Alert : ಆಧಾರ್ ಕಾರ್ಡ್ (Adhar Card)ಭಾರತದಲ್ಲಿ ಒಂದು ಪ್ರಮುಖ ದಾಖಲೆ ಆಗಿದೆ . ಇದು ಅಡ್ರೆಸ್ ಪ್ರೂಫ್ (aadhaar updateUIDAI alert)ಕೂಡ ಹೌದು. ಅಲ್ಲದೆ ನಾಗರಿಕರಿಗೆ ಗುರುತಿನ
ಚೀಟಿಯೂ ಕೂಡ ಹೌದು. ಅಷ್ಟೇ ಅಲ್ಲದೆ ಸರ್ಕಾರದ ಅನೇಕ ಯೋಜನೆಗಳ ಫಲ ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಯೂ ಕೂಡ ಹೌದು. ಆಧಾರ್ನಲ್ಲಿ ಗುರುತಿನ ಬಯೋಮೆಟ್ರಿಕ್
(Biometric), ವ್ಯಕ್ತಿಯ ಬೆರಳಚ್ಚುಗಳಂತಹ(Finger Print) ಸೂಕ್ಷ್ಮ ಮಾಹಿತಿ ಇರುತ್ತವೆ. ಈ ಆಧಾರ್ ಕಾರ್ಡ್ ಅನ್ನು ಯುಐಡಿಎಐನಿಂದ (UIDAI) ನಿರ್ವಹಿಸಲಾಗುತ್ತದೆ.
ಆದರೆ ಇದನ್ನು ದುಷ್ಕರ್ಮಿಗಳು ದುರುಪಯೋಗಿಸಿಕೊಳ್ಳುವ (aadhaar updateUIDAI alert) ಸಾಧ್ಯತೆ ಇದ್ದೇ ಇದೆ.

ಈಗ ಆನ್ಲೈನ್ನಲ್ಲಿ (Online) ಆಧಾರ್ ಅಪ್ಡೇಟ್ (Update) ಅನ್ನು ಮಾಡಬಹುದಾದ್ದರಿಂದ ಇತ್ತೀಚೆಗೆ ಜನರನ್ನು ವಂಚಿಸುವ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿವೆ . ಆಗಾಗ್ಗೆ ಜನರಿಗೆ ಈ ವಂಚನೆಗಳ
ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಯುಐಡಿಎಐ ಮಾಡುತ್ತಿರುತ್ತದೆ. ಈಗ ಆಧಾರ್ ಪ್ರೂಫ್ಗೆ (Proof) ಸಂಬಂಧಿಸಿದ ದಾಖಲೆಗಳನ್ನು ಇಮೇಲ್ (E mail) ಮತ್ತು ವಾಟ್ಸಾಪ್ (WhatsApp)
ಮೂಲಕ ವಂಚಕರು ಕೇಳುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಅಲರ್ಟ್ ಮೆಸೇಜ್ (Alert Message) ಅನ್ನು ಆಧಾರ್ ಪ್ರಾಧಿಕಾರ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ (Post) ಮಾಡಿದೆ.
ಐಡಿ ಪ್ರೂಫ್(ID Proof) ಅಥವಾ ವಿಳಾಸ ಪ್ರೂಫ್(Address Proof) ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ‘ಆಧಾರ್ ಅನ್ನು ಅಪ್ಡೇಟ್ ಮಾಡಲು ಯುಐಡಿಎಐ ಯಾವತ್ತೂ
ಕೇಳುವುದಿಲ್ಲ. ಜನರು ವಂಚಕರ ಬಗ್ಗೆ ಆದಷ್ಟು ಹುಷಾರಾಗಿರಿ. ಆನ್ಲೈನ್ನಲ್ಲಿ ಆಧಾರ್ ಅನ್ನುಮೈ ಆಧಾರ್ನ ಪೋರ್ಟಲ್ (Adhar Portal) ಮೂಲಕ ಅಪ್ಡೇಟ್ ಮಾಡಿ. ಅಥವಾ ನಿಮಗೆ ಸಮೀಪದ
ಆಧಾರ್ ಕೇಂದ್ರಕ್ಕೆ (Adhar Centre)ಹೋಗಿ ಅಪ್ಡೇಟ್ ಮಾಡಿ,’ ಎಂದು ಯುಐಡಿಎಐ ಹೇಳುತ್ತಿದೆ.

ಆಧಾರ್ ಅಪ್ಡೇಟ್ ಆನ್ಲೈನ್ನಲ್ಲಿ ಆಗದೇ ಇರಲು ಕಾರಣಗಳು?
ನಾವು ಆಧಾರ್ ಅಪ್ಡೇಟ್ ಅನ್ನು ಆನ್ಲೈನ್ ಮೂಲಕ ಮಾಡಲು ಯತ್ನಿಸುವಾಗ ಕೆಲವೊಮ್ಮೆ ವಿಫಲವಾಗಬಹುದು. ಯಾಕೆಂದರೆ ನೀವು ಅದರಲ್ಲಿ ನಿಮ್ಮ ಸರಿಯಾದ ದಾಖಲೆಗಳನ್ನು ಅಪ್ಲೋಡ್
(Upload) ಮಾಡದೇ ಇದ್ದಾಗ ಹೀಗೆ ಆಗಬಹುದು. ನೀವು ನಿಮ್ಮ ದಾಖಲೆಯ ಒರಿಜಿನಲ್ (Original) ಅಂದರೆ ಮೂಲ ಪ್ರತಿಯನ್ನು ಸ್ಕ್ಯಾನ್ (Scan) ಮಾಡಿ ಅದನ್ನು ಅಪ್ಲೋಡ್ ಮಾಡಬೇಕು.
ನೀವು ಹಾಗೆ ಮಾಡಿರದಿದ್ದರೆ ಅಪ್ಡೇಟ್ ಆಗದೇ ಇರಬಹುದು. ಹಾಗೆಯೇ, ನಿಮ್ಮ ಹೆಸರಿನಲ್ಲಿ ಪ್ರೂಫ್ ದಾಖಲೆಗಳು ಇಲ್ಲದೇ ಇದ್ದಾಗಲೂ ಹೀಗಾಗಬಹುದು.
ಆಧಾರ್ ಸೆಂಟರ್ಗೆ ಹೋಗಿ ಅಪ್ಡೇಟ್ ಮಾಡಿ
ನಿಮ್ಮ ಆಧಾರ್ ಅಪ್ಡೇಶನ್ ಅನ್ನು ಸಮೀಪದ ಆಧಾರ್ ಕೇಂದ್ರವೊಂದಕ್ಕೆ ಹೋಗಿಯೂ ಮಾಡಬಹುದು. ವಿಳಾಸ ಪ್ರೂಫ್ (Address Proof) ಮತ್ತು ಐಡಿ ಪ್ರೂಫ್ (ID Proof) ದಾಖಲೆಗಳನ್ನು
ಜೊತೆಯಲ್ಲಿ ಹೋಗುವಾಗ ತೆಗೆದುಕೊಂಡು ಹೋಗಿ. ಅಲ್ಲಿ ನಿರ್ದಿಷ್ಟ ಶುಲ್ಕವನ್ನು ಸಹಾಯಕ ಸಿಬ್ಬಂದಿಗೆ ಪಾವತಿಸಿ ಆಧಾರ್ ಅಪ್ಡೇಟ್ ಮಾಡಬಹುದು.
ಆನ್ಲೈನ್ನಲ್ಲಿ ಆಧಾರ್ ಅನ್ನು ಅಪ್ಡೇಟ್ ಮಾಡುವ ಕ್ರಮಗಳು
- ಮೊದಲು ಯುಐಡಿಎಐ ವೆಬ್ಸೈಟ್ನಲ್ಲಿ (Website) ಮೈ ಆಧಾರ್ ಪೋರ್ಟಲ್ಗೆ ಹೋಗಿ: myaadhaar.uidai.gov.in
- ಪೋರ್ಟಲ್ ಗೆ ನಿಮ್ಮ ಆಧಾರ್ ನಂಬರ್ ಬಳಸಿ ಲಾಗಿನ್ (Login) ಆಗಿ
- ನಂತರ ಅಲ್ಲಿ ಡಾಕ್ಯುಮೆಂಟ್ ಅಪ್ಡೇಟ್(Document update) ಎಂಬ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿರುವ ವಿವರಗಳು ನಿಖರವಾಗಿವೆಯಾ ಪರಿಶೀಲಿಸಿ.
- ನಂತರ ಇಲ್ಲಿರುವ ಡ್ರಾಪ್ ಡೌನ್ ಲಿಸ್ಟ್ನಲ್ಲಿ (Drop down list) ನಿಮ್ಮ ಯಾವ ಡಾಕ್ಯುಮೆಂಟ್ ಅಪ್ಡೇಟ್ ಆಗಬೇಕು ಎಂಬುದನ್ನು ಅರಿಸಿ. ನಂತರ ವೆರಿಫಿಕೇಶನ್ಗಾಗಿ (Verification)
ನಿಮ್ಮ ಮೂಲ ದಾಖಲೆಯ ಸ್ಕ್ಯಾನ್ಡ್ ಕಾಪಿಯನ್ನು ಅಪ್ಲೋಡ್ ಮಾಡಿ. - ಎಸ್ಆರ್ಎನ್ ಸಂಖ್ಯೆ ಅಥವಾ ಸರ್ವಿಸ್ ರಿಕ್ವೆಸ್ಟ್ ನಂಬರ್ (Service Request number) ಇದಾದ ಬಳಿಕ ನಿಮಗೆ ಕಾಣುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ. ರೆಫರೆನ್ಸ್ಗೆ(Reference)
ಈ ನಂಬರ್ ಮುಂದಿನ ಪ್ರಕ್ರಿಯೆ ಬೇಕಾದಾಗ ಬೇಕಾಗಬಹುದು.
ರಶ್ಮಿತಾ ಅನೀಶ್