70 ವರ್ಷ ದಾಟಿದವರಿಗೆ ಕೊಕ್ ; ಕುಟುಂಬ ರಾಜಕಾರಣಕ್ಕಿಲ್ಲ ಅವಕಾಶ : ಅಮಿತ್ ಶಾ ಸೂತ್ರ!

amit shah

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Vidhansabha Election) 150 ಸ್ಥಾನಗಳನ್ನು ಗೆಲ್ಲುವ ನಿಟ್ಟನಲ್ಲಿ ಕೇಂದ್ರ(Central) ಬಿಜೆಪಿ(BJP) ವರಿಷ್ಠರು ಕೆಲ ಹೊಸ ಸೂತ್ರಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಇದೇ ತಿಂಗಳ 16 ಮತ್ತು 17ರಂದು ಹೊಸಪೇಟೆಯಲ್ಲಿ(Hospete) ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಸೂತ್ರಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ.

ಇನ್ನು ಅಮಿತ್ ಶಾ(Amit Shah) ರೂಪಿಸಿರುವ ಈ ಸೂತ್ರಗಳಿಂದ ರಾಜ್ಯದ ಕೆಲ ಪ್ರಭಾವಿ ಬಿಜೆಪಿ ನಾಯಕರ ರಾಜಕೀಯ ಭವಿಷ್ಯವೇ ಮಂಕಾಗಲಿದೆ. 70 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂದಾದರೆ ಅನೇಕ ಹಾಲಿ ಬಿಜೆಪಿ ಶಾಸಕರಿಗೆ ಕೊಕ್ ನೀಡಲಾಗುತ್ತದೆ. ಅದೇ ರೀತಿ ಕೆಲ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಲು ಭಾರೀ ಪ್ರಯತ್ನಗಳನ್ನೇ ನಡೆಸಿದ್ದಾರೆ. ಅಂತಹ ನಾಯಕರಿಗೂ ಈ ಸೂತ್ರದಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ ಕುಟುಂಬ ರಾಜಕೀಯಕ್ಕೆ ಈಗಲೇ ಕಡಿವಾಣ ಹಾಕಬೇಕೆಂಬುದು ಅಮಿತ್ ಶಾ ನಿಲುವು.

ಕುಟುಂಬ ರಾಜಕೀಯಕ್ಕೆ ಅವಕಾಶ ಕೊಟ್ಟಷ್ಟು ಪಕ್ಷದ ಸಂಘಟನಾ ಶಕ್ತಿ ಕುಗ್ಗುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಬಿಜೆಪಿಯಲ್ಲಿ ಟಿಕೆಟ್ ನೀಡಬೇಕೆಂದು ರಾಜ್ಯ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇನ್ನು ಉತ್ತರಪ್ರದೇಶದಲ್ಲಿ ಮಾಡಿದಂತೆ ಇಲ್ಲಿಯೂ ಹೊಸ ಮುಖಗಳಿಗೆ ಟಿಕೆಟ್ ನೀಡಲು ಅಮಿತ್ ಶಾ ನಿರ್ಧರಿಸಿದ್ದಾರೆ. ಹಳೇಮೈಸೂರು ಭಾಗದಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಮನ್ನಣೆ ನೀಡಲು ಯೋಜನೆ ರೂಪಿಸಲಾಗಿದ್ದು, ಅಭ್ಯರ್ಥಿಗಳಿಗಾಗಿ ಸಮೀಕ್ಷೆಯನ್ನು ನಡೆಸಲಾಗುತ್ತದೆ.

ಹೊಸಪೇಟೆಯಲ್ಲಿ ನಡೆಯಲಿರುವ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮೂರು ಸಮೀಕ್ಷೆ ತಂಡಗಳನ್ನು ರಚಿಸಲಾಗುತ್ತದೆ. ಪ್ರತಿ ತಂಡದಲ್ಲಿಯೂ 9 ರಾಜ್ಯ ನಾಯಕರು ಮತ್ತು ಒರ್ವ ಕೇಂದ್ರ ನಾಯಕ ಇರುತ್ತಾರೆ. ಈ ಮೂರು ತಂಡಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಸೂಚಿಸುತ್ತದೆ. ಅಂತಿಮವಾಗಿ ಅಮಿತ್ ಶಾ ನೇತೃತ್ವದ ತಂಡ ಟಿಕೆಟ್ ಪೈನಲ್ ಮಾಡುತ್ತದೆ.

Exit mobile version