‘ವಲಸೆರಾಮಯ್ಯ ಅವರೇ, ಯಾವುದು ಹಿತವು ನಿಮಗೆ?’ : ಬಿಜೆಪಿ ಪ್ರಶ್ನೆ!

CONGRESS

ವಿಪಕ್ಷ ನಾಯಕ(Opposition Leader)ಸಿದ್ದರಾಮಯ್ಯ(Siddaramaiah) ಅವರಿಗೆ ಟ್ವೀಟ್‍ಗಳ(Tweet) ಮೂಲಕ ರಾಜ್ಯ ಬಿಜೆಪಿ(State BJP) ಕಾಲೆಳೆದಿದೆ.

‘ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಾನು ರಾಜಕೀಯದಲ್ಲಿ ಇರುತ್ತೇನೆ, ಆದರೆ ಚುನಾವಣಾ ರಾಜಕೀಯದಿಂದ ನಿವೃತ್ತಿನಾಗುತ್ತೇನೆ’ ಎಂದು ಸಿದ್ದರಾಮಯ್ಯ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಟೀಕಿಸಿ ಟ್ವೀಟ್ ಮಾಡಿದ್ದು, ‘ವಲಸೆರಾಮಯ್ಯ ಅವರೇ ಯಾವುದು ಹಿತವು ನಿಮಗೆ? ನಿಮ್ಮ ಪಟ್ಟ ಶಿಷ್ಯ ಜಮೀರ್‍ನ ಜಹಾಗೀರ್ ಚಾಮರಾಜಪೇಟೆಯೋ? ಈಗಿನ ಬಾದಾಮಿಯೋ? ಅಥವಾ 2018ರಲ್ಲಿ ನೀವು ಎದುರಿಸಿದ ಚುನಾವಣೆಯೇ ಕೊನೆಯ ಚುನಾವಣೆ ಅಂದುಕೊಳ್ಳುವುದೋ? ಎಂದು ಪ್ರಶ್ನೆ ಮಾಡಿದೆ.

ಇನ್ನೊಂದು ಟ್ವೀಟ್‍ನಲ್ಲಿ “ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಪ್ರವಾಸ ಮಾಡುವ ಅಭಿಲಾಷೆ ಇದ್ದರೆ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಅನೇಕ ಪ್ಯಾಕೇಜ್ ಪ್ರವಾಸ ವ್ಯವಸ್ಥೆ ಮಾಡುತ್ತೇವೆ. ಸುಮ್ಮನೆ ಹಳೇ ಮೈಸೂರು, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಕಿತ್ತೂರು ಕರ್ನಾಟಕ, ಬೆಂಗಳೂರು ನಗರ ಎಂದು ಚುನಾವಣೆಗಾಗಿ ವಲಸೆ ಹೋಗಬಹುದಾದ ಕ್ಷೇತ್ರಗಳ ಪಟ್ಟಿ ಮಾಡುತ್ತಾ ಹೋದರೆ ನಿಮ್ಮ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸುಮ್ಮನಿರುವರೇ?” ಎಂದು ಪ್ರಶ್ನಿಸಿದೆ.

“ಮುಖ್ಯಮಂತ್ರಿಯಾಗಿ ಬಿಟ್ಟಿ ಭಾಗ್ಯಗಳನ್ನು ಕೇವಲ ಒಂದು ವರ್ಗಕ್ಕೆ ಕೊಟ್ಟು, ಜಾತಿ-ಜಾತಿಗಳ ನಡುವೆ ಬಿರುಕು ಮೂಡಿಸಿ ಸಿದ್ದರಾಮಯ್ಯ ಅವರಿಗೆ ತನ್ನದು ಎಂದು ಹೇಳಿಕೊಳ್ಳುವ ಒಂದು ಕ್ಷೇತ್ರವೂ ಇಲ್ಲ. ಹುಣಸೂರು, ಕೊಪ್ಪಳ, ಕೋಲಾರ, ಚಾಮರಾಜಪೇಟೆ ಮುಂದೆ? ‘ಆಣೆರಾಮಯ್ಯ ಅವರೇ..’ ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಮೇಲೆ ಆಣೆ ಮಾಡಿ ಹೇಳಿಬಿಡಿ, ನೀವು ಯಾವ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತೀರಿ? ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಇನ್ನು ಇತ್ತೀಚೆಗೆ ಮೈಸೂರಿನಲ್ಲಿ ಮಾದ್ಯಮಗಳು ‘ನಿಮ್ಮ ಕೊನೆಯ ಚುನಾವಣೆಗೆ ಎಲ್ಲಿಂದ ಸ್ಪರ್ಧಿಸುತ್ತೀರಿ.?’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದವು. ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕೊಪ್ಪಳ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜಪೇಟೆ, ಹೆಬ್ಬಾಳ, ಬಾದಾಮಿ ಹೀಗೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗುತ್ತಿದೆ. ಸದ್ಯ ಎಲ್ಲಿಂದ ಚುನಾವಣೆಗೆ ನಿಲ್ಲಬೇಕು ಎಂದು ತೀರ್ಮಾನಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

Exit mobile version