ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಇಸ್ರೋ ವಿಜ್ಞಾನಿಗಳ ಸನ್ಮಾನಕ್ಕೆ ಪಕ್ಷದ ಸಭೆಗಲ್ಲ : ಬಿಜೆಪಿ ತಿರುಗೇಟು..!

Bengaluru : ರಾಜ್ಯ ಕಾಂಗ್ರೆಸ್ (Congress) ಬಿಜೆಪಿ (BJP) ನಾಯಕರನ್ನು ಕಾಲೆಳೆದಿದ್ದು, ಈ ವಿಚಾರವಾಗಿ ಸದ್ಯ ಸಾಮಾಜಿಕ ಜಾಲತಾಣದೆಲ್ಲೆಡೆ (BJP hit back congress)

ಫೋಟೋ ಕೂಡ ವೈರಲ್ (Viral) ಆಗಿದ್ದು ಕರ್ನಾಟಕದ ಬಿಜೆಪಿ ನಾಯಕರದ್ದು ಎಂತಹಾ ದುಸ್ಥಿತಿ. ಹೈಕಮಾಂಡ್ ನಾಯಕರು ರಾಜ್ಯದ ಬಿಜೆಪಿ ನಾಯಕರಿಗೆ ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ.

ರಾಜ್ಯ ಬಿಜೆಪಿಯ ಚಕ್ರವರ್ತಿಗಳು, ‘ದಂಡ’ ನಾಯಕರು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ. ರಾಜ್ಯ ನಾಯಕರು ಬ್ಯಾರಿಕೇಡ್ ಬಂಧಿಯಾಗಿದ್ಧಾರೆ ಎಂದು ವ್ಯಂಗ್ಯವಾಡಿದೆ.

ಸದ್ಯ ರಾಜ್ಯ ಕಾಂಗ್ರೇಸ್ ಪಕ್ಷವು ಬಿಜೆಪಿ ನಾಯಕರ ಫೋಟೋ ವೊಂದನ್ನು(Photo) ಹಾಕಿ ಟ್ವೀಟ್(Tweet) ಮಾಡಿ, ಬಿಜೆಪಿ ಹೈಕಮಾಂಡ್ ಹಾಗೂ ಮೋದಿ(Narendra Modi) ಹತ್ತಿರಕ್ಕೂ ಕೂಡ

ರಾಜ್ಯ ನಾಯಕರನ್ನು ಸೇರಿಸ್ತಿಲ್ಲ. ರಾಜ್ಯ ನಾಯಕರನ್ನು ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಛೇ, ಇವರಿಗೆ ಕನಿಷ್ಠ ಮರ್ಯಾದೆಯೂ ಕೂಡ ಇಲ್ಲದಾಯಿತೇ.

ಕನಿಷ್ಠ ಪ್ರಾಮುಖ್ಯತೆಯನ್ನೂ ಕೂಡ ಹೈಕಮಾಂಡ್ ನಾಯಕರು ಕೊಡುತ್ತಿಲ್ಲ.

ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಶಕ್ತಿ ಯೋಜನೆ ಕೊನೆಗೊಳ್ಳುತ್ತಿದೆ ಎಂಬ ಸುದ್ದಿ : ಯೋಜನೆ ಕೊನೆಯಾಗುತ್ತಾ, ಸರ್ಕಾರ ಏನು ಹೇಳುತ್ತೆ?

ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಹೊಸ ರಾಜ್ಯಾಧ್ಯಕ್ಷ ಸ್ಥಾನ ಬಿಜೆಪಿಗೆ ನೇಮಕ ಆಗುವುದೂ

ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ, ಕರ್ನಾಟಕ ಬಿಜೆಪಿ (BJP hit back congress) ಅಬ್ಬೇಪಾರಿಯಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಈ ಹಿನ್ನೆಲೆ ಬಿಜೆಪಿ ಕಾಂಗ್ರೆಸ್ ಟ್ವೀಟ್ಗೆ ತಿರುಗೇಟು ನೀಡಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ (Bengaluru) ಬಂದಿದ್ದು ಚಂದ್ರಯಾನದ (Chandrayana)ಅಭೂತಪೂರ್ವ ಯಶಸ್ಸಿನ

ಹಿನ್ನೆಲೆಯಲ್ಲಿ ಮತ್ತು ಇಸ್ರೋ(ISRO) ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ. ಪ್ರಧಾನಿ ಮೋದಿ ಪಕ್ಷದ ಸಭೆಗೆ ಬಂದಿರಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು

ಅವರ ಸಂತಸದಲ್ಲಿ ಸಾಮಾನ್ಯರಂತೆ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು… ಹುಡಕಬೇಡಿ ಎಂದು ಬಿಜೆಪಿ ಕಾಂಗ್ರೆಸ್ ಟ್ವೀಟ್ಗೆ ತಿರುಗೇಟು ನೀಡಿದೆ.

ಇದನ್ನೂ ಓದಿ : ಯುಐಡಿಎಐ ಎಚ್ಚರಿಕೆ ! ಆಧಾರ್ ಅಪ್ಡೇಟ್ ಮಾಡಲು ಇಮೇಲ್, ವಾಟ್ಸಾಪ್ನಲ್ಲಿ ದಾಖಲೆ ಕಳುಹಿಸದಿರಿ

ಗಾಂಧಿ (Gandhi) ಕುಟುಂಬದ ಜೀತಕ್ಕೆ ಬಿದ್ದವರು ನೀವು.ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ. ಅನೌಪಚಾರಿಕ ಭೇಟಿಗೂ ಮತ್ತು ಸರ್ಕಾರಿ ಭೇಟಿಗೂ… ವ್ಯತ್ಯಾಸ ಗೊತ್ತಿಲ್ಲ. ಗಾಂಧಿ ಕುಟುಂಬ

ಖರ್ಗೆಗೆ ಕೊಟ್ಟ ಮರ್ಯಾದೆ ರಾಜ್ಯ ಕಂಡಿದೆ ಎಂದು ಬಿಜೆಪಿ ಕಾಂಗ್ರೆಸ್ ಗೆ ಟ್ವೀಟ್ನಲ್ಲೇ ಉತ್ತರ ಕೊಟ್ಟಿದೆ.

ರಶ್ಮಿತಾ ಅನೀಶ್

Exit mobile version