ಇವರು ಯೋಧರಾಗುವವರಲ್ಲ, ಕಾಂಗ್ರೆಸ್ ಚೇಲಾಗಳು : ಬಿಜೆಪಿ!

congress

ಪ್ರತಿಭಟನೆಗೆ(Protest) ಬರುವಾಗ ಪೆಟ್ರೋಲ್ ಬಾಂಬ್(Petrol Bomb), ಸೀಮೆ ಎಣ್ಣೆ(Kerosene), ಹಳೆ ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ, ರೈಲು, ಬಸ್ಸುಗಳಿಗೆ ಬೆಂಕಿ ಹಚ್ಚಲು ಅನುಕೂಲವಾಗುತ್ತದೆ ಎಂಬ ಸಂದೇಶ ಪ್ರತಿಭಟನಾಕಾರರ ನಡುವೆ ವಿನಿಮಯವಾಗಿದೆ. ಸೇನೆ ಸೇರ ಬಯಸುವವರು ಹೀಗೆ ಯೋಚಿಸಲು ಹೇಗೆ ಸಾಧ್ಯ? ಇವರು ಯೋಧರಾಗುವವರಲ್ಲ, ಕಾಂಗ್ರೆಸ್(Congress) ಚೇಲಾಗಳು ಎಂದು ಬಿಜೆಪಿ(BJP) ಸರಣಿ ಟ್ವೀಟ್‍ಗಳ(Tweet) ಮೂಲಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.

ಅಗ್ನಿಪಥ್ ಯೋಜನೆ(Agnipath Yojana) ಸಮರ್ಥಿಸಿ ಟ್ವೀಟ್ ಮಾಡಿದ್ದು, ರಷ್ಯಾ, ಉತ್ತರ ಕೊರಿಯಾ, ಇರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಸೇನೆ ಸೇರುವುದು ಕಡ್ಡಾಯ. ತಪ್ಪಿದ್ದಲ್ಲಿ ಅವರಿಗೆ ಸರ್ಕಾರದಿಂದ ಲಭಿಸುವ ಅನೇಕ ಸವಲತ್ತುಗಳಿಗೆ ಅನರ್ಹರಾಗುತ್ತಾರೆ. ಆದರೆ, ಭಾರತದಲ್ಲಿನ ಅಗ್ನಿಪಥ್ ಯೋಜನೆಗೆ ಇಂತಹ ಯಾವುದೇ ಷರತ್ತು ವಿಧಿಸಿಲ್ಲ, ಆದರೂ ವಿರೋಧವೇಕೆ? ಅಗ್ನಿಪಥ್ ಯೋಜನೆಯಡಿಯಲ್ಲಿ ಯಾವುದೇ ಬಲವಂತವಿಲ್ಲ ಮತ್ತು ಆಕಾಂಕ್ಷಿಗಳು ತಮ್ಮ ಸ್ವ-ಇಚ್ಛೆಯಿಂದ ಸೇರಬೇಕು ಎಂದು ಕೇಂದ್ರ ಸರ್ಕಾರ(Central Government) ಸ್ಪಷ್ಟ ಪಡಿಸಿದೆ. ಆದರೆ ಕಾಂಗ್ರೆಸ್ ಪಕ್ಷ ವಿನಾಕಾರಣ ಗಲಭೆ, ದೊಂಭಿಗಳಿಗೆ ಕಾರಣವಾಗುತ್ತದೆ.

ಇದು ದೇಶದ ಯೋಧ ಪರಂಪರೆಗೆ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಖಾಸಗಿ ಸೇನಾ ತರಬೇತಿ ಕೇಂದ್ರಗಳು ಆರ್ಮಿ ಕೋಚಿಂಗ್ ಸೆಂಟರ್ ಹೆಸರಿನಲ್ಲಿ ದಂಧೆ ಮಾಡುತ್ತಿದ್ದವು. ಈ ಸಂಸ್ಥೆಗಳು ಅಗ್ನಿಪಥ್ ಯೋಜನೆಯಿಂದ ತಮ್ಮ ದಂಧೆಗೆ ಪೆಟ್ಟು ಬೀಳುತ್ತದೆ ಎಂಬ ಭೀತಿಯಿಂದ ಅಗ್ನಿಪಥ್ ವಿರುದ್ಧ ಯುವಜನತೆಯನ್ನು ಎತ್ತಿಕಟ್ಟುತ್ತಿದ್ದಾರೆ. ವಿಶ್ವದ ಅಗ್ರಮಾನ್ಯ ಸೇನೆಯ ಯೋಧರು ಹಾಗೂ ಭಾರತೀಯ ಯೋಧರ ನಡುವೆ ಸರಾಸರಿ ವಯೋಮಾನದ ವಿಚಾರದಲ್ಲಿ ಏರುಪೇರು ಇದೆ. ಅಮೆರಿಕಾದ ಯೋಧರ ಸರಾಸರಿ ವಯಸ್ಸು 28, ಇಂಗ್ಲೆಂಡ್ 26, ಆದರೆ ಭಾರತದ ಯೋಧರ ಸರಾಸರಿ ವಯಸ್ಸು 32 ವರ್ಷ.

ಆದರೆ ಅಗ್ನಿಪಥ್ ಯೋಜನೆಯಿಂದ ಈ ಅಂತರ ಕಡಿಮೆಯಾಗಲಿದೆ. ವಿಶ್ವದ ಅತ್ಯಂತ ಯುವ ಸೇನೆ ಭಾರತದ್ದಾಗಲಿದೆ. ತೆಲಂಗಾಣ, ಸಿಕಂದರಾಬಾದ್, ಬಿಹಾರದಲ್ಲಿ ತನಿಖೆ ಸಂದರ್ಭದಲ್ಲಿ ಲಭಿಸಿದ ಮಾಹಿತಿಗಳಿಂದ, ಬಂಧಿತರಾದವರ ಮೊಬೈಲ್‍ಗೆ ಹಿಂಸಾಚಾರವನ್ನು ಎಲ್ಲಿ, ಹೇಗೆ ನಡೆಸಬೇಕೆಂಬ ಬಗ್ಗೆ ಪೂರ್ವ ನಿರ್ದೇಶಿತ ಮಾಹಿತಿ ರವಾನೆಯಾಗಿದೆ. ಇದು ಪ್ರತಿಪಕ್ಷಗಳ ಹೋರಾಟದ ನೀತಿಯೇ? ದೇಶವೇ ಹೊತ್ತಿ ಉರಿಯುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ(Priyanka Vadra) ನೀಡಿರುವ ಹೇಳಿಕೆ ಏನನ್ನು ಸೂಚಿಸುತ್ತದೆ?

ಶಾಂತಿಯುತ ಪ್ರತಿಭಟನೆ ಮಾಡಿ, ಆದರೆ ಹೋರಾಟ ನಿಲ್ಲಿಸಬೇಡಿ ಎಂದು ಹೇಳುವುದು ಉದ್ರಿಕ್ತರನ್ನು ಇನ್ನಷ್ಟು ಪ್ರಚೋದಿಸಿದಂತಲ್ಲವೇ? ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಹೋರಾಟ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಹೆಣೆದ ಟೂಲ್ ಕಿಟ್. ದೇಶದ ಅಖಂಡತೆಗೆ ಭಂಗ ತರುವುದು ಹಾಗೂ ಆಂತರಿಕ ಶಾಂತಿ ಕದಡುವುದು ಮಾತ್ರ ಅವರ ಉದ್ದೇಶ. ಅಗ್ನಿಪಥ್ ಮೂಲಕ ದೇಶದ ಯುವಜನತೆ ರಾಷ್ಟ್ರವಾದಿಗಳಾಗುತ್ತಾರೆ ಎಂಭ ಭಯವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Exit mobile version