ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತಿಸಲು ಸರ್ಕಾರ ಚಿಂತನೆ

ಬೆಂಗಳೂರು ಅ 19 : ಬಿಪಿಎಲ್‌ ಕಾರ್ಡ್‌ನ್ನು ಎಪಿಎಲ್‌ಗೆ ಪರಿವರ್ತಿಸುವತ್ತ ಸರ್ಕಾರ ಚಿಂತನೆ ನಡೆಸಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳ ಹಂಚಿಕೆ ಬಂದ್ ಆಗಿದ್ದು, ಸದ್ಯ ಯಾರೂ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸಿದವರಿಗೆ ಕಾರ್ಡ್‌ಗಳು ಕೂಡ ಸಿಗುತ್ತಿಲ್ಲ. ಹೀಗಾಗಿ ರಾಜ್ಯಾದಂತ ಸುಮಾರು ೪.೫೦ಲಕ್ಷಕ್ಕೂ ಅಧಿಕ ಮಂದಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಷ್ಟೇ ಅಲ್ಲ. ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ೧ ಲಕ್ಷಕ್ಕ ಹೆಚ್ಚು ಜನ ಕಾಯುತ್ತಿದ್ದು, ರೈತರಿಗೆ ಬಿಪಿಎಲ್‌ ಕಾರ್ಡ ಸಿಗದೆ ತೀವ್ರ ಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಹತ್ತು ವರ್ಷಗಳಿಂದ ರೈತರಿಗೆ ಬೆಳೆಗಳು ಕೈ ಸೇರಿಲ್ಲ. ಸಕಾಲಕ್ಕೆ ಮಳೆಯಾಗಿ ಸಮೃದ್ಧಿ ಬೆಳೆಯಾದರೆ ರೈತರು ಯಾರನ್ನು ಕೈ ಚಾಚುವುದಿಲ್ಲ. ರೈತರೇ ದೇಶಕ್ಕೆ ಅನ್ನ ಹಾಕುತ್ತಾರೆ. ಆದರೆ ಮಳೆ ಬೆಳೆ ಬಾರದೆ ರೈತರು ಸಾಲ ಸುಳಿಗೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಅನ್ನ ಭಾಗ್ಯ ಪಡಿತರ ಚೀಟಿ ಕಿತ್ತುಕೊಳ್ಳುವುದು ಎಷ್ಟು ಸರಿ? ಎಂದು ರೈತರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ರೈತರು ಬಿತ್ತನೆ ಮಾಡಿದ ಬೆಳೆ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ಹಾಕಿದ ಬಂಡವಾಳ ಕೈ ಸೇರದ ಸತತ ಬರಗಾಲಕ್ಕೆ ತುತ್ತಾಗುವ ರೈತರಿಗೆ ಸರಕಾರ ಮತ್ತೊಂದು ಬರೆ ಎಳೆಯಲು ಮುಂದಾಗಿರುವುದು ರೈತರಿಗೆ ಮಾರಕವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರು 7 ಎಕರೆ ಗಿಂತ ಹೆಚ್ಚಿಗೆ ಭೂಮಿಯನ್ನು ಹೊಂದಿದ ರೈತರ ಅನ್ನಭಾಗ್ಯ, ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂಬುವುದು ರೈತರ ಅಳಲಾಗಿದೆ.

Exit mobile version