ನಿರುದ್ಯೋಗಿಗಳಿಗೆ ಮಾಸಾಶನ ಕೊಡುತ್ತೇವೆ ಎಂದು ಛತ್ತೀಸ್‌ಘಡದಲ್ಲಿಯೂ ಕಾಂಗ್ರೆಸ್ ಹೇಳಿತ್ತು, ಈಗ ಅದರ ನೆನಪೇ ಇಲ್ಲ – ಬಿಜೆಪಿ ವ್ಯಂಗ್ಯ

Karntaka: ನಿರುದ್ಯೋಗಿ ಯುವಕ ಯುವತಿಯರಿಗೆ 2,500 ರೂ. ಮಾಸಾಶನ ಕೊಡುತ್ತೇವೆ ಎಂದು ಛತ್ತೀಸ್‌ಘಡದಲ್ಲಿಯೂ(BJP satirical to congress) ಇದೇ ಕಾಂಗ್ರೆಸ್ ಪಕ್ಷ ಹೇಳಿತ್ತು.

ಆದರೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿಗರಿಗೆ ಅದರ ನೆನಪೇ ಇರಲಿಲ್ಲ. ವಿಧವೆಯರಿಗೆ ತಿಂಗಳಿಗೆ 1,000 ಮಾಸಿಕ ಪಿಂಚಣಿ ಕತೆಯೂ ಅಷ್ಟೇ, ಚುನಾವಣಾ ಘೋಷಣೆಗೆ ಮಾತ್ರ ಸೀಮಿತ ಎಂದು ರಾಜ್ಯ ಬಿಜೆಪಿ(State BJP) ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್‌(Twee) ಮಾಡಿರುವ ಬಿಜೆಪಿ, ಕಾಂಗ್ರೆಸ್‌ ರಾಜ್ಯದಲ್ಲಿ‌ ಇನ್ನಷ್ಟು ಯೋಜನೆ ಘೋಷಿಸಲಿ. ಪ್ರತಿಯೊಂದು ಯೋಜನೆಯೂ ಆ ಪಕ್ಷ ಅಸ್ತಿತ್ವಕ್ಕೆ ನಡೆಸುತ್ತಿರುವ ಹೆಣಗಾಟವನ್ನು ಜಗಜ್ಜಾಹೀರು ಮಾಡುತ್ತದೆ.

ಜತೆಗೆ  ಪ್ರಿಯಾಂಕಾ ಗಾಂಧಿ(Priyanka gandhi) ಅವರಿಗೆ ಈ ಕ್ಷಣಕ್ಕೆ ಹೇಳಿದ್ದು ಮರುಕ್ಷಣಕ್ಕೆ ನೆನಪಿರುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದು ಲೇವಡಿ ಮಾಡಿದೆ.

ಇನ್ನೊಂದು ಟ್ವೀಟ್‌ನಲ್ಲಿ,  ಈ ಮೊದಲು‌ ಕಾಲೇಜು ವಿದ್ಯಾರ್ಥಿಗಳನ್ನು ನೀವು ವಂಚಿಸಿದ್ದೀರಿ.

ವಿದ್ಯಾರ್ಥಿಗಳಿಗೆ ‌ಕಾಲೇಜಿಗೆ ಹೋಗಲು ಅನುಕೂಲವಾಗಲು ಬಡ್ಡಿ ರಹಿತ ಸಾಲ ನೀಡುತ್ತೇವೆ ಎಂದು  ಕಾಂಗ್ರೆಸ್‌ ಮಧ್ಯಪ್ರದೇಶದಲ್ಲಿ‌(BJP satirical to congress) ಹೇಳಿತ್ತು.

ಚುನಾವಣೆ ಕಳೆದ ಮೇಲೆ ಅದರ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ. ಮಹಿಳೆಯರಿಗೆ ನೀಡಿದ ಸ್ಮಾರ್ಟ್ ಫೋನ್(Smart phone) ಭರವಸೆಯೂ ಹಾಗೆಯೇ.  

ಅಭ್ಯಾಸ ಬಲದಲ್ಲಿ ಮುಂದುವರಿದಿರುವ  ಕಾಂಗ್ರೆಸ್‌ ಕರ್ನಾಟಕದಲ್ಲೂ ಅದನ್ನೇ ಮಾಡುತ್ತಿದೆ.

ಪ್ರಚಾರಕ್ಕೆ ಬೇಕಾಗಿ ಗೃಹಲಕ್ಷ್ಮಿ(Gruha lakshmi) ಎಂಬ ಪರಿಕಲ್ಪನೆಯನ್ನು  ಪ್ರಿಯಾಂಕಾ ಗಾಂಧಿ ಹರಿಬಿಟ್ಟಿದ್ದಾರೆ. ಉದ್ಯೋಗ ಸೃಷ್ಟಿಯ‌ ಕಡೆಗೆ ರಾಜ್ಯ ದಾಪುಗಾಲಿಡುತ್ತಿರುವಾಗ  ಕಾಂಗ್ರೆಸ್‌ ನಿರುದ್ಯೋಗ ಬಯಸುತ್ತಿದೆ. 

ಅಳಿವು ಉಳಿವಿನ ಕೊನೆಯ ಹಂತಕ್ಕೆ ತಲುಪಿದಾಗ ಸುಳ್ಳು ಹೇಳುವುದು ಮತ್ತು ಹುಸಿ ಭರವಸೆ ನೀಡುವುದು ಸಹಜವಾಗಿ ಮೈಗೂಡುತ್ತದಂತೆ‌. 

ಕಾಂಗ್ರೆಸ್‌ ಪಕ್ಷದ ಪರಿಸ್ಥಿತಿ‌ ಹಾಗೆಯೇ ಆಗಿದೆ. ಚುನಾವಣೆಗೂ ಮುನ್ನ ಯೋಜನೆಗಳ ಸಾಧ್ಯಾಸಾಧ್ಯತೆ ಅರಿಯದೆ ಪ್ರಚಾರಕ್ಕಾಗಿ ಘೋಷಿಸುವುದು ಈಗ ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: https://vijayatimes.com/priyanka-gandhi-unveiled-project/

ಮತ್ತೊಂದು ಟ್ವೀಟ್‌ನಲ್ಲಿ, ಛತ್ತೀಸ್ಗಡದಲ್ಲಿ ನಿರುದ್ಯೋಗಿ ಯುವತಿಯರಿಗೆ ₹2,500 ಮಾಸಿಕ ಭತ್ಯೆ  ನೀಡಲಿಲ್ಲ. ವಿಧವೆಯರಿಗೆ ಮಾಸಿಕ ₹1,000 ಪೆನ್ಷನ್ ನೀಡಲಿಲ್ಲ. 

ಹಿಮಾಚಲ ಪ್ರದೇಶದಲ್ಲಿ 18-60 ವರ್ಷದ ಮಹಿಳೆಯರಿಗೆ ₹1,500 ನೆರವು ನೀಡಲಿಲ್ಲ. ರಾಜಸ್ಥಾನದಲ್ಲಿ(Rajashan) ನಿರುದ್ಯೋಗಿ ಯುವತಿಯರಿಗೆ ₹3,500 ಮಾಸಿಕ ನಿರುದ್ಯೋಗ ಭತ್ಯೆ ನೀಡಲಿಲ್ಲ. 

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿಲ್ಲ ಹೀಗೆ ಕಾಂಗ್ರೆಸ್‌ಎಲ್ಲ ಕಡೆಯೂ ಕೊಟ್ಟ ಮಾತನ್ನು ತಪ್ಪಿದೆ ಎಂದು ಬಿಜೆಪಿ ಟೀಕಿಸಿದೆ.

Exit mobile version