ಸಿದ್ದರಾಮಯ್ಯ ಎದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು : ಬಿಜೆಪಿ ವ್ಯಂಗ್ಯ!

BJP

ವಿಧಾನಪರಿಷತ್(VidhanaParishath) ಮತ್ತು ರಾಜ್ಯಸಭಾ ಚುನಾವಣೆಯಲ್ಲಿ(RajyaSabha Election) ಕಾಂಗ್ರೆಸ್(Congress) ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಮಾತಿಗೆ ಹೈಕಮಾಂಡ್ ಮುನ್ನಣೆ ನೀಡಿದೆ.

ಆದರೆ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಮಾತಿಗೆ ಕಾಂಗ್ರೆಸ್‍ನಲ್ಲಿ ಬೆಲೆಯಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಅದರ ಫಲವನ್ನು ಬೆರೆಯವರು ಅನುಭವಿಸುತ್ತಾರೆ ಎನ್ನುವ ಮೂಲಕ ಬಿಜೆಪಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬಂಡಾಯವನ್ನು ಕೆದಕಿ, ರಾಜ್ಯಾಧ್ಯಕ್ಷ ಡಿಕೆಶಿ ಅವರನ್ನು ವ್ಯಂಗ್ಯ ಮಾಡಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಹೇಳಿದ್ದ ಹೇಳಿಕೆಯನ್ನೇ ಉಲ್ಲೇಖ ಮಾಡಿ ವ್ಯಂಗ್ಯವಾಡಿದೆ.

“ಡಿಕೆಶಿ ಅವರೇ ನೀವು ಹೇಳಿದಂತೆಯೇ ಆಗಲಿದೆ. ನೀವು ಊಟ ತಯಾರಿಸಿಡಿ, ಊಟ ಮಾಡಲು ಬೇರೆಯವರು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು! ಮೊದಲೆಲ್ಲ, ಕಾಂಗ್ರೆಸ್ ನಾಯಕರ ಕಾರ್ಯಕ್ರಮ ಡಿಕೆಶಿ ಪರವಾಗಿರುತ್ತಿತ್ತು. ಈಗ ಆ ಕಾರ್ಯಕ್ರಮಗಳು ಸಿದ್ದರಾಮಯ್ಯ ಪರವಾಗಿ ರೂಪುಗೊಳ್ಳುತ್ತಿವೆ.
ಶಾಸಕರ ಧ್ವನಿಗಳೂ ಸಿದ್ದರಾಮಯ್ಯ ಪರವಾಗಿ ಮೊಳಗುತ್ತಿದೆ.
ಮುಂದೆ ಕನಕಪುರದಲ್ಲೂ ಸಿದ್ದರಾಮಯ್ಯ ಹವಾ ಮೂಡಿಸುವರೇ?


ಪರಿಷತ್ ಟಿಕೆಟ್ ವಿಚಾರದಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುನಿಸು ತಾರಕಕ್ಕೇರಿದೆ. ಸಿದ್ದರಾಮಯ್ಯ ಮುಂದೆ ಕೆಪಿಸಿಸಿ ಅಧ್ಯಕ್ಷರ ಆಟವೇ ನಡೆಯುತ್ತಿಲ್ಲ ಎಂಬ ಪರಿಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿದೆ.
ಡಿಕೆಶಿ ನೀವು ಅಷ್ಟೊಂದು ಅಸಹಾಯಕರೇ? ಎಂದು ಪ್ರಶ್ನೆ ಮಾಡಿದೆ.
ಇನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಿಸಿದ್ದಾರೆ. ಆದರೆ ಎಸ್.ಆರ್.ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದ ಡಿ.ಕೆ.ಶಿವಕುಮಾರ್ ತೀವ್ರ ನಿರಾಸೆಯಾಗಿತ್ತು.

Exit mobile version