ಕಾವೇರಿ ಕಾವು: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಹೆದ್ದಾರಿ ಬಂದ್ , ಬೆಂಗಳೂರು ಮಾರ್ಗ ಸಂಚಾರದಲ್ಲಿ ವ್ಯತ್ಯಯ

Mandya: ಕೆಆರ್‌ಎಸ್‌ (K.R.S) ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ (bjp protest in mandya) ಬಿಜೆಪಿ ಕಾರ್ಯಕರ್ತರು ಭಾರೀ

ಪ್ರತಿಭಟನೆ ಮಾಡಿ, ಮಂಡ್ಯದ ಜೆ.ಸಿ.ವೃತ್ತದಲ್ಲಿ (J.C Circle) ವಾಹನಗಳನ್ನು ತಡೆದು ಹೆದ್ದಾರಿ ಬಂದ್ (Bandh) ಮಾಡಿದ್ರು. ಕಾವೇರಿ ನಮ್ಮದು, ಕಾವೇರಿ ನಮ್ಮದು. ತಮಿಳುನಾಡಿನ

ಏಜೆಂಟ್ (Agent) ಡಿ ಕೆ ಶಿವಕುಮಾರ್ (D.K Shivakumar), ಸಿದ್ದರಾಮಯ್ಯ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜೊತೆಗೆ ನೀರಾವರಿ ಬೆಳೆ ಬಿಟ್ಟು

ಅರೆಖುಷ್ಕಿ ಬೆಳೆ ಬೆಳೆಯುವಂತೆ ರೈತರಲ್ಲಿ ಕೃಷಿ (bjp protest in mandya) ಸಚಿವರು ಮನವಿ ಮಾಡಿದ್ದರು.

bjp protest in mandya

ಅದಕ್ಕೆ ಭತ್ತ, ಕಬ್ಬು ಬಿಟ್ಟು ಹುರುಳಿ ಬೆಳೆಯಬೇಕಾ ಎಂದು ಹುರುಳಿ ಚೆಲ್ಲಿ ಬಿಜೆಪಿ (BJP) ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ರಾಜ್ಯದಲ್ಲಿ ಒಂದೆಡೆ ನೀರಿನ ತೀವ್ರ ಅಭಾವವಿದ್ದು,

ಆದರೆ ತಮಿಳುನಾಡು ತನ್ನ ಪಾಲಿನ ನೀರು ಹರಿಸಲು ಒತ್ತಾಯಿಸಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ. 10 ಸಾವಿರ ಕ್ಯೂಸೆಕ್‌ಗೂ (Cusec) ಹೆಚ್ಚಿನ ನೀರು ತಮಿಳುನಾಡಿಗೆ

ಹರಿಯಬಿಡಲಾಗ್ತಿದೆ. ಆದರೂ ಕ್ಯಾತೆ ತೆಗೆದಿರುವ ತಮಿಳುನಾಡು (Tamilnadu) ಸರ್ಕಾರ ಅರ್ಜಿಯ ತುರ್ತು ವಿಚಾರಣೆಗಾಗಿ ಮನವಿ ಮಾಡಿದೆ.

ಸುಪ್ರೀಂಕೋರ್ಟ್ ಅಂಗಳದಲ್ಲಿ ತಮಿಳುನಾಡು-ಕರ್ನಾಟಕ (Karnataka), ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ

ರಜನಿ ರಿಯಾಕ್ಷನ್‌ : ಯೋಗಿ ಕಾಲಿಗೆ ಬಿದ್ದಿದ್ದೇಕೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ರಜನಿಕಾಂತ್

(Mukul Rohatgi) ವಾದ ಮಂಡಿಸಲಿದ್ದಾರೆ. ಆದರೆ ಕಾವೇರಿ ನದಿ ನೀರು ವಿಚಾರಣೆಗೆ ಹೊಸ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಈಗಾಗಲೇ ಕಾವೇರಿ (Kaveri) ನ್ಯಾಯಾಧೀಕರಣ ನಿರ್ದೇಶನದಂತೆ ಕೃಷ್ಣರಾಜಸಾಗರ (Krishnarajasagar) ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ತಮಿಳುನಾಡಿನ

ಒತ್ತಡಕ್ಕೆ ಮಣಿದು ಕರ್ನಾಟಕ ರಾಜ್ಯ ಸರ್ಕಾರವು ನೀರು ಬಿಡುಗಡೆಗೆ ಆದೇಶಿಸಿದ್ದು ಒಂದು ವಾರದಿಂದಲೂ ನೀರು ಹರಿಯುತ್ತಿದೆ. ಇದನ್ನು ವಿರೋಧಿಸಿ ಭಾರತೀಯ ಜನತಾಪಕ್ಷದ ಕಾರ್ಯಕರ್ತರು

ಪ್ರಮುಖರು ಕಿವಿಮೇಲೆ ಹೂ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ಮೊದಲು ಒಳ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಬಿಜೆಪಿ ಕಾರ್ಯಕರ್ತರು ಮಂಡ್ಯ ಮೈಸೂರು (Mysore) ಹೆದ್ದಾರಿಗೆ ಇಳಿಯದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಡಿ.ಎಸ್.ಪಿ

(DSP) ಶಿವಮೂರ್ತಿ (Shivamurthy) ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಸುತ್ತಲೂ

ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ತದ ನಂತರ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತಾ ಮಂಡ್ಯದ ಸಂಜಯ್‌ ವೃತ್ತಕ್ಕೆ (Sanjay Circle) ಆಗಮಿಸಿ ಅಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು. ಅಲ್ಲದೇ ಬೆಂಗಳೂರು

(Bengaluru)-ಮೈಸೂರು ಹೆದ್ದಾರಿ ತಡೆದು ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನ ಸವಾರರು ರಸ್ತೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು.

ಭವ್ಯಶ್ರೀ ಆರ್.ಜೆ

Exit mobile version