ಹೈದರಾಬಾದ್: ಸರ್ಕಾರ ಕೊಡುವ ಸಂಸದರ ನಿಧಿಯಿಂದ ಮನೆ ನಿರ್ಮಿಸಿದ್ದೇನೆ,ಮಗನ ಮದುವೆ ಕೂಡ ಮಾಡಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡ ಬಿಜೆಪಿ (BJP MPs statement viral)
ಸಂಸದನ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದೇನೆ ಎಂಬುದನ್ನು ತೆಲಂಗಾಣದ(Telangana) ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರು
ಬಹಿರಂಗವಾಗಿಯೇ ಒಪ್ಪಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.
ಎಂಪಿ ಲ್ಯಾಡ್ಸ್ ನಿಧಿಯನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿದ್ದಾರೆ ಎಂದು ಸೋಯಮ್ ಬಾಪು ರಾವ್ (Soyam Bapu Rao) ಅವರು ಒಪ್ಪಿಕೊಂಡಿದ್ದಾರೆ. ಬಿಜೆಪಿ ಪ್ರತಿನಿಧಿಗಳೊಂದಿಗೆ ನಡೆದ
ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಸೋಯಮ್ ಬಾಪು ರಾವ್ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬದಲಾಗಿ ತಮ್ಮ ವೈಯಕ್ತಿಕ ಉದ್ದೇಶಗಳಿಗಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ
(LADS) ಹಣವನ್ನು ಬಳಸಿದ್ದಾರೆ ಎಂದು (BJP MPs statement viral) ಒಪ್ಪಿಕೊಂಡಿದ್ದಾರೆ.

ಸಂಸದರು ತಮ್ಮ ಕ್ಷೇತ್ರಗಳ ನಿರ್ದಿಷ್ಟ ಅಗತ್ಯಗಳ ಆಧಾರದ ಮೇಲೆ ಮತ್ತು ಸ್ಥಳೀಯ ಅಭಿವೃದ್ಧಿಗಳಿಗೆ ಈ MP LADS ನಿಧಿಯನ್ನು ಹಣವನ್ನು ವಿನಿಯೋಗಿಸಬೇಕಿದೆ. ಆದರೆ ಆ ನಿಧಿಯ ಒಂದು
ಭಾಗವನ್ನು ರಾವ್ ಅವರು ಪ್ರದೇಶದ ಕೌನ್ಸಿಲರ್‌ಗಳಿಗೆ ಮತ್ತು ಮುನ್ಸಿಪಲ್ ಪೊಲೀಸ್ ತರಬೇತಿ ಸಮಿತಿಗಳು (ಎಂಪಿಟಿಸಿಗಳು) ಹಂಚಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ
ಎರಡನೇ ಬಾರಿಗೆ ಒಟ್ಟು 2.5 ಕೋಟಿ ರೂ. ಹಣ ಬಿಡುಗಡೆಯಗಿತ್ತು ಅದರಲ್ಲಿ ಒಂದಷ್ಟು ಭಾಗವನ್ನು ಈ ಭಾಗದ ಕೌನ್ಸಿಲರ್‌ಗಳಿಗೆ ಮತ್ತು ಎಂಪಿಟಿಸಿ ಗೆ ನೀಡಿದ್ದೇವೆ.ಈ ಕ್ಷೇತ್ರದಲ್ಲಿ ನನಗೆ ಮನೆ ಇಲ್ಲ.
ಸ್ವಲ್ಪ ಹಣವನ್ನು ಹಾಗಾಗಿ ಮನೆ ಕಟ್ಟಲು ಬಳಸಿದ್ದೇನೆ. ಅದನ್ನು ಬೇರೆ ಯಾವ ನಾಯಕರೂ ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ಅದನ್ನು ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತಿದ್ದೇನೆ.
ನನ್ನ ಮಗನ ಮದುವೆಗೆ ಕೂಡಾ ಸಂಸದರ ನಿಧಿಯಿಂದ ಬಂದ ಹಣವನ್ನು ಖರ್ಚು ಮಾಡಿರುವುದಾಗಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ರಶ್ಮಿತಾ ಅನೀಶ್