ಭಾರತ್ ಬಯೋಟಿಕ್ ಫೆಸಿಲಿಟಿಗೆ ನಾಳೆ ಮೋದಿ ಬೇಟಿ

ಹೈದರಾಬಾದ್, . 27: ವಿಶ್ವಾದ್ಯಂತ ಕೊರೋನಾ ಲಸಿಕೆಗೆ ಪ್ರಯತ್ನಗಳು ನಡೆಯುತ್ತಿದ್ದುಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪೆನಿ ಕೋವಿಡ್ 19 ವಿರುದ್ಧದ ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದೆ. ಕೊವ್ಯಾಕ್ಸಿನ್ ಲಸಿಕೆ ಸಿದ್ಧಗೊಳ್ಳುತ್ತಿರುವ ತೆಲಂಗಾಣದ ಭಾರತ್ ಬಯೋ ಟೆಕ್ ಸಂಸ್ಥೆಗೆ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ನಾಳೆ ಮಧ್ಯಾಹ್ನ ಮೋದಿ ಅವರು ಪೂನಾದಿಂದ ವಿಶೇಷ ವಿಮಾನದಲ್ಲಿ ಹಕೀಂ ಪೇಟ್ ವಾಯು ನೆಲೆಗೆ ಬಂದಿಳಿಯಲಿದ್ದು , ಅಲ್ಲಿಂದ ಸೀದಾ ಭಾರತ್ ಬಯೋ ಟೆಕ್ ಸಂಸ್ಥೆಗೆ ತೆರಳಲಿದ್ದಾರೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಮೂರು ಹಂತದ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಕೊರೊನಾ ಸೋಂಕಿನ ಲಸಿಕೆಯಾಗಿರುವ ಕೊವ್ಯಾಕ್ಸಿನ್ ತಯಾರಿಕೆಯ ಅಂತಿಮ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಇಲ್ಲಿಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ಈಗ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಕಳೆದ 24ರಂದು ನಡೆದ ಪ್ರಧಾನಿಯವರೊಂದಿಗಿನ ವೀಡಿಯೋ ಕಾನರೆನ್ಸ್‍ನಲ್ಲಿ ಕೊರೊನಾ ಲಸಿಕೆ ಕೊ ವ್ಯಾಕ್ಸಿನ್ ಹಂಚಿಕೆ ವಿಚಾರ ಕುರಿತಂತೆ ಮಾತುಕತೆ ನಡೆಸಿರುವುದನ್ನು ಉಲ್ಲೇಖಿಸಬಹುದಾಗಿದೆ.

Exit mobile version