ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಟರ್ಮಿನಲ್ 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ ಸಿಕ್ಕಿದ್ದು, ಇಂದು (ಡಿ.29) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, (Ramalinga Reddy) ಆಹಾರ ಸಚಿವ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ (K H Muniyappa)ನವರು‌ KSRTC ಪ್ಲೈಬಸ್ ಮತ್ತು ಬಿಎಂಟಿಸಿ ವಾಯುವಜ್ರ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.

ಈ ಹೈಟೆಕ್ ಬಸ್ ನಿಲ್ದಾಣ (High-Tech Bus Stand) ವಿಐಪಿ ಲಾಂಜ್, ಎಸಿ ಲಾಂಜ್, ಶೌಚಾಲಯ, ಸಹಾಯವಾಣಿ ಕೇಂದ್ರ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ವ್ಯವಸ್ಥಿತ ಮತ್ತು ಸಮರ್ಪಕ ಸಾರಿಗೆ ಸೇವೆ ಕಲ್ಪಿಸುವ ದೃಷ್ಟಿಯಿಂದ ಬಿಎಂಟಿಸಿ (BMTC) ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು 40 ಸಿಬ್ಬಂದಿ ನಿಯೋಜಿಸಿದೆ.

ಪ್ರತಿನಿತ್ಯ ಬೆಂಗಳೂರಿನ (Bengaluru) ವಿವಿದೆಡೆಗೆ ಬಿಎಂಟಿಸಿ ವಾಯು ವಜ್ರ ಬಸ್​ಗಳು ಸಂಚರಿಸಲಿವೆ. ಮೈಸೂರು, ಮಡಿಕೇರಿ, ಕುಂದಾಪುರಕ್ಕೆ KSRTC ಪ್ಲೈಬಸ್​ಗಳು ತೆರಳಲಿವೆ. ನಿತ್ಯ ಸಾವಿರಾರು ಜನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಗಾರ್ಡನ್ ಟರ್ಮಿನಲ್ (Garden Terminal) ನಂತೆ ಈ ನಿಲ್ದಾಣ ವಿಶೇಷತೆ ಹೊಂದಿದೆ.

ವಿಮಾನಯಾನ ಪ್ರಯಾಣಿಕರ ಅನುಕೂಲಕ್ಕಾಗಿ ಬಹು ಮಾದರಿಯ ಸಾರಿಗೆ ಕೇಂದ್ರದ ಮೂರು ‘ಬಸ್‌ ಬೇ’ಗಳಲ್ಲಿ 15 ಅಂಕಣಗಳ ಮೂಲಕ ವಾಯುವಜ್ರ ಬಸ್‌ ಸೇವೆ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಿರಲಿ ಎಂದು ಟರ್ಮಿನಲ್‌-2 ರ ಬಿ-1 ಮಹಡಿಯಲ್ಲಿ ಎರಡು ಸಹಾಯವಾಣಿ ಕೇಂದ್ರಗಳನ್ನು ತೆರೆದಿದ್ದು, ಅವು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ.

ವ್ಯವಸ್ಥಿತ ಮತ್ತು ಸಮರ್ಪಕ ಸಾರಿಗೆ ಸೇವೆ ಕಲ್ಪಿಸುವ ದೃಷ್ಟಿಯಿಂದ ಬಿಎಂಟಿಸಿ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು 40 ಸಿಬ್ಬಂದಿ ನಿಯೋಜಿಸಿದೆ. ಜತೆಗೆ, ಬಸ್‌ ಕಾರ್ಯಾಚರಣೆ ವೇಳಾಪಟ್ಟಿಯನ್ನು ಪಿಐಎಸ್‌ ಬೋರ್ಡ್‌ಗಳಲ್ಲಿ (PIS Board) ಪ್ರದರ್ಶಿಸಲಾಗುತ್ತೆ.

ಭವ್ಯಶ್ರೀ ಆರ್ ಜೆ

Exit mobile version