ಅಮೆರಿಕದಲ್ಲಿರುವ ವರ್ಣ ಭೇದ ನೀತಿ ಬೈಡನ್ ಕ್ರಮ

ವಾಷಿಂಗ್ಟನ್, ಜ. 27:  ಅಮೆರಿಕಾದಲ್ಲಿ   ಕಾಡುತ್ತಿರುವ ಅಸಮಾನತೆ  ವರ್ಣಬೇಧ ನೀತಿ ತೊಡೆದು ಹಾಕಲು ಅಧ್ಯಕ್ಷ ಜೋ ಬೈಡನ್ ಅವರು ದೇಶದಾದ್ಯಂತ ಜನಾಂಗೀಯ ಸಮಾನತೆಗೆ ಉತ್ತೇಜನ ನೀಡುವಂತ ಕಾರ್ಯಾದೇಶಗಳಿಗೆ ಸಹಿ ಹಾಕಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವಾರದ ನಂತರ ಶ್ವೇತಭವನದಲ್ಲಿ ಮಂಗಳವಾರ ತಾವು ತೆಗೆದುಕೊಂಡು ಪ್ರಮುಖ ಕ್ರಮಗಳ ಕುರಿತು ಘೋಷಿಸುವ ವೇಳೆ ಅವರು, ಕಳೆದ ವರ್ಷದ ಮೇ ತಿಂಗಳಲ್ಲಿ ಮಿನಿಯಾಪೊಲಿಸ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕಪ್ಪು ವರ್ಣೀಯ ‌ಜಾರ್ಜ್‌ ಫ್ಲಾಯ್ಡ್‌ ಅವರನ್ನು‌ ಹತ್ಯೆ ಮಾಡಿದ್ದ ಘಟನೆಯನ್ನು ಉಲ್ಲೇಖಿಸಿದರು.

ಈ ಘಟನೆಯು ದೇಶದ ಜನರ ಮನಸ್ಸು ಮತ್ತು ಮನಸ್ಥಿತಿಯನ್ನೇ ಬದಲಿಸಿದೆ ಎಂದು ಅವರು ಹೇಳಿದರು.‌ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರ ನಡೆಸುವಾಗ, ಅಮೆರಿಕವು ಆಳವಾದ ಜನಾಂಗೀಯ ಅಸಮಾನತೆ ಮತ್ತು ವ್ಯವಸ್ಥಿತ ವರ್ಣಭೇದ ನೀತಿ ಎದುರಿಸುತ್ತಿರುವುದನ್ನು ನೋಡಿದ್ದೆ. ಇದು ನಮ್ಮ ರಾಷ್ಟ್ರವನ್ನ ಬಹಳ ವರ್ಷಗಳಿಂದ ಕಾಡುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಬೈಡನ್ ತಿಳಿಸಿದರು.

ದೇಶದಲ್ಲಿರುವ ಇಂಥ ವರ್ಣಭೇದ ನೀತಿಯನ್ನು ಬೇರು ಸಹಿತ ಕಿತ್ತು ಹಾಕಿ, ಜನಾಂಗೀಯ ಸಮಾನತೆಯನ್ನು ಮುನ್ನಡೆಸಲು ಒತ್ತು ನೀಡುವುದಾಗಿ ಅವರು ಹೇಳಿದರು.

ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬೇರು ಬಿಟ್ಟಿರುವ ವ್ಯವಸ್ಥಿತ ವರ್ಣಭೇದ ನೀತಿಯನ್ನು ಕಿತ್ತು ಹಾಕುವುದು. ಈ ಮೂಲಕ ರಾಷ್ಟ್ರದಾದ್ಯಂತದ ಕುಟುಂಬಗಳಿಗೆ ತಮ್ಮ ಆಡಳಿತದ ಬದ್ಧತೆಯನ್ನು ಪ್ರದರ್ಶಿಸಲು ಬೈಡನ್ ಆಡಳಿತ ಮುಂದಾಗಿದೆ.

Exit mobile version