ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ: ನಮ್ಮ ರಾಮ ಸಿದ್ದರಾಮಯ್ಯ ಎಂದ ಮಾಜಿ ಸಚಿವ ಹೆಚ್. ಆಂಜನೇಯ

Chitradurga: ಅಯೋಧ್ಯಯಲ್ಲಿ (Ayodhya) ಶ್ರೀ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಮಾಜಿ ಸಚಿವ ಎಚ್.ಆಂಜನೇಯ @HAnjaneya ಅವರು ಮಾತನಾಡಿದ್ದು, ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ. ನಮಗೆ ಸಿದ್ಧರಾಮಯ್ಯನವರೇ ಶ್ರೀರಾಮ, ಅವರು ನಮ್ಮ ಎದೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ರಾಮಮಂದಿರ ಲೋಕಾರ್ಪಣೆಗೆ ಸಿಎಂ ಸಿದ್ದರಾಮಯ್ಯಗೆ #CMSiddaramaiah ಆಹ್ವಾನ ನೀಡದೇ ಇರುವುದು ಒಳ್ಳೇದೇ ಆಯ್ತು. ಸಿದ್ದರಾಮಯ್ಯ ಊರಲ್ಲಿ ರಾಮಮಂದಿರ ಇದೆ. ಅಲ್ಲಿ ಪೂಜೆ ಮಾಡ್ತಾರೆ. ಅಲ್ಲಿರೋದು ಬಿಜೆಪಿ ರಾಮ, ಅವ್ರನ್ನ ಕರೆದುಕೊಂಡು ಬಿಜೆಪಿಯವರು ಭಜನೆ ಮಾಡಲಿ. ನಮ್ಮ ರಾಮ ಎಲ್ಲಾ ಕಡೆ ಇದ್ದಾನೆ, ನಮ್ಮ ಎದೆಯಲ್ಲೇ ಇದ್ದಾನೆ. ನಾನು ಆಂಜನೇಯ ಏನು ಮಾಡ್ದಾ ಗೊತ್ತಲ್ಲ ಎನ್ನುವ ಮೂಲಕ ಬಿಜೆಪಿ (BJP)ಗರ ವಿರುದ್ಧ ಹೆಚ್‌. ಆಂಜನೇಯ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ (Chitradurga)ದಲ್ಲಿ ಜ.1ರಂದು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲದ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಾವೆಲ್ಲಾ ಶ್ರೀರಾಮನ ಭಕ್ತರು. ನನ್ನ ಹೆಸರು ಆಂಜನೇಯ. ನಮ್ಮ ಸಮುದಾಯದವರು ರಾಮ, ಆಂಜನೇಯ, ಹನುಮಂತ ಹೆಸರಿಟ್ಟುಕೊಳ್ಳುತ್ತಾರೆ.

ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು’’ ಎಂದು ಹೇಳಿದ ಅವರು, “ಹೀಗೆ ಶ್ರೀರಾಮನು ನಮ್ಮಲ್ಲಿ ಬೆರೆತು ಹೋಗಿದ್ದರೂ, ದೇವರ ಹೆಸರಿನಲ್ಲಿ ಧರ್ಮಗಳನ್ನು ಒಡೆದಾಳುವ ನೀತಿ ಬಿಜೆಪಿಯದ್ದು’’ ಎಂದು ಟೀಕಿಸಿದರು.

ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪಕ್ಕೆ ಮೋದಿ ಪ್ರವಾಸ
ಇಂದಿನಿಂದ ಎರಡು ದಿನಗಳ ಕಾಲ ನರೇಂದ್ರ ಮೋದಿ @NarendraModi ಅವರು, ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪ (Tamil Nadu, Kerala and Lakshadweep) ಪ್ರವಾಸ ನಡೆಸಲಿದ್ದು, ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.

2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈ ಭೇಟಿ ಹೆಚ್ಚು ಮಹತ್ವವನ್ನು ಪಡೆಯಲಿದ್ದು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಯೊಂದು ಮತದಾರರನ್ನು ಸೆಳೆಯಲು ಪ್ರಯತ್ನಗಳನ್ನು ನಡೆಸುತ್ತಿವೆ.

ಇನ್ನೆರಡು ದಿನಗಳಲ್ಲಿ ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ ಮತ್ತು ಕಾರ್ಯಕ್ರಮಗಳು ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಪ್ರಾರಂಭವಾಗಲಿದ್ದು, ಅಲ್ಲಿ ನಾನು ಭಾರತಿದಾಸನ್ ವಿಶ್ವವಿದ್ಯಾಲಯದ (Bharathidasan University) ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತೇನೆ. ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವೂ ಉದ್ಘಾಟನೆಗೊಳ್ಳಲಿದೆ. ಇದರ ಜೊತೆಗೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಾಗುವುದು. ಈ ಕೆಲಸಗಳಿಂದ ಅನೇಕ ಜನರು ಪ್ರಯೋಜನ ಪಡೆಯುತ್ತಾರೆ ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version