ಈಗ ಚುನಾವಣೆ ನಡೆದರೆ NDAಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ!

ನವದೆಹಲಿ :  2024ರ ಲೋಕಸಭಾ ಚುನಾವಣೆಯ(Loksabha Election) ಕುರಿತು ದೇಶದ ಮತದಾರರ ಮನದಾಳವನ್ನು ಅರಿಯುವ ದೃಷ್ಟಿಯಿಂದ ಇಂಡಿಯಾ ಟುಡೇಯ ಮೂಡ್ ಆಫ್ ನೇಷನ್ ನಡೆಸಿದ ಸಮೀಕ್ಷೆಯ(Survey) ಪ್ರಕಾರ ಕೇಂದ್ರದಲ್ಲಿ ಮತ್ತೇ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬರಲಿದೆ ಎನ್ನಲಾಗುತ್ತಿದೆ. ಈಗ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ(NDA) ಮೈತ್ರಿಕೂಟ 286 ಲೋಕಸಭಾ ಸ್ಥಾನಗಳನ್ನು, ಕಾಂಗ್ರೆಸ್ ನೇತೃತ್ವದ ಯುಪಿಎ 146 ಸ್ಥಾನಗಳನ್ನು ಮತ್ತು ಇತರ ಪ್ರಾದೇಶಿಕ ಪಕ್ಷಗಳು 111 ಸ್ಥಾನಗಳನ್ನು ಪಡೆಯಲಿವೆ  ಎಂದು ಸಮೀಕ್ಷೆ ತಿಳಿಸಿದೆ.

ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ 13 ಲೋಕಸಭಾ ಸ್ಥಾನಗಳನ್ನು, ಕಾಂಗ್ರೆಸ್11 ಮತ್ತು ಇತರರು 4  ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಬಾರಿ 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ.

ಇನ್ನು ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಸಿದಿಲ್ಲ. ಮುಂದಿನ ಪ್ರಧಾನಿ ಯಾರಾಗಬೇಕು? ಎಂಬ ಪ್ರಶ್ನೆಗೆ ಶೇಕಡಾ 53 ರಷ್ಟು ಜನ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಇನ್ನು  ಶೇ.9 ಜನ  ರಾಹುಲ್ ಗಾಂಧಿ, ಶೇ. 7 ಜನ ಅರವಿಂದ್ ಕೇಜ್ರಿವಾಲ್  ಅವರನ್ನು ಬೆಂಬಲಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ದೇಶದಲ್ಲೇ ಅತ್ಯಂತ ದೊಡ್ಡ ಮೈತ್ರಿಕೂಟವಾಗಲಿದೆ.  ಚುನಾವಣೆಯಲ್ಲಿ ಎನ್ಡಿಎಗೆ ಶೇಕಡಾ 41ಕ್ಕಿಂತ ಹೆಚ್ಚು ಮತಗಳು ಲಭಿಸಲಿವೆ. ಯುಪಿಎಗೆ ಶೇ.26ರಷ್ಟು ಮತಗಳು ಮಾತ್ರ ಲಭ್ಯವಾಗಲಿವೆ. ಇನ್ನು ಪ್ರಾದೇಶಿಕ ಪಕ್ಷಗಳು ಶೇ.6 ರಷ್ಟು ಮತಗಳನ್ನು ಪಡೆಯಲಿವೆ ಎನ್ನಲಾಗಿದೆ.

Exit mobile version