Bengaluru: ಬೆಂಗಳೂರಿನ ಮೆಜೆಸ್ಟಿಕ್ (Majestic) ನಿಲ್ದಾಣದ ಶೌಚಾಲಯಗಳ ಟೆಂಡರ್ ಮಾಹಿತಿ, ಶಾಂತಿನಗರ ಬಿಎಂಟಿಸಿ (BMTC) ಕಚೇರಿಯ ಪಾರ್ಕಿಂಗ್ ಸ್ಥಳದ ಟೆಂಡರ್ ದಾಖಲೆ, ಬಿಟಿಎಂ ಲೇಔಟ್ (BTM Layout) ಬಸ್ ನಿಲ್ದಾಣದ ಖಾಲಿ ಜಾಗಕ್ಕೆ ಸೇರಿರುವ ಟೆಂಡರ್ ಗಳಲ್ಲಿ ಗೋಲ್ಮಾಲ್ (Golmaal) ನಡೆಸಿ ಬಿಎಂಟಿಸಿ ನಿಗಮದ ಬೊಕ್ಕಸಕ್ಕೆ ನಷ್ಟ ಮಾಡಿರುವುದು ಅಷ್ಟೇ ಅಲ್ಲದೆ ಈ ತಪ್ಪನ್ನು ಮುಚ್ಚಿ ಹಾಕಲು ದಾಖಲೆಗಳನ್ನೇ ಕಾಣದಂತೆ ಮಾಡಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ.
ಚಾಲಾಕಿ ಅಧಿಕಾರಿಗಳು ಭದ್ರತಾ ಠೇವಣಿ ಇಎಂಡಿ ಹಣವನ್ನು ದೋಚಲು ಅದಕ್ಕೆ ಸಂಬಂಧಿಸಿದ ಕಡತವನ್ನು ನಾಶ ಮಾಡಿ ಸಿಕ್ಕಿದ್ದಾರೆ. ಬೆಂಗಳೂರು (Bengaluru) ಮಹಾನಗರ ಸಾರಿಗೆ ಸಂಸ್ಥೆಯ ವಾಣಿಜ್ಯ ಶಾಖೆಯಲ್ಲಿ ನಡೆದಿರುವ ಕರ್ಮಕಾಂಡಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಸುಧಾಕರ್ (Sudhakar) ಎಂಬುವರಿಗೆ ಶಾಂತಿನಗರ (Shanthinagar) ಟಿಟಿಎಂಸಿ (TTMC) ನಿಲ್ದಾಣದಲ್ಲಿ ಪಾರ್ಕಿಂಗ್ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದ್ದು, ಈ ಟೆಂಡರ್ ಗೆ ಸಂಬಂಧಪಟ್ಟ ಮೂಲ ದಾಖಲೆಗಳೇ ಕಣ್ಮರೆಯಾಗಿದೆ.
ಬಿ.ಕೆ ಮಮತಾ (B.K.Mamatha) ಅವರು ಸಹಾಯಕ ಸಂಚಾರ ಅಧಿಕಾರಿಯಾಗಿದ್ದಾಗ ಹಾಗೂ ಗುಣಶೀಲ ಅವರು ಸಹಾಯಕ ಸಂಚಾರ ನಿರೀಕ್ಷಕಿ ಆಗಿದ್ದಾಗ ಉದ್ದೇಶಪೂರ್ವಕವಾಗಿಯೇ ಕಡತವನ್ನು ಮಾಯ ಮಾಡಲಾಗಿದೆ. ಆ ಮೂಲಕ ಬಿಡ್ (Bid) ದಾರರಾದ ಸುಧಾಕರ್ ಬಳಿಯಿಂದ ಪಡೆದಿದ್ದ ಇಎಂಡಿ (EMD) ಭದ್ರತಾ ಠೇವಣಿಯ 14.73 ಲಕ್ಷ ರೂಗಳನ್ನು ಸ್ವಹಿತಕ್ಕಾಗಿ ದೋಚಲು ಸಂಚು ನಡೆಸಿರುವುದು ವಿಚಾರಣೆ ಹಾಗೂ ದಾಖಲೆಗಳಿಂದ ಗೊತ್ತಾಗಿದೆ.
ಇನ್ನು ಕೆಂಪೇಗೌಡ (Kempegowda) ಬಸ್ ನಿಲ್ದಾಣದಲ್ಲಿನ ಶೌಚಾಲಯಗಳ ಮಾಸಿಕ ಬಾಡಿಗೆ ಶುಲ್ಕವನ್ನು ಕಡಿಮೆ ಪಾವತಿಸಿಕೊಂಡು ಸಂಸ್ಥೆಗೆ ನಷ್ಟ ಉಂಟು ಮಾಡಿರುವುದು ಕೂಡ ಬಯಲಿಗೆ ಬಂದಿದ್ದು, ಶ್ರೀರಾಮ್ ಮುಲ್ಕವನ್ (Shreeram Mulkavan), ಬಸ್ ನಿಲ್ದಾಣದಲ್ಲಿನ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದಾಗ 4 ಶೌಚಾಲಯಗಳ ಪರವಾನಗಿ ಅವಧಿಯನ್ನು ವಿಸ್ತರಿಸಿದ್ದಾರೆ
ಅಲ್ಲದೆ ಸಂಸ್ಥೆ ನಿಗದಿಪಡಿಸಿದ್ದ ಬಾಡಿಗೆ ಮೊತ್ತಕ್ಕಿಂತ ಕಡಿಮೆ ಹಾಗೂ ಅಲ್ಪ ಮೊತ್ತದ ಬಾಡಿಗೆ ಸಂದಾಯ ಮಾಡಿಕೊಳ್ಳುವ ಕುರಿತು ಸೂಕ್ತ ಅಧಿಕಾರಿಗಳಿಂದ ಅನುಮೋದನೆ ಪಡೆದಿರುವ ಬಗ್ಗೆ ಕಡತಗಳನ್ನು ಪರಿಶೀಲಿಸಿ ಖಚಿತ ಪಡಿಸಕೊಳ್ಳದೆ ಕರ್ತವ್ಯ ಲೋಪವೇಸಗಲಾಗಿದೆ.
ಏಕ ಏಜೆನ್ಸಿಗೆ (Agency) ಬಿಟಿಎಂ ಲೇಔಟ್ ಬಸ್ ನಿಲ್ದಾಣದ ಖಾಲಿ ಜಾಗವನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ ಬಿಎಂಟಿಸಿಯ (BMTC) ಚದರ ಅಡಿಗೆ 46 ನಿಗದಿಪಡಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಎರಡು ಕಂಪನಿಗಳು (Company) ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದವು ಹಾಗಾಗಿ ನಿಗದಿಗಿಂತ ಕಡಿಮೆ ಬೆಲೆಗೆ ಬಿಡ್ ಸಲ್ಲಿಕೆಯಾದ ಕಾರಣ ಆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ಟೆಂಡರ್ (Tender) ಆಹ್ವಾನಿಸುವಂತೆ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರೊಬ್ಬರು ಸೂಚಿಸಿದ್ದರು.
ಭವ್ಯಶ್ರೀ ಆರ್.ಜೆ