ಮಕ್ಕಳಲ್ಲಿ ಹೆಚ್ಚಾದ ಉಸಿರಾಟ ಸಮಸ್ಯೆ: ನ್ಯೂಮೋನಿಯಾ 20% ಹೆಚ್ಚಳ, ಪೋಷಕರೇ ಎಚ್ಚರ!

Bengaluru: ಚಳಿಗಾಲ ಬರುತ್ತಿದ್ದಂತೆ ಜ್ವರ, ಕೆಮ್ಮು, ಸುಸ್ತು, ನೆಗಡಿ ಸಾಮಾನ್ಯ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Breathing Problems in Children) ಹೆಚ್ಚಾಗಿ ಮಕ್ಕಳಲ್ಲಿ ಉಸಿರಾಟದ

ಸಮಸ್ಯೆ ಹಾಗೂ ನ್ಯೂಮೋನಿಯಾ (Pneumonia) ಪ್ರಕರಣಗಳು ಹೆಚ್ಚಾಗಿ ಕಂಡು ಬರುತಿದ್ದು, ಈ ಸಮಸ್ಯೆಗಳಿಂದ ಆಸ್ಪತ್ರೆಗೆ ಮಕ್ಕಳು ದಾಖಲಾಗುತ್ತಿದ್ದಾರೆ. ಇನ್ನು ನಗರದಲ್ಲಿ ನ್ಯೂಮೋನಿಯಾ 20%

ಹೆಚ್ಚಳವಾಗಿದ್ದು, ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ (Breathing Problems in Children) ನಿಗಾವಹಿಸುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ.

ಚೀನಾ ಮತ್ತು ಅಮೇರಿಕಾ (America) ಬೆನ್ನಲ್ಲೇ ಇದೀಗ ನಮ್ಮ ರಾಜಧಾನಿ ಬೆಂಗಳೂರಿನಲ್ಲಿಯು ನ್ಯೂಮೋನಿಯಾ ಆತಂಕ ಹೆಚ್ಚಾಗಿದ್ದು . ಕಳೆದ ಎರಡು ವಾರದಿಂದ ನಗರದ ಮಕ್ಕಳಲ್ಲಿ (Children)

ಉಸಿರಾಟದ ಸಮಸ್ಯೆ, ವೈರಲ್ ನ್ಯುಮೋನಿಯಾ ಹೆಚ್ಚಾಗುತ್ತಿದ್ದು ಆಸ್ಪತ್ರೆಗೆ ಒಂದು ದಿನಕ್ಕೆ ಮೂರರಿಂದ ನಾಲ್ಕು ವೈರಲ್ ನ್ಯುಮೋನಿಯಾ ಕೇಸ್​ಗಳು ದಾಖಲಾಗುತ್ತಿವೆ. ರಾಜಧಾನಿಯಲ್ಲಿ ಸುಮಾರು

25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗುತ್ತಿವೆ.ಇದು 1 ರಿಂದ 15 ವರ್ಷದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಚೀನಾ, ಅಮೇರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 3 ವರ್ಷ ದಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ನ್ಯುಮೋನಿಯಾ ಸೋಂಕು ಪತ್ತೆಯಾಗುತ್ತಿದ್ದು. ಚೀನಾ (China) ದಲ್ಲೂ

ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು

ಅದೆ ರೀತಿ ಬೆಂಗಳೂರಿನ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ ಹಾಗಾಗಿ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ.

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
ನ್ಯೂಮೋನಿಯಾ ಕೇಸ್ 20% ಹೆಚ್ಚಳ.ಇಂದಿರಾಗಾಂಧಿ (Indiraghandhi) ಮಕ್ಕಳ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 20% ಹೆಚ್ಚಳವಾಗಿದೆ. ಅಲ್ಲದೆ ಇದು 8 ರಿಂದ 10 ವರ್ಷದ

ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದ್ದು ಪ್ರತಿ ದಿನ 5 ರಿಂದ 6 ಹೊಸ ಕೇಸ್​ಗಳು ದಾಖಲಾಗುತ್ತಿವೆ.

ನ್ಯುಮೋನಿಯಾ ಸೋಂಕಿನ ಲಕ್ಷಣಗಳು:-
ಜ್ವರ
ಕೆಮ್ಮು,
ಸುಸ್ತು,
ಉಸಿರಾಟದ ಸಮಸ್ಯೆ
ಈ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ

ಇದನ್ನು ಓದಿ: 3ಡಿ ವರ್ಷನ್​ನಲ್ಲಿ ದೂಳೆಬ್ಬಿಸಲು ಬರ್ತಿದೆ ಹೃತಿಕ್​ ರೋಷನ್​ ನಟನೆಯ ‘ಫೈಟರ್​’ ಸಿನಿಮಾ

Exit mobile version