಾ ಕರೆ ನೀಡಿರುವ  ಭಾರ‌ತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ, ಬಂದ್ ಯಶಸ್ವಿಗೊಳಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಶಿವಮೊಗ್ಗದ ರೈತ  ಸಂಘದ ಅಧ್ಯಕ್ಷ  ಬಸವರಾಜಪ್ಪ  ತಿಳಿಸಿದರು.

ಈ ಬಗ್ಗೆ ಮಾತನಾಡಿದ ಅವರು ಕೇಂದ್ರದ ಕೃಷಿ ಕಾಯ್ದೆಗಳನ್ನು ಮರಳಿ ಹಿಂಪಡೆಯುವಂತೆ  ಹಾಗೂ  ಸರ್ಕಾರಿ  ಕಂಪನಿಗಳನ್ನು  ಖಾಸಗೀಕರಣ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗವನ್ನು  ಸಹ ಬಂದ್ ಮಾಡಿ  ಬೆಂಬಲ  ಸೂಚಿಸಲಾಗುವುದು ಎಂದರು. ಕೇಂದ್ರ ಸರ್ಕಾರ ಕೃಷಿ ವಲಯವನ್ನೂ ಪರೋಕ್ಷವಾಗಿ ಖಾಸಗೀಕರಣ ಮಾಡಲು ಮುಂದಾಗಿದೆ ಎಲ್ಲರೂ  ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಈ  ನಡೆಯನ್ನು  ಹತ್ತಿಕ್ಕಬೇಕು ಎಂದರು. ಎಪಿಎಂಸಿ ದುರ್ಬಲಗೊಳಿಸಲಾಗಿದೆ. ಕೃಷಿ ಭೂಮಿ ಗುತ್ತಿಗೆ ವ್ಯವಸ್ಥೆ ಸರಿಯಲ್ಲ. ಉದಾರೀಕರಣ, ಜಾಗತೀಕರಣದ ದುಷ್ಪರಿಣಾಮವನ್ನು ಇಂದಿಗೂ ರೈತರು ಅನುಭವಿಸುತ್ತಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಎರಡನೇ ಸ್ವಾತಂತ್ರ್ಯದ ಚಳುವಳಿ ನಡೆಯುತ್ತಿದೆ. ಅದನ್ನು ನಾವು ಯಶಸ್ವಿಗೊಳಿಸಬೇಕಿದೆ ಎಂದು ರೈತರಿಗೆ  ಕರೆ  ನೀಡಿದರು.

ಶಿವಮೊಗ್ಗವನ್ನು ಬೆಳಗ್ಗೆ ಆರು ಘಂಟೆಯಿಂದ ಸಂಜೆ ನಾಲ್ಕರವರೆಗೆ ಬಂದ್ ಮಾಡಲಾಗುತ್ತದೆ ಈ ಸಮಯದಲ್ಲಿ ಆಟೋ ಚಾಲಕರು, ಬೀದಿ ಬದಿಯ ವ್ಯಾಪಾರಿಗಳು ಹಾಗೂ  ಉಳಿದ ಇನ್ನಿತರ ಕ್ಷೇತ್ರದ ವ್ಯಾಪಾರಿಗಳು  ಈ  ಬಂದ್ ನ ಯಶಸ್ಸಿಗೆ  ಕಾರಣರಾಗಬೇಕು ಹಾಗೂ ಹಲವಾರು ಸಂಘಟನೆಗಳು  ಬಂದ್ ಗೆ ಬೆಂಬಲ ಸೂಚಿಸಿದೆ ಎಂದು ಅವರು ತಿಳಿಸಿದರು.

Exit mobile version