ಬ್ಲಾಕ್ ಆಯ್ತು, ವೈಟ್ ಆಯ್ತು ಇದೀಗ ಎಲ್ಲೋ ಫಂಗಸ್ ಪತ್ತೆ!

ಲಖನೌ, ಮೇ. 24: ದೇಶದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ತಗ್ಗುತ್ತಿರುವ ಸಮಯದಲ್ಲೇ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಪ್ರಕರಣಗಳು ಜನರನ್ನು ಕಾಡಲಾರಂಭಿಸಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ದೇಶದಲ್ಲಿ ಮೊದಲ ಯೆಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನ ವ್ಯಕ್ತಿಯಲ್ಲಿ ಅಪರೂಪದ ಯೆಲ್ಲೋ ಫಂಗಸ್ ಕಾಣಿಸಿಕೊಂಡಿದೆ. ಬ್ಲ್ಯಾಕ್ ಹಾಗೂ ವೈಟ್ ಫಂಗಸ್ಗಿಂತಲೂ ಈ ಯೆಲ್ಲೋ ಫಂಗಸ್ ಅತ್ಯಂತ ಮಾರಕ ಕಾಯಿಲೆ ಎಂದು ವೈದ್ಯರು ಹೇಳುತ್ತಿದ್ದಾರೆ. ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ದೇಹದ ಹೊರ ಭಾಗವೂ ಕಾಣಿಸಿಕೊಂಡರೆ ಯೆಲ್ಲೋ ಫಂಗಸ್ ದೇಹದ ಒಳಗೆ ಬೆಳೆಯುತ್ತದೆಯಂತೆ. ಒಳ ಅಂಗಾಂಗಗಳು ಯೆಲ್ಲೋ ಫಂಗಸ್ಗೆ ತುತ್ತಾದರೆ ಊದಿಕೊಳ್ಳುವುದು, ಕೀವು ಕಾಣಿಸಿಕೊಳ್ಳಲಿದೆಯಂತೆ.

ಒಳ ಅಂಗಾಂಗಗಳಲ್ಲಿ ಕೀವು-ನೋವು ಕಾಣಿಸಿಕೊಂಡರೆ ರೋಗಿಯ ಆರೋಗ್ಯದ ಮೇಲೆ ಅತ್ಯಂತ ಭಯಾನಕ ಪರಿಣಾಮ ಬೀರಲಿದೆ. ಯೆಲ್ಲೋ ಫಂಗಸ್ನಿಂದ ಅಂಗಾಂಗ ವೈಕಲ್ಯ ಸಂಭವಿಸಬಹುದು. ಎಲ್ಲಾ ರೀತಿಯ ಫಂಗಸ್ ಬೆಳೆಯಲು ಮುಖ್ಯ ಕಾರಣವಾಗುವುದು ಅಶುಚಿತ್ವ ಹಾಗೂ ಮೆಡಿಕಲ್ ಆಕ್ಸಿಜನ್ ಅತಿಯಾದ ಬಳಕೆ ಆಗಿರುತ್ತದೆ. ಕೊರೋನಾ ಸೋಂಕಿನ ವಿರುದ್ಧ ಅತಿಯಾದ ಸ್ಟಿರಾಯಿಡ್ಸ್ ಬಳಕೆಯೇ ಈ ಫಂಗಸ್ಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

Exit mobile version