ಪ್ರತಿ ಸರ್ಕಾರಿ ಕಾಲೇಜಿನಲ್ಲಿ ನೇತಾಜಿ, ರಾಯಣ್ಣ ಪ್ರತಿಮೆ ಸ್ಥಾಪಿಸಿ : ಸಿಎಂ ಬೊಮ್ಮಾಯಿ ಆದೇಶಕ್ಕ ಭಾರೀ ಟೀಕೆ

Bengaluru : ರಾಜ್ಯದ ಪ್ರತಿ ಸರ್ಕಾರಿ ಕಾಲೇಜಿನಲ್ಲಿ ನೇತಾಜಿ(Nethaji Subhash chandra Bose) ಮತ್ತು ರಾಯಣ್ಣ( Sangolli Rayanna) ಅವರ ಪ್ರತಿಮೆಯನ್ನು ಸ್ಥಾಪಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ(Bommai statement about statue) ಅವರು ಆದೇಶ ಹೊರಡಿಸಿದ್ದಾರೆ. ಆದ್ರೆ ಈ ಆದೇಶ ಈಗ ಭಾರೀ ಟೀಕೆಗೂ ಒಳಗಾಗಿದೆ.

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಪ್ರಾಧ್ಯಾಪಕರುಗಳು ಇಲ್ಲದೆ ಕಾಲೇಜುಗಳಲ್ಲಿ ಪಾಠವೇ ನಡೆಯುತ್ತಿಲ್ಲ. ಯಾವುದೇ ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣಾವಧಿಗೆ ಪ್ರಾಂಶುಪಾಲರ ನೇಮಕವೇ ಆಗಿಲ್ಲ.

ರಾಜ್ಯದ ಕಾಲೇಜು ಶಿಕ್ಷಣದ ಗುಣಮಟ್ಟ ತೀರಾ ಕುಸಿಯುತ್ತಿದೆ. ಆದ್ರೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇದ್ಯಾವುದೂ ಕಣ್ಣಿಗೆ ಬೀಳುತ್ತಿಲ್ಲ.

ಬದಲಾಗಿ ಅವರು ಪ್ರತಿಮೆ ಸ್ಥಾಪನೆಗೆ ಮುಂದಾಗಿರೋದು ನಿಜವಾಗ್ಲೂ ಹಾಸ್ಯಾಸ್ಪದ ಅಂತ ಶಿಕ್ಷಣ ತಜ್ಞರು ಟೀಕಿಸಿದ್ದಾರೆ.

74ನೇ ಗಣರಾಜ್ಯೋತ್ಸವದ(Republic day) ಸಂದರ್ಭದಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ (Bommai statement about statue) ಅವರು ರಾಜ್ಯದ ಪ್ರತಿ ಸರ್ಕಾರಿ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಸ್ಥಾಪಿಸಲು ನಿರ್ದೇಶನ ನೀಡುವುದಾಗಿ ಹೇಳಿದ್ದರು.

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಪುಣ್ಯಸ್ಮರಣೆ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,

ಸ್ವಾತಂತ್ರ್ಯಕ್ಕಾಗಿ ಯಾರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂಬುದನ್ನು ತಮ್ಮ ಮಕ್ಕಳಿಗೆ ಇಂದು ತಿಳಿ ಹೇಳಬೇಕು.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ, ಕಟ್ಟಡ ಕಾರ್ಮಿಕರಿಗೆ 50,000 ಧನಸಹಾಯ ಘೋಷಣೆ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ

ಮಕ್ಕಳನ್ನು ಪ್ರೇರೇಪಿಸುವ ಶಕ್ತಿಗಳನ್ನು ಕಂಡುಹಿಡಿಯುವಲ್ಲಿ ಅವರು ತೊಡಗಿಸಿಕೊಳ್ಳಬೇಕು. ಬೆಳಗಾವಿ(Belgaum) ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡುವ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು,

ಸಂಗೊಳ್ಳಿ ರಾಯಣ್ಣ ಅವರ ಚೈತನ್ಯ ಉಳಿದಿರುವವರೆಗೂ ಭಾರತ ಸುರಕ್ಷಿತ ಎಂದು ಹೇಳಿದ್ದರು.

ಸಂಗೊಳ್ಳಿ ರಾಯಣ್ಣ ಅವರು ಬದುಕಿದ ಅವಧಿಯಲ್ಲೂ ಹಾಗೂ ಅವರ ಸಾವಿನ ನಂತರವೂ ಅವರು ನಮ್ಮ ಜೊತೆಯೇ ಇದ್ದಾರೆ ಎಂದು ಸಿಎಂ(CM) ಹೇಳಿದರು.

ಅವರ ಪುಣ್ಯಸ್ಮರಣೆಯ ಅಂಗವಾಗಿ ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಇಡಲಾಗಿದ್ದು,

ಅವರ ಪ್ರತಿಮೆಯನ್ನು ಸ್ಥಾಪಿಸುವುದು ಒಳ್ಳೆಯದು. ರಾಯಣ್ಣ ಪರಮೋಚ್ಚ ದೇಶಭಕ್ತರಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮ(Kithuru Raani Chennamma) ಅವರೊಂದಿಗೆ ಸೇರಿ ಇಡೀ ನಾಡಿನಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿದವರು.

ರಾಯಣ್ಣ ಅವರು ಆಗಸ್ಟ್ 15 ರಂದು ಜನಿಸಿದ್ದು, ಜನವರಿ 26 ರಂದು ಅವರನ್ನು ಗಲ್ಲಿಗೇರಿಸಲಾಯಿತು, ಇದು ದೇಶದಲ್ಲಿ ಮರೆಯಲಾಗದ ಎರಡು ದಿನಗಳು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮದುವೆಗೆ ಒಪ್ಪಿಗೆ ನೀಡಿದ ಕರ್ನಾಟಕ ಹೈಕೋರ್ಟ್

ಕಾಲೇಜುಗಳಲ್ಲಿ ಪ್ರತಿಮೆ ಸ್ಥಾಪಿಸುವುದರಿಂದ ಕಾಲೇಜು ಮಕ್ಕಳಲ್ಲಿ ದೇಶ ಭಕ್ತಿ ಉಕ್ಕುವುದಿಲ್ಲ. ಬದಲಾಗಿ ಸಂಗೊಳ್ಳಿ ರಾಯಣ್ಣನ ಪಠ್ಯವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಓದಿಸಬೇಕು.

ಸಂಗೋಳ್ಳಿರಾಯಣ್ಣನ ತ್ಯಾಗ ಬಲಿದಾನದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಸಂಗೊಳ್ಳಿ ರಾಯಣ್ಣ ಎಂಥಾ ಮಹಾನ್‌ ಹೋರಾಟಗಾರ ಅನ್ನೋದು ಮಕ್ಕಳಿಗೆ ವಿವರಿಸಬೇಕು.

ಅದನ್ನು ಬಿಟ್ಟು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರತಿಮೆ ಸ್ಥಾಪಿಸಿದ್ರೆ ಅದು ಮತ್ತೊಂದು ರಾಜಕೀಯಕ್ಕೆ ಸಂಘರ್ಷಕ್ಕೆ ನಾಂದಿಯಾಗುತ್ತೆ.

ಮೊದಲು ಮುಖ್ಯಮಂತ್ರಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಿ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಕಲ್ಪಿಸಲಿ. ಕಾಲೇಜು ಓದಿದ ಮಕ್ಕಳಿಗೆ ಉದ್ಯೋಗ ಕೊಡಿಸಲಿ ಅನ್ನೋದು ಶಿಕ್ಷಣ ತಜ್ಞರ ವಾದವಾಗಿದೆ.

Exit mobile version