ಬಿಟ್ ಕಾಯಿನ್ ಹಗರಣದಲ್ಲಿ ದೊಡ್ಡವರ ಹೆಸರಿದೆ – ಡಿ.ಕೆ. ಶಿವಕುಮಾರ್

ಬೆಂಗಳೂರು ಅ 29 : ಬಿಟ್ ಕಾಯಿನ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದ್ದು, ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ. ಯಾರ್ಯಾರದ್ದೋ ಖಾತೆಗೆ ಹಣ ಬಂದಿದೆ ಎಂದು ಕೇಳಿಬರುತ್ತಿದ್ದು, ನಾನು ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು, ಉದ್ಯಮಿಗಳ ಹೆಸರು ಕೇಳಿ ಬರುತ್ತಿರುವುದು ಆಘಾತ ತಂದಿದೆ. ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ. ಅದೇ ಅವರ ಕೆಲಸ ಎಂದು ಹೇಳಿದ್ದಾರೆ.

ಚುನಾವಣೆ ಬೆನ್ನಲ್ಲೇ ನಿಮ್ಮ ಮನೆ ಮೇಲೂ ಐಟಿ ದಾಳಿ ನಡೆದಿದೆ ಎಂಬ ಗಾಳಿಸುದ್ದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಮನೆಗೆ ಯಾವ ಐಟಿ ಅಧಿಕಾರಿಗಳು ಬಂದಿಲ್ಲ. ನನ್ನ ಸ್ನೇಹಿತರ ಧಾರವಾಡದ ಮನೆಗೆ ಹೋಗಿದ್ದಾರೆ. ಅವರು ನನ್ನ ಆಪ್ತರು ಎಂಬ ಬಗ್ಗೆ ಯಾವುದೇ ಅನುಮಾನ ಬೇಡ. ಮೊನ್ನೆ ಬೆಂಗಳೂರಿನಲ್ಲಿ ಕೆಲವರ ಮನೆಗೆ ಹೋಗಿದ್ದಾರೆ. ಯಾರ ಮನೆಯಲ್ಲಿ ಎಷ್ಟು ಕೋಟಿ ರುಪಾಯಿ ಸಿಕ್ಕಿದೆ ಎಂದು ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಇವತ್ತು ನನ್ನ ಸ್ನೇಹಿತರ ಮನೆಗೆ ಹೋಗಿದ್ದಾರೆ. ಏನು ಸಿಕ್ಕಿತು ಎಂದು ನನ್ನ ಸ್ನೇಹಿತರೇ ತಿಳಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸ್ನೇಹಿತರ ಮನೆ ಮೇಲೆ ಐಟಿ ದಾಳಿ ಯಾಕೆ ಎಂಬ ಪ್ರಶ್ನೆಗೆ, ‘ದಾಳಿ ಮಾಡಲಿ, ತೊಂದರೆ ಇಲ್ಲ. ಕಾನೂನು ಪ್ರಕಾರ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಆದರೆ ಕಾನೂನು ಎಲ್ಲರಿಗೂ ಒಂದೇ ಆಗಿರಲಿ’ ಎಂದು ಉತ್ತರಿಸಿದರು.

Exit mobile version