ಸರ್ಕಾರದ ನೀಡಿದ ಸುತ್ತೋಲೆಯಲ್ಲಿ ನಾಲ್ಕು ಸಾಲಿನ ಏಳು ಕಾಗುಣಿತ ದೋಷಗಳು!

BJP

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಯಾವುದೇ ರೀತಿಯ ವಿಡಿಯೋ ಚಿತ್ರೀಕರಣ ಮಾಡದಂತೆ ನಿಷೇಧ ಹೇರಿ ರಾಜ್ಯ ಸರ್ಕಾರ(State Government) ಆದೇಶ ಹೊರಡಿಸಿತ್ತು.

ಭ್ರಷ್ಟ(Corrupt) ಕುಳಗಳ ಕಳ್ಳ ಕೆಲಸಗಳನ್ನು ಜಗತ್ಜಾಹೀರಾತು ಮಾಡಲು, ವಿಡಿಯೋ ಚಿತ್ರೀಕರಣದ ಅಗತ್ಯವಿದೆ. ನ್ಯಾಯಾಲಯಗಳಲ್ಲಿಯೂ ವಿಡಿಯೋ ಸಾಕ್ಷ್ಯ ಅತ್ಯಂತ ಮಹತ್ವದ ಸಾಕ್ಷಿಯಾಗುತ್ತದೆ.

ಹೀಗಾಗಿ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸುವ ಮೂಲಕ ರಾಜ್ಯ ಸರ್ಕಾರ ಭ್ರಷ್ಟರಿಗೆ ಬೆಂಬಲ ನೀಡುತ್ತಿದೆ ಎಂದು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ, ಸಾರ್ವಜನಿಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಆದೇಶವನ್ನು ಹಿಂಪಡೆದಿದೆ.

https://vijayatimes.com/state-congress-strikes-bjp-govt/

ಆದರೆ ಆದೇಶ ಹಿಂಪಡೆಯಲು ಹೊರಡಿಸಿರುವ ಆದೇಶ ಪ್ರತಿಯಲ್ಲಿನ (Order circular)ಕಾಗುಣಿತ ದೋಷಗಳು ವಿವಾದಕ್ಕೆ ಕಾರಣವಾಗಿವೆ. ಅದೇಶ ಪ್ರತಿಯಲ್ಲಿನ ಕನ್ನಡ ಶಬ್ದಗಳಲ್ಲಿ ಅನೇಕ ಕಾಗುಣಿತ ದೋಷಗಳನ್ನು ಮಾಡಲಾಗಿದೆ. ಸಾಮಾನ್ಯ ಶಬ್ದಗಳಲ್ಲಿ ಕೂಡಾ ಕಾಗುಣಿತ ದೋಷ ಕಂಡುಬಂದಿದೆ.

ಕನ್ನಡ ಭಾಷೆಯ ಕುರಿತು ಸಾಮಾನ್ಯ ಜ್ಞಾನವಿಲ್ಲದವರು ಮಾತ್ರ ಈ ರೀತಿಯ ದೋಷಗಳನ್ನು ಮಾಡುತ್ತಾರೆ. ಆದರೆ ನೇಮಕಾತಿ ಸಂದರ್ಭದಲ್ಲಿ ಪ್ರಥಮ ಮತ್ತು ದ್ವೀತಿಯ ದರ್ಜೆಯ ಸಹಾಯಕರಿಗೆ ಕನ್ನಡ ಭಾಷೆಯ ಕುರಿತು ವಿಶೇಷ ಪತ್ರಿಕೆಯನ್ನೇ ನೀಡಲಾಗಿರುತ್ತದೆ. ಈ ರೀತಿಯ ಕನ್ನಡ ಭಾಷೆಯ(Kannada Language) ವಿಶೇಷ ಪತ್ರಿಕೆಯನ್ನು ಪಾಸು ಮಾಡಿ, ಸರ್ಕಾರಿ ಸೇವೆಗೆ ಬಂದವರು ಈ ರೀತಿಯ ದೋಷಗಳನ್ನು ಮಾಡುತ್ತಾರೆ ಎಂದರೆ ಸರ್ಕಾರಿ ನೌಕರರ ಗುಣಮಟ್ಟ ಅತ್ಯಂತ ಕೆಳಮಟ್ಟದಲ್ಲಿದೆ ಎಂದರ್ಥ. 

ಕನ್ನಡ ಮಾದ್ಯಮದಲ್ಲಿ ಪ್ರಾಥಮಿಕ ಶಿಕ್ಷಣ (Education) ಪೂರೈಸಿರುವ ವಿದ್ಯಾರ್ಥಿಗಳು ಬರೆಯಬಹುದಾದ, ನಡಾವಳಿಗಳು, ಪ್ರಸ್ತಾವನೆ, ಮೇಲೆ, ಭಾಗ, ಕರ್ನಾಟಕ, ಆಡಳಿತ ಎಂಬ ಸಾಮಾನ್ಯ ಪದಗಳನ್ನು ನಡವಳಿಗಳು, ಪ್ರಸತ್ತಾವನೆ, ಮೇಲೇ, ಬಾಗ, ಕರ್ನಾಟಾ, ಆಡಳಿದ ಎಂದು ಬರೆಯಲಾಗಿದೆ.

ಕೇವಲ ನಾಲ್ಕು ಸಾಲಿನ ಆದೇಶ ಪ್ರತಿಯಲ್ಲಿ ಏಳು ಕಾಗುಣಿತ ದೋಷಗಳನ್ನು ಮಾಡಲಾಗಿದೆ. ಇದು ಸರ್ಕಾರಿ ನೌಕರರ ಬದ್ದತೆ ಮತ್ತು ಗುಣಮಟ್ಟವನ್ನು ತೋರಿಸುತ್ತದೆ.
Exit mobile version