ಸಿದ್ದರಾಮಯ್ಯನವರಿಗೆ ದಲಿತರಿಗಿಂತ, ಮತಾಂಧರ ಮೇಲೇಕೆ ಹೆಚ್ಚಿನ ಪ್ರೀತಿ? : ಬಿಜೆಪಿ!

ಸಿದ್ದರಾಮಯ್ಯನವರೇ(Siddaramaiah), ನಿಮ್ಮ ದಲಿತ ಪ್ರೀತಿ, ದಲಿತ ಪರ ವಾದ ಮತಗಟ್ಟೆಗೋ, ಅಧಿಕಾರದ ಕಟ್ಟೆಗೋ? ನಿಮಗೆ ನಿಜಕ್ಕೂ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಕಳಕಳಿ ಇದ್ದರೆ, ಈ ಬಾರಿ ಕಾಂಗ್ರೆಸ್(Congress) ಗೆದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಬಿಜೆಪಿ(BJP) ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದೆ.

ಸರಣಿ ಟ್ವೀಟ್‍ಗಳನ್ನು ಮಾಡಿರುವ ರಾಜ್ಯ ಬಿಜೆಪಿ(State BJP), ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ(DKS) ಜಿದ್ದಿಗೆ ಬಿದ್ದವರಂತೆ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತರ ನಾಯಕರ ಪಾಡೇನು? ದಲಿತ ನಾಯಕರೇ ಮುಂದಿನ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ? ಕಾಂಗ್ರೆಸ್ ಪಕ್ಷ ದಲಿತರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತದೆ.

ಅಧಿಕಾರಕ್ಕೆ ಬಂದರೆ ಬೆನ್ನಿನಿಂದಿಳಿದು, ತುಳಿಯುತ್ತದೆ. ದಲಿತ ಕಾಂಗ್ರೆಸ್ ಶಾಸಕ ಅಖಂಡಗೆ ಅನ್ಯಾಯವಾದಾಗಲೂ ಮೌನ, ದಲಿತ ಯುವಕರ ತಲೆ ಕಡಿದು ಕೊಂದಾಗಲೂ ಮೌನ. ದಲಿತರಿಗಿಂತ, ಮತಾಂಧರ ಮೇಲೇಕೆ ಹೆಚ್ಚಿನ ಪ್ರೀತಿ? ಇನ್ನು ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗಲೆಲ್ಲ ಸಿದ್ದರಾಮಯ್ಯನವರು ಜಾಗೃತರಾಗುತ್ತಿದ್ದಾರೆ, ತನ್ನ ಕನಸಿಗೆ ದಲಿತರು ಅಡ್ಡಬರುತ್ತಾರೆ ಎಂಬ ಭಯವೇ? ನನಗಿಂತರ ದೊಡ್ಡ ದಲಿತ ಯಾರಿದ್ದಾರೆ ಎಂಬ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಅವರು “ದಲಿತರನ್ನೆಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ” ಎಂಬ ಸಂದೇಶ ರವಾನಿಸಿದ್ದು ಸುಳ್ಳೇ?


ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲಾಯಿತು. ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿತು. ದಲಿತ ಸಮುದಾಯದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ ಏಕೆ? ಕಾಂಗ್ರೆಸ್ ತನ್ನ ದಲಿತ ವಿರೋಧಿ ಅಸ್ತ್ರವನ್ನು ಮೊದಲು ಪ್ರಯೋಗ ಮಾಡಿದ್ದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್(Baba Saheb Ambedkar) ಅವರ ವಿರುದ್ಧ. ಅಂಬೇಡ್ಕರ್ ಅವರನ್ನು ಸಂಚು ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಅದೇ ಕಾಂಗ್ರೆಸ್ ಈಗ ಅಂಬೇಡ್ಕರ್ ಜಪ ಮಾಡುತ್ತಿದೆ, ಚೋದ್ಯವಲ್ಲವೇ?

ಅಂಬೇಡ್ಕರ್ ಪ್ರಭಾವಳಿಯ ಮುಂದೆ ತಮ್ಮ ವರ್ಚಸ್ಸು ಕುಂದುತ್ತದೆ ಎಂಬ ಭಯ ನೆಹರೂ ಅವರಿಗೆ ಕಾಡುತ್ತಿತ್ತು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ರೂಪಿಸಿದರು. ಅಂಬೇಡ್ಕರ್ ಗತಿಸಿದಾಗ, ಅವರ ಶವಸಂಸ್ಕಾರಕ್ಕೂ ದಿಲ್ಲಿಯಲ್ಲಿ ಜಾಗ ಒದಗಿಸದೆ ಅವಮಾನಿಸಿದ್ದು ನಾವಲ್ಲ, ಕಾಂಗ್ರೆಸ್. ದಲಿತ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವೇ ಇದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯಪೂರ್ವದಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಸ್ವಾತಂತ್ರ್ಯ ನಂತರವೂ ಕಾಂಗ್ರೆಸ್ ದಲಿತ ವಿರೋಧಿ ನೀತಿಯನ್ನೇ ಮುಂದುವರೆಸಿದೆ ಎಂದು ಬಿಜೆಪಿ ಟೀಕಿಸಿದೆ.

Exit mobile version