ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಗೊಂದಲಕ್ಕೆ ಬ್ರೇಕ್‌; ಗ್ರೇಡ್‌ ಬದಲು ಅಂಕ ಪರಿಗಣನೆ

ಬೆಂಗಳೂರು, ಜೂ. 19:  ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೇನೋ ಪರೀಕ್ಷೆ ಇಲ್ಲ. ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಸ್ ಗೆ ಸರ್ಕಾರ ನಿರ್ಧರಿಸಿದೆ. ಆದ್ರೆ ಫಲಿತಾಂಶವನ್ನ ಯಾವ ರೀತಿ ಪ್ರಕಟಿಸಬೇಕು ಅಂತ ಶಿಕ್ಷಣ ಇಲಾಖೆ ಇಕ್ಕಟಿಗೆ ಸಿಲುಕಿತ್ತು. ಈಗ ಈ ಎಲ್ಲಾ ಗೊಂದಲಗಳಿಗೆ ಪಿಯು ಮಂಡಳಿ ಬ್ರೇಕ್ ಹಾಕಿದೆ. ದ್ವಿತೀಯ ಪಿಯುಸಿ ಫಲಿತಾಂಶ ವಿಚಾರದಲ್ಲಿ ಗೊಂದಲಗಳ ಮೇಲೆ ಗೊಂದಲಗಳು. ಫಲಿತಾಂಶ ನೀಡುವ ವಿಚಾರದಲ್ಲಿ ದಿನಕ್ಕೊಂದು  ಬದಲಾವಣೆಗಳು ನಡೆಯುತ್ತಿವೆ. ಮೊದಲು A, B, C ಅಂತ ಗ್ರೇಡ್ ಮೂಲಕ ವಿದ್ಯಾರ್ಥಿಗಳನ್ನು ಪ್ರೊಮೋಟ್ ಗೆ ಮುಂದಾಗಿದ್ದ ಶಿಕ್ಷಣ ಇಲಾಖೆ ಈಗ ಫಲಿತಾಂಶಕ್ಕೆ ಮತ್ತೊಂದು ಮೇಜರ್ ಸರ್ಜರಿ ಮಾಡಿದೆ.

ಹಳೇ ಪದ್ಧತಿಯನ್ನೇ ಅಂದ್ರೆ, ಈ ಬಾರಿ ಗ್ರೇಡ್ ಬದಲು ಅಂಕಗಳ ಪರಿಗಣನೆಗೆ ತೆಗೆದುಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ದೃಷ್ಟಿಯಿಂದ ಈ ಇಲಾಖೆ ಈ ತೀರ್ಮಾನಕ್ಕೆ ಬಂದಿದ್ದು, ದ್ವಿತೀಯ ಪಿಯುಸಿ ಫಲಿತಾಂಶ ನೀಡುವ ಸಂಬಂಧ‌ ಈಗಾಗಲೇ 12 ಜನರ ತಜ್ಞರ ಸಮಿತಿ ರಚನೆ ಸಮಿತಿಯಲ್ಲಿ ಈ ಕುರಿತು ಸಹಮತ ದೊರೆತ ಕಾರಣ ಅಂಕಗಳನ್ನ ಪರಿಗಣನೆಗೆ ತೆಗೆದುಕೊಂಡು ಪಾಸ್ ಮಾಡಲು ಮುಂದಾಗಿದೆ.

ಈಗಾಗಲೇ ಶಿಕ್ಷಣ ತಜ್ಞರು ಹಾಗೂ ಸಮಿತಿ ಸದಸ್ಯರ ಚರ್ಚೆ‌ ನಡೆಸಲಾಗಿದೆ. ಕೊರೋನಾ ಕಾರಣಕ್ಕೆ ಪಿಯುಸಿ ಪರೀಕ್ಷೆ ಇಲ್ಲದೆ ರೆಗ್ಯುಲರ್ ವಿದ್ಯಾರ್ಥಿಗಳು ಪಾಸ್ ಮಾಡಲಾಗಿದೆ. ಈ ತಿಂಗಳ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಫಲಿತಾಂಶ ನೀಡಲು ಇಲಾಖೆ ನಿರ್ಧರಿಸಿತ್ತು. ಆದ್ರೆ ದ್ವಿತೀಯ ಪಿಯು ರಿಪೀಟರ್ಸ್ ನಮ್ಮನ್ನೂ ಪಾಸ್ ಮಾಡಿ ಕೋರ್ಟ್ ಕೋರ್ಟ್ ಮೊರೆ ಹೋದ ಬಳಿಕ ಜುಲೈ 5 ರ ವರೆಗೆ ದ್ವಿತೀಯ ಪಿಯು ಫಲಿತಾಂಶ ತಡೆಹಿಡಿಯುವಂತೆ ಹೈ ಕೋರ್ಟ್ ಸೂಚಿಸಿದೆ.

ಈ ಹಿಂದೆ ಗ್ರೇಡಿಂಗ್ ಮೂಲಕ ಫಲಿತಾಂಶ ನೀಡುವುದಾಗಿ ಶಿಕ್ಷಣ ಸಚಿವ ಘೋಷಿಸಿದ್ದರು. ಆದರೀಗ ಫಲಿತಾಂಶದಲ್ಲಿ ಬದಲಾವಣೆ ಮಾಡಲಾಗಿದ್ದು, ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ತಯಾರಿ ನಡೆಯುತ್ತಿದೆ.

ಇನ್ನು ದ್ವಿತೀಯ ಪಿಯುಸಿ ಫಲಿತಾಂಶವನ್ನ ಎಸ್​​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿ ಶೇಕಡಾವಾರು ಮೂಲಕ ಈ ಬಾರಿ ಫಲಿತಾಂಶ ನಿಗದಿ ಮಾಡಲಿದ್ದಾರೆ. ಗ್ರೇಡಿಂಗ್ ನೀಡಿದ್ರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವ ಹಿನ್ನಲೆಯಲ್ಲಿ, ಉದ್ಯೋಗ ಪಡೆಯಲು ಅರ್ಹ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತೆ. ಹಳೆ ಪದ್ಧತಿಯಲ್ಲಿಯೇ 2020ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಫಲಿತಾಂಶವನ್ನ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಗ್ರೇಡ್ ಬದಲಿಗೆ ಅಂಕಗಳನ್ನ ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಪಿಯು ಫಲಿತಾಂಶಕ್ಕೆ ಮಂಡಳಿ ಮತ್ತೊಂದು ಸರ್ಜರಿ ಮಾಡಿದೆ. ಆದ್ರೆ ಜುಲೈ 5ರವರೆಗೆ ದ್ವಿತೀಯ ಪಿಯುಸಿ ಫಲಿತಾಂಶವನ್ನ ಪ್ರಕಟಿಸದಂತೆ ಹೈ ಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಹೀಗಾಗಿ ಫಲಿತಾಂಶ ನೀಡಲು ಏನೆಲ್ಲ ಮಾನದಂಡಗಳನ್ನ ಅನುಸರಿಬೇಕು ಅಂತ ಇಲಾಖೆ ತೆರೆಮರೆಯಲ್ಲಿ ನಾನಾ ಕಸರತ್ತು ನಡೆಸುತ್ತಿದೆ.

Exit mobile version