ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಾಗೂ ಹೊಸ ವಾಹನಗಳನ್ನು ಖರೀದಿಸುವುದನ್ನು ಪ್ರೇರೇಪಿಸಲು ಕೇಂದ್ರ ಸರಕಾರ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ರೂಪಿಸಿದೆ. ಇದರಡಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಸ್ಗಳು (Bus), ನಿಗದಿತ ಅವ ಪೂರ್ಣಗೊಳಿಸಿರುವ, ಪದೇ ಪದೇ ರಸ್ತೆಯಲ್ಲಿ ಕೆಟ್ಟು ನಿಲ್ಲುವ, ದಟ್ಟ ಹೊಗೆ ಹೊರಸೂಸುವ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ.
ಅಂತೆಯೇ ಬಿಎಂಟಿಸಿ ಇಂತಹ ಬಸ್ಗಳನ್ನು ಗುರುತಿಸಿ, ಗುಜರಿಗೆ ಹಾಕಲು ಕ್ರಮ ವಹಿಸಿದೆ.ಅಪಘಾತ ಹೆಚ್ಚಳದ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಹೈಕೋರ್ಟ್ (Highcourt) ಆದೇಶದಂತೆ ಬಿಎಂಟಿಸಿ ಹೊಸ ಬಸ್ ಖರೀದಿಗೆ ಮುಂದಾಗಿದೆ. ಬಿಎಂಟಿಸಿಯಲ್ಲಿ ಡೀಸೆಲ್ಚಾಲಿತ 5643 ಹಾಗೂ ವಿದ್ಯುತ್ ಚಾಲಿತ 504 ಬಸ್ಗಳನ್ನೊಳಗೊಂಡಂತೆ ಒಟ್ಟು 6147 ಬಸ್ಗಳು ಕಾರ್ಯಾಚರಿಸುತ್ತಿವೆ. ಅವುಗಳಲ್ಲಿ ಕೆಲ ಬಸ್ಗಳು ನಿಗದಿತ ಅವಧಿ ಪೂರ್ಣಗೊಂಡರೂ ಕಾರ್ಯಾಚರಣೆ ಮಾಡುತ್ತಿವೆ.
ಹಣಕಾಸಿನ ಕೊರತೆಯಿಂದಾಗಿ ಹೊಸ ಬಸ್ ಖರೀದಿಸಿರಲಿಲ್ಲ .ಇದ್ದವುಗಳನ್ನೇ ಪದೇ ಪದೇ ರಿಪೇರಿ ಮಾಡಿ ರಸ್ತೆಗಿಳಿಸಲಾಗುತ್ತಿತ್ತು .ಇದರಿಂದಾಗಿ ಅವೂ ರಸ್ತೆ ಮಧ್ಯೆ ಪದೇ ಪದೇ ಕೈಕೊಡುತ್ತಿವೆ. ಮಾತ್ರವಲ್ಲದೆ ಅತಿಯಾದ ಹೊಗೆ ಕಾರುವುದರಿಂದ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದ್ದವು. ಒಟ್ಟಾರೆ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಈಗ ಇವೆಲ್ಲವುಗಳಿಂದಲೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿವೆ. ಕಾರಣ ಬಿಎಂಟಿಸಿ (BMTC) 645 ಹಳೇಯ ಬಸ್ ಗಳನ್ನು ಗುಜರಿಗೆ ಹಾಕಲಿದೆ.
ಇನ್ನು 2023-24ನೇ ಸಾಲಿನ ಫೆಬ್ರವರಿ (February) 7ರವರೆಗೆ ಸಂಸ್ಥೆಯ ವಿವಿಧ ಡಿಪೋಗಳಲ್ಲಿ ನಿಗದಿತ ಅವ ಪೂರ್ಣಗೊಳಿಸಿರುವ ಒಟ್ಟು 645 ಬಸ್ಗಳನ್ನು ನಿರುಪಯುಕ್ತ ಎಂದು ಗುರುತಿಸಿ, ಅವುಗಳನ್ನು ಸಂಚಾರ ಮುಕ್ತಗೊಳಿಸಲಾಗಿದೆ. ಅಲ್ಲದೆ, ನಿಯಮಾನುಸಾರ ಗುಜರಿಗೆ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಅಕಾರಿಗಳು ತಿಳಿಸಿದ್ದಾರೆ.
ಹಳೆಯ ಬಸ್ಗಳನ್ನು ಗುಜರಿಗೆ ಹಾಕುತ್ತಿದ್ದಂತೆ ಬಸ್ಗಳ ಕೊರತೆ ಉಂಟಾಗದಿರಲಿ ಎಂಬ ಕಾರಣಕ್ಕೆ ಬಿಎಸ್-6ನ 820 ಡೀಸೆಲ್, 320 ಹವಾನಿಯಂತ್ರಿತ (AC) ವಿದ್ಯುತ್ ಚಾಲಿತ ಮತ್ತು 120 ಹವಾನಿಯಂತ್ರಣ ರಹಿತ (Non AC ) ವಿದ್ಯುತ್ ಚಾಲಿತ ಬಸ್ಗಳು ಹಾಗೂ 10 ಡಬಲ್ ಡೆಕ್ಕರ್ ಬಸ್ಗಳನ್ನು ಜಿಸಿಸಿ ಮಾದರಿಯಲ್ಲಿ ಖರೀದಿಸಲು ಬಿಎಂಟಿಸಿ ಮುಂದಾಗಿರುವುದು ಪ್ರಯಾಣಿಕರಲ್ಲಿ ನೆಮ್ಮದಿ ಮೂಡಿಸಿದೆ.