ಈ ಊರಲ್ಲಿ ಡೊಳ್ಳು ಹೊಟ್ಟೆ ಇರುವ ಯುವಕರಿಗೆ ಮಾತ್ರ ಹೆಣ್ಣು ಕೊಟ್ಟು ಮದುವೆ ಮಾಡ್ತಾರೆ!

bodi tribes

ಬೋಡಿ ಬುಡಕಟ್ಟು(Bodi Tribes) ಜನಾಂಗದಲ್ಲಿ ಸೌಂದರ್ಯಕ್ಕೆ ವಿಭಿನ್ನವಾದ, ವ್ಯಾಖ್ಯಾನವಿದೆ. ಯುವಕರನ್ನು ಅವರ ದೊಡ್ಡ ಹೊಟ್ಟೆಯ ಆಧಾರದ ಮೇಲೆ ಸ್ಫುರದ್ರೂಪಿ(Beautiful) ಎಂದು ಪರಿಗಣಿಸುವ ಸಮುದಾಯವೊಂದು ಇಥಿಯೋಪಿಯಾ(Ethiopia) ದೇಶದಲ್ಲಿದೆ.

ಈ ದೇಶದ ಒಮೋ ಕಣಿವೆ ಪ್ರದೇಶದಲ್ಲಿ ವಾಸವಾಗಿರುವ ಬೋಡಿ ಬುಡಕಟ್ಟು ಜನಾಂಗದಲ್ಲಿ ಒಬ್ಬ ಯುವಕನ ಹೊಟ್ಟೆ ಎಷ್ಟು ದೊಡ್ಡದೋ ಅವನು ಅಷ್ಟು ಸುರ ಸುಂದರ ಅಂತ ಪರಿಗಣಿಸಲಾಗುತ್ತದೆ. ಯುವಕ ದಢೂತಿಯಾಗಿದ್ದರೆ, ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ, ಹಾಗಂತ ದಪ್ಪಗಿರುವವರೇನು ಮದುವೆಯಾಗದೇ ಉಳಿಯೋದಿಲ್ಲ. ಪ್ರತಿಯೊಂದು ಗಂಡು ಹೆಣ್ಣಿಗೆ ಒಬ್ಬ ಸಂಗಾತಿಯನ್ನು ಮೇಲಿನವನು ಸೃಷ್ಟಿಸಿರುತ್ತಾನೆ ಅಂತ ಎಲ್ಲ ಸಮುದಾಯದವರು ನಂಬುವುದರಿಂದ ಅದು ನಿಶ್ಚಿತವಾಗಿಯೂ ಸಾರ್ವತ್ರಿಕ ಸತ್ಯ. ಆದರೆ ಅಷ್ಟೇ ಸತ್ಯವಾದ ವಿಷಯವೆಂದರೆ, ಯುವತಿಯರ ಆದ್ಯತೆ ಪಟ್ಟಿಯಲ್ಲಿ ದಡೂತಿ ಯುವಕರಿಗೆ ಕೊನೆಯ ಸ್ಥಾನ.


ಆದ್ರೆ ಬೋಡಿ ಜನಾಂಗದಲ್ಲಿ ಅತೀ ದಡೂತಿ ಯುವಕನನ್ನು ವರಿಸಲು ಅಲ್ಲಿನ ಯುವತಿಯರ ನಡುವೆ ಕಾದಾಟ ಶುರುವಾಗುತ್ತದೆ. ನಾ ಮುಂದು ತಾ ಮುಂದು ಅಂತ ಅವನ ಹಿಂದೆ ಸುತ್ತಲಾರಂಭಿಸುತ್ತಾರೆ.
ಹೊಟ್ಟೆ ಬೆಳೆಸಿ ಸ್ಪರ್ಧೆ ಗೆಲ್ಲಲು ಮತ್ತು ಹುಡುಗಿಯರ ಕನಸಿನ ರಾಜನಾಗಲು ಯುವಕರು ಆರು ತಿಂಗಳಿಂದ ತಯಾರಿ ನಡೆಸುತ್ತಾರೆ, ಡುಮ್ಮನಾಗಲು ಸಕಲ ಪ್ರಯತ್ನಗಳನ್ನು ಮಾಡುತ್ತಾರೆ. ಎಲ್ಲರಿಗಿಂತ ಧಡೂತಿಯಾಗಿ ತಯಾರಾಗುವ ಕೆಲಸ ಖಂಡಿತ ಸುಲಭ ಅಲ್ಲ ಅಂತ ಯುವಕರು ಹೇಳುತ್ತಾರೆ. ಅದಕ್ಕಾಗಿ ಅವರು ಆಕಳ ಹಾಲಿನ ಜೊತೆ ಅದರ ರಕ್ತವನ್ನೂ ಕುಡಿಯುತ್ತಾರಂತೆ.


ಪುರುಷರ ವಿಷಯ ಹೀಗಾದರೆ, ಮಹಿಳೆಯರದ್ದು ಮತ್ತೊಂದು ಬಗೆಯ ಅತಿರೇಕ. ಯಾವ ಯುವತಿಯ ದೇಹದ ಮೇಲೆ ಹೆಚ್ಚು ಗಾಯದ ಗುರುತುಗಳಿರುತ್ತವೆಯೋ ಅವಳೇ ಅಲ್ಲಿ ಅತೀ ಸೌಂದರ್ಯವತಿ! ಯುವತಿಯರು ಸುಂದರಿಯೆನಿಸಿಕೊಳ್ಳಲು ಚಾಕು ಮತ್ತು ಬ್ಲೇಡ್​ಗಳಿಂದ ದೇಹದ ಮೇಲೆ ಗಾಯಗಳನ್ನು ಮಾಡಿಕೊಳ್ಳುತ್ತಾರಂತೆ!
ದೇಹದ ಮೇಲೆ ಹೆಚ್ಚು ಗಾಯಗಳನ್ನಿರುವ ಯುವತಿಯರನ್ನು ಯುವಕರು ಇಷ್ಟಪಡುತ್ತಾರೆ. ಹಾಗೆಯೇ, ದೊಡ್ಡ ಹೊಟ್ಟೆಯಿರುವ ಯುವಕನನ್ನು ಯುವತಿಯರು ವರಿಸಲು ಇಷ್ಟಪಡುತ್ತಾರೆ.

Exit mobile version