ಕೇಂದ್ರದಿಂದ ಬರುವ ಅಕ್ಕಿಯನ್ನು ತಮ್ಮ ಹೆಸರಿನ ಚೀಲದಲ್ಲಿ ಹಾಕಿ ವಿತರಿಸುವುದರಲ್ಲಿ ಸಿದ್ದುಗೆ 5 ವರ್ಷಗಳ ಅನುಭವವಿದೆ – ಬಿಜೆಪಿ ವ್ಯಂಗ್ಯ

New Delhi : ಕೇಂದ್ರ ಸರ್ಕಾರದಿಂದ (Central Govt) ಬರುವ ಅಕ್ಕಿಯನ್ನು ತಮ್ಮ ಹೆಸರಿನೊಂದಿಗೆ ಚೀಲದಲ್ಲಿ ಹಾಕಿ ವಿತರಿಸುವುದರಲ್ಲಿ ಶ್ರೀಯುತ ಸಿದ್ದರಾಮಯ್ಯನವರಿಗೆ (BJP sarcasm about Siddaramaiah) ಐದು ವರ್ಷಗಳ

ಅನುಭವವಿದೆ ಎಂದು ರಾಜ್ಯ ಬಿಜೆಪಿ (State BJP) ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್ (Tweet) ಮಾಡಿರುವ ಬಿಜೆಪಿ, ಪ್ರಮಾಣ ಮಾಡಿದ 10 ಕೆಜಿ ಅಕ್ಕಿಯಲ್ಲಿ, ಕನಿಷ್ಠ 1 ಕೆಜಿಯನ್ನೂ ರಾಜ್ಯದಿಂದ ಭರಿಸಲು ಸಿದ್ಧವಿಲ್ಲದ ಕಾಂಗ್ರೆಸ್ ಸರ್ಕಾರ, ‘ನೀಡುವ ಅಕ್ಕಿಯ ಪ್ರಮಾಣವನ್ನು ಹೆಚ್ಚಳ ಮಾಡಿ’

ಎಂದು ಕೇಂದ್ರ ಸರ್ಕಾರವನ್ನು ಗೋಗರೆಯಲು ಈಗಾಗಲೇ ಶುರು ಮಾಡಿದೆ. ಇದು “ಅಕ್ಕಿ ನಿಮ್ದು, ಚೀಲ ನಮ್ದು” ಎಂಬ ಮತ್ತೊಂದು ವಂಚನೆಯಷ್ಟೇ, ರಾಜ್ಯದ ಜನತೆಯ ಹಿತ ಕಾಯುವ ಉದ್ದೇಶದ ಲವಲೇಶವೂ ಇಲ್ಲ ಎಂದು ಟೀಕಿಸಿದೆ.

ಇನ್ನೊಂದು ಟ್ವೀಟ್ನಲ್ಲಿ, ನಿರುದ್ಯೋಗ ಭತ್ಯೆಯನ್ನು ಶ್ರೀ ರಾಹುಲ್ ಗಾಂಧಿಯವರಿಗೂ (Rahul Gandhi) (ಪದವೀಧರರಾಗಿದ್ದರೆ ಮಾತ್ರ) ಹಾಗೂ ಡಾ|| ಯತೀಂದ್ರ ಸಿದ್ದರಾಮಯ್ಯನವರಿಗೂ ದಯಪಾಲಿಸಿ ಎಂದು ರಾಜ್ಯ ಬಿಜೆಪಿ

(Sate BJP) ವ್ಯಂಗ್ಯವಾಡಿದೆ. ಗ್ಯಾರಂಟಿ ಯೋಜನೆಗಳ ಜಾರಿಯ ನಂತರ ಟ್ವೀಟ್ ಮಾಡಿದ್ದ ಕಾಂಗ್ರೆಸ್, ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರೇ,

ಇದನ್ನೂ ಓದಿ : https://vijayatimes.com/old-woman-was-raped/

ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ, ಬೊಮ್ಮಾಯಿ (Basavaraj Bommai) ಅವರೇ, ನಿಮ್ಮ ಮನೆಗೂ ಫ್ರೀ, ಶೋಭಾ ಅವರೇ, ನಿಮಗೂ ಪ್ರಯಾಣ ಫ್ರೀ, ಸಿಟಿ ರವಿ ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ,

ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ) ಇದು ನಮ್ಮ ಗ್ಯಾರಂಟಿ ಎಂದು (BJP sarcasm about Siddaramaiah) ಟೀಕಿಸಿತ್ತು.

ಇದೀಗ ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ಖಂಡಿತಾ ಸ್ವಾಮಿ, ಹಾಗೆಯೇ ನಿರುದ್ಯೋಗ ಭತ್ಯೆಯನ್ನು ಶ್ರೀ ರಾಹುಲ್ ಗಾಂಧಿಯವರಿಗೂ (ಪದವೀಧರರಾಗಿದ್ದರೆ ಮಾತ್ರ) ಹಾಗೂ

ಡಾ|| ಯತೀಂದ್ರ ಸಿದ್ದರಾಮಯ್ಯನವರಿಗೂ ದಯಪಾಲಿಸಿ ವ್ಯಂಗ್ಯವಾಡಿತ್ತು.

ಇನ್ನು ಯುವನಿಧಿ ಯೋಜನೆಯೂ (Youth Fund Scheme) 2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ವಿಧದ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ರೂ.3,000

ಹಾಗೂ ಡಿಪ್ಲೊಮಾ (diploma holders) ಪಾಸಾದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡಲಾಗುವುದು.

ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು

ಮತ್ತು ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ನಮ್ಮ ಈ ಯೋಜನೆಯ ಉದ್ದೇಶ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Exit mobile version