Bengaluru : ಪುತ್ರವಾತ್ಸಲ್ಯ ಅತಿಯಾದರೆ ಹೀಗೇಯೇ! ಸಿದ್ದರಾಮಯ್ಯನೋರು(Siddaramaiah) ತಮ್ಮ ಕ್ಷೇತ್ರ ಮಗನಿಗೆ ಬಿಟ್ಟು, ಮುಂದಿನ ನೆಲೆ ಎಲ್ಲಿ ಎಂಬುದು ತಿಳಿಯದೇ, ಬಾದಾಮಿಯಲ್ಲೂ ನಿಲ್ಲದೆ, ಕೋಲಾರದಲ್ಲೂ ತಳ ಊರದೇ ಎರಡೆರಡು ದೋಣಿಯ ಮೇಲೆ ಕಾಲಿಟ್ಟರೆ ಇನ್ನೇನಾಗುತ್ತೆ ಹೇಳಿ?

‘ಎರಡು ದೋಣಿ ಮೇಲೆ ಕಾಲಿಡಬೇಡ್ರೋ’ ಎಂಬ ದೊಡ್ಡೋರ ಮಾತು ಸುಳ್ಳಲ್ಲ ನೋಡಿ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ. ಈ ಕುರಿತು ಟ್ವೀಟ್(Tweet) ಮಾಡಿರುವ ಬಿಜೆಪಿ, ಯಾವ ಸಮುದಾಯದ ಮತಗಳು ಎಷ್ಟಿವೆ ಎಂದು ಸರ್ವೇ ಮಾಡಿಸಿಯೇ ಸಿದ್ದರಾಮಯ್ಯನವ್ರು ಕೋಲಾರದಲ್ಲಿ ನಿಲ್ಲೋ ಪ್ಲಾನ್ ಮಾಡಿದ್ರು.
ಇದನ್ನೂ ಓದಿ : https://vijayatimes.com/drishyam-2-hits-box-office/
ಆದರೆ ಈಗ ಅದೇ ಸಮುದಾಯದ ಪ್ರಮುಖರು ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡ್ತಾ ಇದ್ದಾರೆ. ಈ ಹಿಂದೆ ಇಂಥ ಅಸ್ತ್ರಗಳನ್ನು ಸ್ವಪಕ್ಷೀಯರ ಮೇಲೆ ಪ್ರಯೋಗಿಸಿಯೇ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯಗೆ ಈಗ ಕರ್ಮ ವಾಪಸಾಗಿದೆ. ಕ್ಷೇತ್ರ ಪರ್ಯಟನೆ ಮಾಡುತ್ತಿರುವ ಸಿದ್ದರಾಮಯ್ಯ ಅವರು ಕಾಲಿಟ್ಟ ಕಡೆಯಲ್ಲಿ ಅರಾಜಕತೆ ಶುರುವಾಗುತ್ತಿದೆ.
https://fb.watch/gYidvj4I1B/ ಪ್ರವಾಸೋದ್ಯಮ ಇಲಾಖೆಯವರಿಗೆ ಮೊದಲು ಮಾಡಿರುವುದನ್ನು ಸರಿಪಡಿಸುವ ಯೋಗ್ಯತೆ ಇಲ್ಲ!
ಹೀಗಾಗಿ ಹಿರಿಯ ನಾಯಕ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೇ ತಲೆನೋವಾಗಿದ್ದು, ಇವರಿಂದಾಗಿ ಕಾಂಗ್ರೆಸ್ ನಾಯಕರ ಕ್ಷೇತ್ರಗಳು ಮ್ಯೂಸಿಕಲ್ ಚೇರ್ ಆಗಿವೆ ಎಂದು ಟೀಕಿಸಿದೆ. ಕಾಂಗ್ರೆಸ್ ಪಕ್ಷ(Congress Party) ಅಧಿಕಾರದಲ್ಲಿದ್ದಾಗ ದೇಶದ ಹಿತ ಕಾಯದೇ, ನಕಲಿ ಗಾಂಧಿ ಕುಟುಂಬದ ಹಿತ ಕಾಯುವುದರಲ್ಲಿ ಸಮಯ ಕಳೆಯುತ್ತಿತ್ತು.

ಕಾಂಗ್ರೆಸ್ಸಿನ ಧಮ್ ತಾಕತ್ತನ್ನು ನೋಡಿದ ಮೇಲೆಯೆ ದೇಶದ ಜನರು ಮೂಲೆಗೆ ತಳ್ಳಿದ್ದಾರೆ. ಕಾಂಗ್ರೆಸ್ ಧಮ್ ಎಂದರೆ ಭ್ರಷ್ಟಾಚಾರ. ಕಾಂಗ್ರೆಸ್ ತಾಕತ್ತು ಎಂದರೆ ನಕಲಿ ಗಾಂಧಿ ಕುಟುಂಬ. ತೋಟ, ಹೊಲ ಗದ್ದೆಗಳಲ್ಲಿ ಒಮ್ಮೊಮ್ಮೆ ಬೆಳೆಗಿಂತ ಕಳೆ ಹೆಚ್ಚಾಗುತ್ತದೆ, ಹಾಗಂತ ಕಳೆ ಬೆಳೆಸಲು ಸಾಧ್ಯವೇ?
ಇದನ್ನೂ ಓದಿ : https://vijayatimes.com/state-govt-over-app-service/
ಟಿಕೆಟ್‌ಗೆ ಅರ್ಜಿ ಸಲ್ಲಿಸಿದಾಕ್ಷಣ ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುವ ಹಗಲುಗನಸಿನಿಂದ ಕಾಂಗ್ರೆಸ್ ಹೊರಬರಬೇಕು. ಕಾಂಗ್ರೆಸ್ ಎಂಬ ಕಳೆಯನ್ನು ರಾಜ್ಯದ ಜನತೆ ನಾಶ ಮಾಡಲಿದ್ದಾರೆ ಎಂದು ಹೇಳಿದೆ.
- ಮಹೇಶ್.ಪಿ.ಎಚ್