ಚುನಾವಣೆಯಲ್ಲಿ ವಿಪಕ್ಷಕ್ಕಿಂತ ನೂರು ರೂ. ಹೆಚ್ಚು ಹಂಚಬೇಕೆಂದ ಬಿಜೆಪಿ ಮುಖಂಡ 

Chitradurga: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ (Lok Sabha Elections) ನಡೆಯಲಿದ್ದು ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಹಲವಾರು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನು ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.ಏಕೆಂದರೆ ಹಣದ ಹೊಳೆ ಹರಿಸಲು ಮುಖಂಡರು ಸಜ್ಜಾಗಿದ್ದಾರೆ. ಚಿತ್ರದುರ್ಗ‌ (Chitradurga) ಜಿಲ್ಲೆ ಮೊಳಕಾಲ್ಮೂರು ಪಟ್ಟಣದಲ್ಲಿನ ಬಿಜೆಪಿ‌ ಕಚೇರಿಯಲ್ಲಿ ನಡೆದ ಬಿಜೆಪಿ (BJP) ಸಭೆಯಲ್ಲಿ ಹಣ ಹಂಚಿಕೆ ಬಗ್ಗೆ ನಡೆದ ಚರ್ಚೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಚುನಾವಣೆಯಲ್ಲಿ ವಿಪಕ್ಷಕ್ಕಿಂತ ನೂರು ರೂ. ಹೆಚ್ಚು ಹಂಚಬೇಕೆಂದು ಬಿಜೆಪಿ ಮುಖಂಡ ಬಹಿರಂಗವಾಗಿ ನೀಡಿದ ಹೇಳಿಕೆಯ ವಿಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗಿದೆ. ಚುನಾವಣಾ ದಿನ ಸಮೀಪಿ­ಸುತ್ತಿದ್ದಂತೆ ಹಣ ಮತ್ತಿತರ ವಸ್ತುಗಳ ಹಂಚಿಕೆ ಸಾಧ್ಯತೆ ಹೆಚ್ಚಿ­ರು­ವುದರಿಂದ ತೀವ್ರ ಕಟ್ಟೆಚ್ಚರ ವಹಿಸಲು ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಖಡಕ್ ಆದೇಶ ನೀಡಿದೆ.ಆದರೂ ಮೊಳಕಾಲ್ಮೂರು ಎಸ್ಟಿ ಮೋರ್ಚಾ (Molakalmuru ST Morcha) ಅಧ್ಯಕ್ಷ ಜಿರಳ್ಳಿ ತಿಪ್ಪೇಸ್ವಾಮಿ (Jeeralli Tippeswamy) ಅವರು ಮತದಾರರಿಗೆ ಹಣ ಹಂಚಿ ಎಂದು ಹೇಳಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗ್ತಿದೆ.

ಬಿಜೆಪಿ ಕಚೇರಿಯಲ್ಲಿ ನಡೆದ ನಾಮಪತ್ರ ಸಲ್ಲಿಕೆ, ಚುನಾವಣ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷ ಅಭ್ಯರ್ಥಿಗಿಂತ ನೂರು ರೂ.‌ಹೆಚ್ಚು ಹಣ ಹಂಚಬೇಕು. ವಿಪಕ್ಷ ಏನೂ ಕೊಡದಿದ್ದರೂ ನಾವು ನೂರು ರೂ. ಕೊಡಿಸೋಣ. ನಮ್ಮ ತಾಲೂಕಿನಲ್ಲಿ ದುಡ್ಡು ಬಿಟ್ಟರೆ ಬೇರೆ ಮಾನದಂಡವಿಲ್ಲ. ಮಂಡಲ ಅಧ್ಯಕ್ಷರು ಮುನ್ಸೂಚನೆ ಕೊಟ್ಟರೆ ಹಣದ ವ್ಯವಸ್ಥೆ ಮಾಡಿಸುವ. 500 ರೂ. ಇಂದ 600ರೂ. ವ್ಯವಸ್ಥೆ ಮಾಡುತ್ತಿದ್ದೆ ಎಂದು ಅಜ್ಜರು ಹೇಳಿದ್ದಾರೆ. 500 ರೂಪಾಯಿಗೆ ಗೆಲ್ತೀರಿ ಬಿಡಿ ಎಂದು ಮಂಡಲ‌ ಅಧ್ಯಕ್ಷ ಹೇಳಿದ್ದಾರೆಂದಿರುವ ವಿಡಿಯೋ ಎಲ್ಲೆಡೆ ವೈರಲ್ (Viral) ಆಗಿದ್ದು ಹಣ ನೀಡಿ ಮತದಾರರ ಓಲೈಕೆ ಮಾಡುವಂತೆ ಕಾಣುತ್ತಿದೆ.

Exit mobile version