MP : ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ; ವೀಡಿಯೊ ವೈರಲ್

BJP MP

Madhya Pradesh : ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ(Janardhan Mishra) ಅವರು ಮಧ್ಯಪ್ರದೇಶದ(Madhya Pradesh) ರೇವಾ ಜಿಲ್ಲೆಯ ಬಾಲಕಿಯರ ಶಾಲೆಯಲ್ಲಿ ಕೊಳಕು ಶೌಚಾಲಯವನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿರುವ ದೃಶ್ಯವನ್ನು ಸಂಸದರ ಅಧಿಕೃತ ಟ್ವಿಟರ್(BJP MP cleaning toilet) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಯುವ ಮೋರ್ಚಾದ ಸೇವಾ ಪಖವಾಡ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಘಟಕದ ಸದಸ್ಯರು ಖತ್ಖಾರಿ ಬಾಲಕಿಯರ ಶಾಲೆಯ ಶೌಚಾಲಯಗಳನ್ನು ತಮ್ಮ ಕೈಯಿಂದಲೇ ಸ್ವಚ್ಛಗೊಳಿಸಿದ್ದಾರೆ(BJP MP cleaning toilet) ಎಂದು ಸಂಸದ ಜನಾರ್ದನ್ ಮಿಶ್ರಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/india-replys-to-pak-pm/

ಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಆಲಿಸಿ, ಶಾಲಾ ಆಡಳಿತ ಮಂಡಳಿ ಜೊತೆ ಕೆಲ ಕಾಲ ಚರ್ಚೆಗಳನ್ನು ನಡೆಸಿದ್ದಾರೆ.

ಬಾಲಕಿಯರ ಶಾಲೆಯ ಶೌಚಾಲಯಗಳ ಪರಿಸ್ಥಿತಿ ಅರಿತು ಬರಿಗೈಯಿನಿಂದಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಬಗ್ಗೆ ಸ್ವತಃ ಮಾತನಾಡಿದ ಸಂಸದ ಜರ್ನಾದನ್ ಮಿಶ್ರಾ, “ನಾನು ಶಾಲೆಗೆ ಭೇಟಿ ನೀಡಿದಾಗ ಶೌಚಾಲಯವು ಕೊಳಕಾಗಿರುವುದು ಕಂಡುಬಂದಿತು. ಹಾಗಾಗಿ, ನಾನು ಅದರ ಬಗ್ಗೆ ಹೆಚ್ಚು ಚಿಂತಿಸದೇ ಸ್ವಚ್ಛಗೊಳಿಸಿದೆ. ಇದೇನು ದೊಡ್ಡ ವಿಷಯವಲ್ಲ ಎಂದು ಸ್ಥಳೀಯ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಂಸದ ಜರ್ನಾದನ್ ಮಿಶ್ರಾ ಅವರು ಬಾಲಕಿಯರ ಶಾಲಾ ಶೌಚಾಲಯವನ್ನು ಬರಿಗೈಯಿನಿಂದಲೇ ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಪಾಹಾಸ್ಯ ಮಾಡಿದ್ದಾರೆ.

https://twitter.com/Janardan_BJP/status/1572955219750699011?s=20&t=Zc2WvVQ-Ra_AA4BMqgQOtw

ಕೆಲವರು ಇವೆಲ್ಲಾ ರಾಜಕೀಯದ ನಾಟಕೀಯ ತಂತ್ರ! ಎಂದರೆ, ಇನ್ನು ಕೆಲವರು ಟಾಯ್ಲೆಟ್ ಕ್ಲೀನ್ ಮಾಡಲು ಬ್ರಶ್ ಸಿಗದಷ್ಟು ಕಷ್ಟದ ಪರಿಸ್ಥಿತಿ ಎದುರಾಗಿದೆಯಾ? ಎಂದು ಪ್ರಶ್ನಿಸುವ ಮುಖೇನ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸಂಸದ ಜರ್ನಾದನ್ ಮಿಶ್ರಾ ಅವರನ್ನು ಟೀಕಿಸಿದ್ದಾರೆ. ಸದ್ಯ ಈ ಒಂದು ವೀಡಿಯೋ ನೋಡಿ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
Exit mobile version