ಭಾರತದ ಮೊಟ್ಟ ಮೊದಲ ಖಾಸಗಿ ರೈಲು `ಭಾರತ್ ಗೌರವ್ ಸ್ಕೀಮ್’ ಇದರ ವಿಶೇಷತೆ ಹೀಗಿದೆ

India

ಭಾರತ ಸರ್ಕಾರವು(India Government) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ರೈಲು (Bharat Gourav Scheme first private train) ಸೇವೆಯನ್ನು ಪ್ರಾರಂಭಿಸಿದೆ.

ಹೌದು, ಭಾರತ್ ಗೌರವ್ ಯೋಜನೆಯಡಿ(Bharat Gourav Scheme first private train) ಖಾಸಗಿ ರೈಲುಗಳನ್ನು ಓಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ಇದರ ಭಾಗವಾಗಿ ಮೊದಲ ಖಾಸಗಿ ರೈಲು ಸೇವೆ ದೇಖೋ ಅಪ್ನಾ ದೇಶ್ ಜೂನ್ 14 ರ ಸಂಜೆ 6 ಗಂಟೆಗೆ ರಾಜ್ಯದ ಕೊಯಮತ್ತೂರು(Coimbatore) ಉತ್ತರದಿಂದ ಮಹಾರಾಷ್ಟ್ರದ ಶಿರಡಿ ಸಾಯಿನಗರಕ್ಕೆ ಹೊರಟಿತು.

ರೈಲು ಗುರುವಾರ ಬೆಳಗ್ಗೆ 7.25ಕ್ಕೆ ಶಿರಡಿಯನ್ನು(Shiradi) ತಲುಪಿತು. ಈ ರೈಲು ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ ಮತ್ತು ಮಂತ್ರಾಲಯಂ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುವುದು.

https://vijayatimes.com/bhairav-singh-is-a-environmentalist/

ಸೇಲಂ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ಗೌತಮ್ ಶ್ರೀನಿವಾಸ್ ಅವರು 20 ಬೋಗಿಗಳ ರೈಲನ್ನು ಆಧುನಿಕ ಇಂಜಿನ್ಗಳೊಂದಿಗೆ ತಯಾರಿಸಿದ್ದಾರೆ. ದೇಶದಲ್ಲೇ ಮೊದಲ ಖಾಸಗಿ ರೈಲು ಸೇವೆ ಆರಂಭಿಸಿದ ಕೀರ್ತಿ ದಕ್ಷಿಣ ರೈಲ್ವೆಗೆ ಸಲ್ಲುತ್ತದೆ.

17 ರಂದು ಬೆಳಿಗ್ಗೆ 7.25 ಕ್ಕೆ ಸಾಯಿನಗರ ಶಿರಡಿಯಿಂದ ಹೊರಡುವ ರೈಲು 18 ರಂದು ಮಧ್ಯಾಹ್ನ 12 ಗಂಟೆಗೆ ಕೊಯಮತ್ತೂರು ಉತ್ತರವನ್ನು ತಲುಪಿತು.

ಹಿಂದಿರುಗುವ ಪ್ರಯಾಣದಲ್ಲಿ, ರೈಲು ಮಂತ್ರಾಲಯದಲ್ಲಿ(Manthralaya) 5 ಗಂಟೆಗಳ ಕಾಲ ನಿಂತಿತ್ತು. ಆ ಸಮಯದಲ್ಲಿ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿದರು.

ಮೊದಲ ದಿನ ಈ ರೈಲಿನಲ್ಲಿ 1100 ಮಂದಿ ಪ್ರಯಾಣಿಸಿದ್ದರು, ಐದು ದಿನಗಳ ಕಾಲ ಪ್ಯಾಕೇಜ್ ಟೂರ್ ಅಡಿಯಲ್ಲಿ ಪ್ರಯಾಣಿಸಬಹುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ರೈಲಿನಲ್ಲಿ 1500 ಪ್ರಯಾಣಿಕರು ಪ್ರಯಾಣಿಸುವಷ್ಟು ಸಾಮರ್ಥ್ಯವಿದೆ ಎಂದು ದಕ್ಷಿಣ ರೈಲ್ವೆ ಸಿಪಿಆರ್‌ವೋ ಗುಗನೇಸನ್ ತಿಳಿಸಿದ್ದಾರೆ. ಇದರಲ್ಲಿ ಎಸಿ ಕೋಚ್‌ಗಳು ಹಾಗೂ ಸ್ಲೀಪರ್ ಕೋಚ್‌ಗಳು ಸೇರಿವೆ. 
ಈ ರೈಲಿನಲ್ಲಿ ವೈದ್ಯರು, ರೈಲ್ವೆ ಪೊಲೀಸರು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ, ಎಸಿ ಮೆಕ್ಯಾನಿಕ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಪ್ರಯಾಣದ ವೇಳೆ ಲಭ್ಯವಿರುತ್ತಾರೆ. ಈ ರೈಲಿನಲ್ಲಿ ರುಚಿಕರವಾದ ಸಸ್ಯಾಹಾರಿ ಪದಾರ್ಥಗಳನ್ನು ಸಹ ನೀಡಲಾಗುತ್ತದೆ.
Exit mobile version