‘ಅನಾಥ ಮಕ್ಕಳಿಗಾಗಿ ತೊಟ್ಟಿಲು ಕಟ್ಟಿದ ತಾಯಿ’ ಪಾಕಿಸ್ತಾನದ ಹೋರಾಟಗಾರ್ತಿಯ ನಿಧನಕ್ಕೆ ಮೋದಿ ಸಂತಾಪ!

PM

ಅನಾಥರು(Orphans), ನಿರ್ಗತಿಕರು ಮತ್ತು ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಇಡೀ ಬದುಕನ್ನು ಮೀಸಲಿಟ್ಟು, ಹೋರಾಟ ಮಾಡಿದ ‘ಪಾಕಿಸ್ತಾನದ ತಾಯಿ’ ಎಂದೇ ಖ್ಯಾತರಾಗಿದ್ದ ಬಿಲ್ಕಿಸ್ ಈದಿ(Bilquis Edhi) ನಿಧನಕ್ಕೆ ಭಾರತದ(Indian) ಪ್ರಧಾನಿ(Primeminister) ನರೇಂದ್ರ ಮೋದಿ(Narendra Modi) ಅವರು ಸಂತಾಪ ಸೂಚಿಸಿ ಟ್ವೀಟ್(Tweet) ಮಾಡಿದ್ದಾರೆ.

ಬಿಲ್ಕಿಸ್ ಅಬ್ದುಲ್ ಈದಿ ಅವರನ್ನು ‘ಅನಾಥ ಮಕ್ಕಳಿಗಾಗಿ ತೊಟ್ಟಿಲು ಕಟ್ಟಿದ ತಾಯಿ’ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಬಿಲ್ಕಿಸ್ ಈದಿ ಅವರು ದಶಕಗಳಿಂದ ಜಗತ್ತಿನಾದ್ಯಂತ ನಡೆಸಿದ ಮಾನವೀಯ ಕಾರ್ಯಗಳು ಜನರನ್ನು ತಲುಪಿವೆ. ಭಾರತದಲ್ಲಿಯೂ ಅವರ ಪ್ರೀತಿಯನ್ನು ನೆನಪಿಸಿಕೊಳ್ಳುವ ಅಪಾರ ಸಂಖ್ಯೆಯ ಜನರಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಬಿಲ್ಕಿಸ್ ಈದಿ ಅವರು ಮೂಲತಃ ಪಾಕಿಸ್ತಾನದವರು. ಬಿಲ್ಕಿಸ್ ಈದಿ ಅವರು ತಮ್ಮ ಪತಿ ಅಬ್ದುಲ್ ಅವರೊಂದಿಗೆ ಸೇರಿ ‘ಅಬ್ದುಲ್ ಸತರ್ ಈದಿ ಪೌಂಡೇಶನ್’ ಸ್ಥಾಪಿಸಿದರು.

ಆ ಮೂಲಕ ಜಗತ್ತಿನಲ್ಲಿರುವ ಅನಾಥ ಮಕ್ಕಳ ಪಾಲನೆಗೆ ನಿಂತರು. ಮಾನವೀಯ ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ನೊಂದವರ ಬದುಕಿಗೆ ಬೆಳಕಾದರು. ಜಗತ್ತಿನಾದ್ಯಂತ ‘ಈದಿ ಗೃಹಗಳು’ ಸ್ಥಾಪಿಸುವ ಮೂಲಕ ಅನಾಥರಿಗೆ ಆಶ್ರಯ ನೀಡಿದರು ಮತ್ತು ತೊಟ್ಟಿಲು ಇಡುವ ಕಾರ್ಯಕ್ರಮಗಳನ್ನು ರೂಪಿಸಿದರು. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಎಲ್ಲೆಂದರಲ್ಲಿ ಬೀಸಾಡುವ ಬದಲು, ಆ ತೊಟ್ಟಿಲುಗಳಲ್ಲಿ ಮಲಗಿಸುವ ಅವಕಾಶ ನೀಡಿದರು. ಕುಟುಂಬಗಳಿಗೆ ಬೇಡವಾದ ಮಕ್ಕಳನ್ನು ‘ಅಬ್ದುಲ್ ಸತರ್ ಈದಿ ಪೌಂಡೇಶನ್’ ನೋಡಿಕೊಳ್ಳುತ್ತಿದೆ.

ಬಿಲ್ಕಿಸ್ ಈದಿ ಅವರ ಈ ಮಾನವೀಯ ಕಾರ್ಯ ಜಗತ್ತಿನಲ್ಲಿ ಅವರಿಗೆ ಅನೇಕ ಜನರ ಪ್ರೀತಿಯನ್ನು ತಂದುಕೊಟ್ಟಿತು.
ಬಿಲ್ಕಿಸ್ ಈದಿ ಅವರಿಗೆ ಮದರ್ ತೆರೇಸಾ ಮೆಮೋರಿಯಲ್ ಇಂಟರ್‍ನ್ಯಾಷನಲ್ ಅವಾರ್ಡ್, ರಾಮನ್ ಮ್ಯಾಗ್ಸೆಸ್ಸೆ, ಲೆನಿನ್ ಶಾಂತಿ ಪುರಸ್ಕಾರ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಬಿಲ್ಕಿಸ್ ಈದಿ ಅವರು ಕರಾಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದು, ಅವರಿಗೆ 74 ವರ್ಷ ವಯಸ್ಸಾಗಿತ್ತು, ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

Exit mobile version