ಆಸ್ತಿ ತೆರಿಗೆ ಬಾಕಿ ಆರೋಪ: ರಾಕ್​ಲೈನ್​ ಮಾಲ್​ಗೆ ಬೀಗ ಹಾಕಿದ ಬಿಬಿಎಂಪಿ

Bengaluru: ಕಳೆದ ಕೆಲ ದಿನಗಳಿಂದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಸ್ತಿ (Big Shock for Rockline Mall) ತೆರಿಗೆ ಬಾಕಿ ಉಳಿಸಿಕೊಂಡಿರುವ

ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಪಾಲಿಕ ಕ್ರಮ ಕೈಗೊಳ್ಳುತ್ತಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಇದೀಗ ರಾಕ್ಲೈನ್ ಮಾಲ್ಗೆ (Rock line Mall) ಅಧಿಕಾರಿಗಳು

ಶಾಕ್ ನೀಡಿದ್ದಾರೆ. ಆಸ್ತಿಕರಿಗೆ ಬಾಕಿ ಉಳಿಸಿಕೊಂಡ ಹನಿಯಲ್ಲಿ ಇದೀಗ ರಾಕ್ಲೈನ್ ಮಾಲ್ ಗೆ ಬಿಬಿಎಂಪಿ (Big Shock for Rockline Mall) ಅಧಿಕಾರಿಗಳು ಬೀಗ ಹಾಕಿದ್ದಾರೆ.

ಬೆಂಗಳೂರಿನ ಟಿ ದಾಸರಹಳ್ಳಿಯ (T Dasarahalli) ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ ಗೆ ಇದೀಗ ಬಿಬಿಎಂಪಿ ಬೀಗ ಹಾಕಿದೆ. ಸುಮಾರು 11.15 ಕೋಟಿ ಆಸ್ತಿ

ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ಮಾಲ್ ಗೆ ನೋಟಿಸ್ ನೀಡಿತ್ತು. ಇದೀಗ ಬಾಕಿ ಪಾವತಿಸಿದ ಹಿನ್ನೆಲೆಯಲ್ಲಿ ಮಾಲ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.ರಾಕ್ ಲೈನ್

ಮಾಲ್ ನಟ ಹಾಗೂ ನಿರ್ಮಾಪಕ ನಿರ್ದೇಶಕ ರಾಕ್ಲೈನ್ ವೆಂಕಟೇಶ್ (Rock line Venkatesh) ಒಡೆತನದ ಈ ಮಾಲ್ ತೆರಿಗೆ ಕಟ್ಟದೆ ಬೀಗ ಹಾಕಿದ ಎರಡನೇ ಮಾಲ್ ಆಗಿದೆ.

2023ರ ಡಿಸೆಂಬರ್​ನಲ್ಲಿ ಬಿಬಿಎಂಪಿ 51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಾರಣ ಈ ಹಿಂದೆ ಬಿಬಿಎಂಪಿ ಮಂತ್ರಿ ಸ್ಕ್ವೇರ್ ಮಾಲ್ (Mantri Square)​ಗೆ ಕೂಡ

ಬೀಗಮುದ್ರೆ ಹಾಕಿತ್ತು. 2023ರ ನವೆಂಬರ್ ಮತ್ತು 2024 ರ ಫೆಬ್ರವರಿ ನಡುವೆ 46,318 ಆಸ್ತಿಗಳಿಗೆ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಬಿಬಿಎಂಪಿ

ಕಂದಾಯ ಅಧಿಕಾರಿಗಳು ನಿವೇಶನಗಳನ್ನು ಸೀಲ್ ಮಾಡಿದರೂ ತೆರಿಗೆ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದ 7,203 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಫೆ.13 ರಂದು ಕಾರುಗಳು ಮತ್ತು ಶಾಲಾ ಬಸ್‌ಗಳಂತಹ ಚರ ಆಸ್ತಿಗಳನ್ನು ಮೊದಲ ಬಾರಿಗೆ ಬಿಬಿಎಂಪಿ ಜಪ್ತಿ ಮಾಡಿತ್ತು. ಬಿಬಿಎಂಪಿಯ ಯಲಹಂಕ ವಿಭಾಗದಲ್ಲಿ ನಾಲ್ಕು

ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕಳೆದ ಆರು ತಿಂಗಳಲ್ಲಿ ಬಿಬಿಎಂಪಿ 10,603 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸೀಲ್

(Seal) ಮಾಡಿದೆ. ಆದರೆ, ವಶಪಡಿಸಿಕೊಂಡ ವಾಹನಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ.

ಬಿಬಿಎಂಪಿ ಕಾಯ್ದೆಯಡಿ, ಸ್ಥಿರ ಮತ್ತು ಚರಾಸ್ತಿಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ.ಒಟ್ಟು 500 ಕೋಟಿ ರೂ.ಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ (Property

Tax) ಸುಸ್ತಿದಾರರ ವಿರುದ್ಧ ಬಿಬಿಎಂಪಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ.

ಇದನ್ನು ಓದಿ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ:ಖಾಲಿ ಇರುವ 820ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

Exit mobile version