ಟೈಮ್‌ ಮ್ಯಾಗಜಿನ್‌ನ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ಗೆ ನಂ 1 ಪಟ್ಟ

Bollywood : ಟೈಮ್‌ ಮ್ಯಾಗಜಿನ್‌ನ (Time Magazine) ಅತ್ಯಂತ ಪ್ರಭಾವಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಕಿಂಗ್ ಖಾನ್ ಅಂತನೇ ಹೆಸರು ವಾಸಿಯಾಗಿರುವ ಬಾಲಿವುಡ್ ನಟ ಶಾರುಖ್‌ ಖಾನ್‌ (Bollywood actor Shah Rukh Khan) ವಿಶ್ವದಲ್ಲಿ ಅಗ್ರಸ್ಥಾನ (Bollywood actor ShahRukhKhan) ಪಡೆದುಕೊಂಡಿದ್ದಾರೆ.

2023ರ 100 ಫ್ರಭಾವಿಗಳ ಪಟ್ಟಿಯಲ್ಲಿ 12 ಲಕ್ಷ ಮತಗಳ ಪೈಕಿ ಶಾರುಖ್‌ ಖಾನ್‌ಗೆ ಸುಮಾರು 48 ಸಾವಿರ ಮತಗಳು ಬಂದಿದೆ.

ಇದು ಶಾರುಖ್ ಖಾನ್ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜಿನ್​ನ ಓದುಗರ ಸಮೀಕ್ಷೆ ಆಧಾರದ ಮೇಲೆ ಲಿಸ್ಟ್ ಬಿಡುಗಡೆ ಮಾಡಲಾಗಿತ್ತು.

ಸಿನಿಮಾ ರಾಜಕೀಯ (Politics) ಕ್ಷೇತ್ರ ಉದ್ಯಮ ಕ್ಷೇತ್ರ ಹಾಗೆ ಕ್ರೀಡೆ ಸಾಮಾಜಿಕ ಕಾರ್ಯ ಮುಂತಾದ ಕ್ಷೇತ್ರಗಳಲ್ಲಿ ಸಾಕುಷ್ಟು ಘಟಾನುಘಟಿಗಳನ್ನೂ ಮೀರಿಸಿ ಶಾರುಖ್​ ಖಾನ್​ (Bollywood actor ShahRukhKhan) ವಿಶ್ವದಲ್ಲಿ ನಂಬರ್​ ಒನ್​ ಆಗಿದ್ದಾರೆ.

ಟೈಮ್​ ಮ್ಯಾಗಜಿನ್​ನ 12 ಲಕ್ಷಕ್ಕೂ ಅಧಿಕ ಓದುಗರು ಈ ಬಾರಿ ವೋಟ್​ ಮಾಡಿದ್ದರು 100 ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಯಾವ ಸೆಲೆಬ್ರಿಟಿ ಎಷ್ಟನೇ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ಓದುಗರ ಸಮೀಕ್ಷೆಯ ಮೂಲಕ ನಿರ್ಧರಿಸಲಾಗಿತ್ತು.

https://youtu.be/gDedYkGW1OE

ಅದರ ಪ್ರಕಾರ ಶೇ.4ರಷ್ಟು ಓದುಗರು ಶಾರುಖ್​ ಖಾನ್​ಗೆ ವೋಟ್​ ಹಾಕುವ ಮೂಲಕ ನಂಬರ್​ ಸ್ಥಾನವನ್ನು ಕೊಟ್ಟಿದ್ದಾರೆ .

ಇದನ್ನೂ ಓದಿ: https://vijayatimes.com/support-for-a-political-party/

ವಿಶ್ವದ ಘಟಾನುಘಟಿಗಳನ್ನು ಹಿಂದಿಕ್ಕಿರುವುದು ಬಹಳಷ್ಟು ಅಚ್ಚರಿ ಮೂಡಿಸಿದೆ ಎಲಾನ್ ಮಾಸ್ಕ್ (Elon Musk), ಮೆಸ್ಸಿ (Messi)

ಅವರಂದ ವಿಶ್ವ ಮಟ್ಟದ ವ್ಯಕ್ತಿಗಳನ್ನು ಕಿಂಗ್ ಖಾನ್ ಹಿಂದಿಕ್ಕಿದ್ದಾರೆ. ಒಟ್ಟಾರೆ ವಿಶ್ವದಲ್ಲಿ ಕಿಂಗ್ ಖಾನ್ ಗೆ ವಿಶ್ವದಲ್ಲಿ ಪ್ರಬಾವಿಗಳ ಪಟ್ಟಿಯಲ್ಲಿ ನಂಬರ ಒನ್ ಪಟ್ಟ ಸಿಕ್ಕಿದ್ದು ಅವರ ಅಭಿಮಾನಿಗಳ ಪಾಲಿಗೆ ‌ಸಂತಸವೆನಿಸಿದೆ.

Exit mobile version